ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಬಣ್ಣಳ್ಳಿ ಗ್ರಾಮದ ಕೃಷಿಕ ರವಿ ಶಂಕರ್ ಅವರು, ತಮ್ಮ 4 ಎಕರೆ ಕಬ್ಬು ಬೆಳೆಯ ಮಧ್ಯೆ ಸೂಕ್ತವಾದ ಅಂತರ ಕಲ್ಪಿಸಿ ತಂತ್ರ ಹೂಡಿದ್ದಾರೆ. ಹಿಂದೆ ಕಬ್ಬು ಬೆಳೆಗೆ ಮಾಡಿದ ಖರ್ಚನ್ನ ಹಿಂದಿರುಗಿಸಿಕೊಂಡಿದ್ದಲ್ಲದೆ, ಮುಂದೆ ಆಗುವ ಖರ್ಚನ್ನೂ ನೀಗಿಸಲು ಉತ್ತಮ ಯೋಜನೆ ರೂಪಿಸಿದ್ದಾರೆ.
ಕಬ್ಬು ಬೆಳೆಯ ಮಧ್ಯ ಸೂಕ್ತ ಅಂತರದಿಂದಾದ ಪ್ರಯೋಜನ:
4 ಎಕರೆ ಕೃಷಿ ಭೂಮಿಯಲ್ಲಿ, ಸಾವಯವ ಕೃಷಿ ಮೂಲಕ ಕಬ್ಬು ಬೆಳೆ ಬೆಳೆಯಲು ಮುಂದಾಗಿರುವ 20 ವರ್ಷದ ಯುವ ಕೃಷಿಕರಾದ ವಿದ್ಯಾರ್ಥಿ ರವಿಶಂಕರ್, ಕಬ್ಬಿನ ಮಧ್ಯ 6 ಅಡಿ ಅಂತರ ಕೊಟ್ಟು, ಅಂತರ ಬೆಳೆಯಾಗಿ ಚೆಂಡು ಹೂ ಮತ್ತು ಬೀನ್ಸ್ ಬೆಳೆ ಬೆಳೆದಿದ್ದಾರೆ.
ಚೆಂಡು ಹೂ ಕೃಷಿ:
ದಸರಾ ಹಬ್ಬವನ್ನ ದೃಷ್ಟಿಯಲ್ಲಿಟ್ಟುಕೊಂಡು, ರವಿಶಂಕರ್ ಕಬ್ಬು ನಾಟಿ ಮಾಡುವಾಗ ತಮ್ಮ ಕಬ್ಬಿನ ಮಧ್ಯ ಚೆಂಡು ಹೂ ಬೆಳೆದರು. ಹಬ್ಬದ ಸಮಯದಲ್ಲಿ ಚೆಂಡು ಹೂವಿಗೆ ವಿಶೇಷ ಬೆಲೆ ಸಿಕ್ಕಿದ್ದರಿಂದ ರವಿ ಶಂಕರ್ ಮತ್ತಷ್ಟು ಲಾಭ ಪಡೆಯಲು ದಾರಿಯಾಯಿತು.
ಚೆಂಡು ಹೂವಿನಿಂದ ಕಬ್ಬಿಗೆ ರಕ್ಷಣೆ:
ಕಬ್ಬು ಬೆಳೆಯ ಜತೆ ಚೆಂಡು ಹೂ ಬೆಳೆದಾಗ, ಕಬ್ಬಿಗೆ ಕಾಡುವ ಕೀಟಬಾಧೆ ನಿಯಂತ್ರಣಕ್ಕೆ ಬರುತ್ತೆ. ಇದರ ಜತೆಗೆ ತೋಟದಲ್ಲಿ ಕಾಂಗ್ರೇಸ್ ಗಿಡ(ಪಾರ್ಥೇನಿಯಂ)ಗಳು ಮತ್ತು ಇನ್ನ್ಯಾವುದೇ ಕಳೆ ಬಂದ್ರೆ ಚಂಡು ಹೂ ಅದನ್ನು ನಿಯಂತ್ರಿಸುತ್ತೆ.
ಬೀನ್ಸ್ ಬೆಳೆಯಿಂದ ಭರ್ಜರಿ ಲಾಭ:
ಕಬ್ಬಿನೊಂದಿಗೆ ದ್ವಿದಳ ಧಾನ್ಯ ಗುಂಪಿಗೆ ಸೇರುವ ಲಾಂಗ್ ಬೀನ್ಸ್ (ಚೊಟ್ಟು) ಬೆಳೆಯನ್ನ ಬೆಳೆದಿದ್ದರಿಂದ, ಬೀನ್ಸ್ ನಿಂದ ಬರುವ ಆದಾಯ ಕಬ್ಬಿಗೆ ಮುಂದೆ ಮಾಡುವ ಖರ್ಚು ನೀಗಿಸುತ್ತೆ ಎಂದು ರೈತ ಹೇಳ್ತಾರೆ. ಬೀನ್ಸ್ ಬೆಳೆ ಒಂದು ದ್ವಿದಳ ಧಾನ್ಯವಾಗಿದ್ದರಿಂದ, ನೈಸರ್ಗಿಕವಾಗಿ ಕಬ್ಬು ಬೆಳೆಗೆ ಸಾರಜನಕ ಒದಗಿಸುತ್ತೆ. ಹೀಗಾಗಿ ಕೃಷಿಕ ರವಿ ಶಂಕರ್ ಕಬ್ಬು ಬೆಳೆಗೆ ಸಾರಜನಕದ ಬಗ್ಗೆ ತೆಲೆಕೆಡಿಸಿಕೊಳ್ಳುವಂತಿಲ್ಲ..
ಒಟ್ಟಿನಲ್ಲಿ ಕೃಷಿಕ ರವಿ ಶಂಕರ್, ಕಬ್ಬು ಬೆಳೆಗೆ ಸೂಕ್ತ ಅಂತರ ಕೊಟ್ಟು, ಕಬ್ಬು ನಾಟಿ ಮಾಡುವಾಗಲೇ ಚೆಂಡು ಮತ್ತು ಬೀನ್ಸ್ ಬೆಳೆದಿದ್ದರಿಂದ ಕಬ್ಬು ಬೆಳೆಗೆ ಮಾಡಿದ ಖರ್ಚು ನೀಗಿತು ಮತ್ತು ಸೂಕ್ತ ಅಂತರದಿಂದ ಕಬ್ಬು ಬೆಳೆ ಆರೋಗ್ಯವಾಗಿರಲು ಕಾರಣವಾಯಿತು.
ಇನ್ನು ಹೆಚ್ಚು ಮಾಹಿತಿ ಪಡೆಯಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ:
https://www.youtube.com/watch?v=JAaFOxmrtqY&t=115s
ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233
ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:
https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE
► Microbi Agrotech Website: http://www.microbiagro.com
► Subscribe to Microbi Agrotech: https://youtube.com/c/MICROBIAGROTECHPVTLTDKANNADA
► Like us on Facebook: https://www.facebook.com/microbiagrotech/