Blog

ಪ್ರಿನ್ಸಿಪಾಲ್ ಸಾಹೇಬರ ಸಾವಯವ ಸವಾರಿ..!

ಇವರು ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕಿನ ಪ್ರತಿಷ್ಠಿತ ಸರಸ್ವತಿ ವಿದ್ಯಾಸಂಸ್ಥೆಯ ಪ್ರಿನ್ಸಿಪಾಲ್ ಆಗಿದ್ದವರು.  ಚುಂಚನಗಿರಿ ಮಠದ ಅಧೀನದಲ್ಲಿ ಬರುವ ತಾಲ್ಲೂಕಿನ ವಿದ್ಯಾಸಂಸ್ಥೆಗಳಿಗೆ ಆಡಳಿತಾಧಿಕಾರಿಯಾಗಿದ್ದವರು. ಇವರ ಬಗ್ಗೆ ಇಡೀ ತಾಲ್ಲೂಕಿನಲ್ಲಿ ಗೌರವ ಭಾವವಿದೆ. ಇಂಥ ಉನ್ನತ ವ್ಯಕ್ತಿತ್ವದವರು ತಮ್ಮ ಭೂಮಿಯನ್ನು ವಿಷಮುಕ್ತ ಮಾಡುವ ಸಂಕಲ್ಪದೊಂದಿಗೆ ಕಳೆದ ಒಂದೂವರೆ ವರ್ಷದಿಂದ ಸಾವಯವ ಕೃಷಿಯನ್ನು ಮಾಡುತಿದ್ದಾರೆ.

     ಇವರ ಹೆಸರು ಆನಂದರಾಜ್. ತಾಲ್ಲೂಕಿನ ಡಿ. ಕಲ್ಕೆರೆ ಗ್ರಾಮದವರು. ಇವರ ತೋಟಕ್ಕೆ ರೈತರ ಸಂಜೀವಿನಿಯಾದ ಡಾ. ಸಾಯಿಲ್ ತಂಡ ಭೇಟಿ ನೀಡಿತು. ಸಾಯಿಲ್ ಡಾಕ್ಟರ್ ಕುಮಾರಿ ಶಿಲ್ಪ ಹಾಗೂ ತುರುವೇಕೆರೆಯ ಪ್ರತಿನಿಧಿ ಶ್ರೀನಿವಾಸ್ ತೋಟವನ್ನು ಕೂಲಂಕುಷವಾಗಿ ಪರಿಶೀಲಿಸಿದರು.

ಕೃಷಿಯ ಬಗ್ಗೆ ವಿಶೇಷವಾದ ಕಾಳಜಿ ಹಾಗೂ ಜ್ಞಾನವನ್ನು ಹೊಂದಿರುವ ಆನಂದರಾಜ್ ವರು ತೆಂಗು, ಅಡಿಕೆ, ಬಾಳೆ, ನುಗ್ಗೆ, ನೇರಳೆ, ನಿಂಬೆ, ಇನ್ನೂ ಮುಂತಾದ ಹಣ್ಣಿನ ಗಿಡಗಳನ್ನು ಬೆಳೆಸಿದ್ದಾರೆ. ತೆಂಗಿನ ಮರಗಳಿಗೆ ಕಾಳುಮೆಣಸು ಬೆಳೆಸಲು ಪ್ರಯತ್ನ ಪಟ್ಟಿದ್ದಾರೆ. ಏಲಕ್ಕಿ ಗಿಡಗಳೂ ಸಾಕಷ್ಟಿವೆ. ಊರಿನ ಮುಖಂಡರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮಣ್ಣಿನ ಭೌತಿಕ, ರಾಸಾಯನಿಕ ಮತ್ತು ಜೈವಿಕ ಪರಿಸರದ ಮಹತ್ವವನ್ನು ತಿಳಿಸಲಾಯಿತು. ತೆಂಗು ಮತ್ತು ಅಡಿಕೆ ಬುಡದಲ್ಲಿ ಭೂಮಿಯನ್ನು ಅಗೆಸಿ ಬೇರುಗಳ ರಚನೆಯನ್ನು ತೋರಿಸಿ, ತಂತುಬೇರುಗಳ ಮಹತ್ವ ಮತ್ತು ಕಾರ್ಯಗಳನ್ನು ವಿವರಿಸಲಾಯಿತು.

 

ನೀರನ್ನು ಡ್ರಿಪ್ ನಲ್ಲಿ ಬಿಟ್ಟರೆ ಉತ್ತಮ ಮತ್ತು ನೀರು ಉಳಿತಾಯವಾಗುತ್ತದೆ. ಹಾಗೆಯೇ ನೀರಿನ ನಿರ್ವಹಣೆಯನ್ನು ಬಹಳ ಜಾಣ್ಮೆಯಿಂದ ಮಾಡಬೇಕೆಂದು ತಿಳಿಹೇಳಲಾಯಿತು. ಚಿಕ್ಕ ಅಡಿಕೆಯ ಗಿಡಗಳಿಗೆ ಕೆಂಪು ತಿಗಣೆಯ ಕಾಟ (red spindle bug) ಅಧಿಕವಾಗಿತ್ತು. ಅದರ ನಿರ್ವಹಣೆಗಾಗಿ ಬೇವಿನ ಎಣ್ಣೆಯನ್ನು ಸಿಂಪಡಿಸಲು ಸೂಚಿಸಲಾಯಿತು.

 

ಮುಂಗಾರಿನಲ್ಲಿ ಮತ್ತು ಹಿಂಗಾರಿನಲ್ಲಿ ಹಸಿರೆಲೆ ಗೊಬ್ಬರಗಳಾದ ಅಪ್ಸೆಣಬು, ಡಯಾಂಚ, ಹುರುಳಿ ಮುಂತಾದವನ್ನು ಹಾಕಿಕೊಂಡು ಅದನ್ನು ಮಣ್ಣಿಗೆ ಸೇರಿಸುವುದರಿಂದ ಮಣ್ಣಿನ ಸಾವಯವ ಸಂಪತ್ತು ವೃದ್ಧಿಸಿ ಮಣ್ಣಿನಲ್ಲಿ ನೀರನ್ನು ಹಿಡಿದಿಡುವ ಶಕ್ತಿ ಹೆಚ್ಚಾಗುತ್ತದೆ.

ಡಾ. ಸಾಯಿಲ್ ಉಪಯೋಗಿಸುವುದರಿಂದ ಜೈವಿಕ ಸಂಪತ್ತು ವೃದ್ಧಿಯಾಗಿ ಮಣ್ಣಿನ ಭೌತಿಕ, ರಾಸಾಯನಿಕ ಗುಣಗಳು ಉತ್ತಮವಾಗುತ್ತವೆ. ಪರಿಣಾಮವಾಗಿ ಮಣ್ಣು ಫಲವತ್ತಾಗುತ್ತದೆ. ನಂತರ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಲು ಸಲಹೆ ನೀಡಲಾಯಿತು. ಬುದ್ಧಿವಂತ ರೈತರಾದ ಆನಂದರಾಜ್ ತೋಟದಲ್ಲಿ ಜೇನು ಕೃಷಿಯನ್ನು ಅಳವಡಿಸಿಕೊಂಡಿದ್ದಾರೆ. ಪರಿಣಾಮವಾಗಿ ತೆಂಗು ಮತ್ತು ಅಡಿಕೆಯಲ್ಲಿ ಇಳುವರಿಯು ಶೇಕಡ 25 ರಿಂದ 30 ರಷ್ಟು ಹೆಚ್ಚಾಗಿದೆ. ಮಳೆಗಾಲ ಬಂದಾಗ ತೆಂಗಿನಮರಕ್ಕೆರಡು ಗ್ಲಿರಿಸಿಡಿಯ (ಗೊಬ್ಬರದ ಗಿಡ) ಹಾಕಲು ಸಲಹೆ ನೀಡಲಾಯಿತು.

ತೆಂಗಿನ ಮರಗಳಿಂದ ಬೀಳುವ ಗರಿ, ಕುರಂಬಳೆ, ಎಡೆಮೊಟ್ಟೆ ಮುಂತಾದ ತ್ಯಾಜ್ಯಗಳನ್ನು ಸಣ್ಣಸಣ್ಣದ್ದಾಗಿ ಕತ್ತರಿಸಿ ಆ ಮರದ ಬುಡದಲ್ಲಿಯೇ ಹೊದಿಕೆಯಾಗಿ ಮಾಡಲು ಸಲಹೆ ನೀಡಲಾಯಿತು.

ಪ್ರಖ್ಯಾತ ಸಾವಯವ ಕೃಷಿ ತಜ್ಞರಾದ ಡಾ. ಹುಲ್ಲುನಾಚೆಗೌಡರ ಸಲಹೆಯಂತೆ ಪ್ರತಿಯೊಂದು ಮರಗಳ ಸುತ್ತಲೂ ಒಂದೊಂದು ತಿಪ್ಪೆಯನ್ನು ಮಾಡಲು ಸಲಹೆ ನೀಡಲಾಯಿತು. ನಂತರ ಹಾಲಪ್ಪ, ಪ್ರೇಕುಮಾರ್, ನಾಗರಾಜ್ ಮತ್ತು ಭೈರಪ್ಪ ರವರ ತೋಟಗಳಿಗೆ ಭೇಟಿ ನೀಡಿ ಅವರೆಲ್ಲರಿಗೂ ಉಪಯುಕ್ತ ಮಾಹಿತಿ ನೀಡಲಾಯಿತು.

 

ವರದಿ: ಶ್ರೀನಿವಾಸ್ ರೈತ, ಉನ್ನತಿ ಎಂಟರ್ ಪ್ರೈಸಸ್

ಡಾ. ಸಾಯಿಲ್ ನ ಅಧಿಕೃತ ಮಾರಾಟಗಾರರು, ತುರುವೇಕೆರೆ ಮತ್ತು ತಿಪಟೂರು.  ಫೋನ್ – 8197443132

ಅಡಿಕೆ, ತೆಂಗಿನ ತೋಟಗಳಲ್ಲಿ ಇದನ್ನು ಬೆಳೆದರೆ ಲಕ್ಷ ಲಕ್ಷ ಆದಾಯ | ಪ್ರಾಣಿಗಳ ಕಾಟವಿಲ್ಲ

https://www.youtube.com/watch?v=X5fSrY0G3NQ&t=639s

 

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233

ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:

https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE

► Microbi Agrotech Website: http://www.microbiagro.com

► Subscribe to Microbi Agrotech: https://youtube.com/c/MICROBIAGROTECHPVTLTDKANNADA

► Like us on Facebook: https://www.facebook.com/microbiagrotech/

 

#microbitv  #microbiagrotech  #agriculturalnewschannel  #agrinews  #Drsoil  #doctorsoil  #drsoilnearme  



Blog




Home    |   About Us    |   Contact    |   
microbi.tv | Powered by Ocat Web Promotion Service in India | Promoting Websites through Ocat Content Marketing