ಕೃಷಿಯನ್ನು ಪ್ರಯೋಗಾಲಯಗಳಿಂದ ಹೊರಗೆ ತರಬೇಕಿದೆ. ಪ್ರಕೃತಿಯ ಜೊತೆ ಮರುಜೋಡಿಸುವ ಕೆಲಸ ಆಗಬೇಕಿದೆ. ಸಾವಯವ ಮತ್ತು ಸಹಜ ಕೃಷಿಗೆ ಹೆಚ್ಚು ಆದ್ಯತೆ ನೀಡಬೇಕಾಗಿದೆ- ಪ್ರಧಾನಿ ಶ್ರೀ ನರೇಂದ್ರ ಮೋದಿ
ಅತಿಯಾದ ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಭಾರತದ ಕೃಷಿ ಅಪಾಯದತ್ತ ಸಾಗುತ್ತಿದೆ-ಕೇಂದ್ರ ಗೃಹ ಮಂತ್ರಿ ಶ್ರೀ ಅಮಿತ್ ಶಾ
ರೈತರ ಆದಾಯ ದುಪ್ಪಟ್ಟಿಗೆ ಸರ್ಕಾರದ ಕ್ರಾಂತಿಕಾರಿ ಹೆಜ್ಜೆ - ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ
ರೈತರು ಬೆಳೆದ ಬೆಳೆಗಳ ಸಂಸ್ಕರಣೆ, ಮೌಲ್ಯವರ್ಧನೆ, ಬ್ರಾಂಡಿಂಗ್, ಪ್ಯಾಕೇಜಿಂಗ್, ಮಾರುಕಟ್ಟೆ ಮತ್ತು ರಫ್ತು - ಸೆಕೆಂಡರಿ ಕೃಷಿ ನಿರ್ದೇಶನಾಲಯದ ಮೂಲ ಉದ್ದೇಶ - ಕೃಷಿ ಮಂತ್ರಿ ಶ್ರೀ ಬಿ.ಸಿ. ಪಾಟೀಲ್
ಇತ್ತೀಚೆಗೆ ನಮ್ಮ ದೇಶದ ಕೃಷಿಯಲ್ಲಿ ಅತ್ಯಂತ ಆಶಾದಾಯಕ ಮತ್ತು ಕ್ರಾಂತಿಕಾರಕ ಘಟನೆಗಳು ಜರುಗುತ್ತಿವೆ. ದೇಶದ ಪ್ರಧಾನಿಗಳಾದಿಯಾಗಿ ಕೇಂದ್ರ ಗೃಹಮಂತ್ರಿ, ರಾಜ್ಯದ ಮುಖ್ಯಮಂತ್ರಿ, ಕೃಷಿ ಮಂತ್ರಿಗಳೆಲ್ಲ ಒಕ್ಕೊರಲಿನ ದನಿಯಾಗಿ ನೈಸರ್ಗಿಕ ಕೃಷಿಯನ್ನು ಪ್ರತಿಪಾದಿಸುತ್ತಿದ್ದಾರೆ. ನರೇಂದ್ರ ಮೋದಿಯವರಂತೂ ಇಡೀ ಪ್ರಪಂಚದ "ಸಾವಯವ ರಾಯಭಾರಿ"ಯಂತೆ ಕಂಗೊಳಿಸುತ್ತಿದ್ದಾರೆ.
"ಮೇಲಿನ ಮಹಾನ್ ನಾಯಕರ ದೃಷ್ಟಿಕೋನ ಮತ್ತು ಕಾರ್ಯವೈಖರಿಗಳು ನಮ್ಮ ಕೃಷಿಯ ದಿಕ್ಕನ್ನೇ ಬದಲಾಯಿಸುವ ಯೋಜನೆಗಳಾಗಿವೆ. ಈ ದಿಸೆಯಲ್ಲಿ ಮೈಕ್ರೋಬಿ ಸಂಸ್ಥೆ ಸತತ 10 ವರ್ಷಗಳಿಂದ ನಿರಂತರವಾಗಿ ಶ್ರಮಿಸುತ್ತಾ ಬಂದಿದೆ. ನಾನು ವೈಯಕ್ತಿಕವಾಗಿ ಸುಮಾರು 5 ಲಕ್ಷ ಕಿಲೋ ಮೀಟರುಗಳಷ್ಟು ರಾಜ್ಯದ ಮೂಲೆ ಮೂಲೆಗಳನ್ನೂ ಸುತ್ತಿ, ಕೃಷಿ ಭೂಮಿಯನ್ನು ವಿಷಮುಕ್ತವನ್ನಾಗಿ ಪರಿವರ್ತಿಸಲು ಶ್ರಮಿಸಿದ್ದೇನೆ. ಲಕ್ಷಾಂತರ ಹೆಕ್ಟೇರು ಜಮೀನುಗಳನ್ನು ರಾಸಾಯನಿಕ ಮುಕ್ತಗೊಳಿಸಿದ್ದೇನೆ" ಎಂದು ಪ್ರಖ್ಯಾತ ಸಾವಯವ ಕೃಷಿ ತಜ್ಞರಾದ ಡಾ. ಕೆ ಆರ್ ಹುಲ್ಲುನಾಚೆಗೌಡರು ಚಿಕ್ಕಮಗಳೂರಿನಲ್ಲಿ ನಡೆದ ಸಾವಯವ ರಾಯಭಾರಿಗಳ ಸಭೆಯಲ್ಲಿ ನುಡಿದರು.
ಮೈಕ್ರೋಬಿ ಆಗ್ರೋಟೆಕ್ ಸಂಸ್ಥೆಯ ಸಾವಯವ ರಾಯಭಾರಿಗಳಿಗೆ ತರಬೇತಿ ಕಾರ್ಯಾಗಾರಗಳನ್ನು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ದಾವಣಗೆರೆ, ಬಳ್ಳಾರಿ, ವಿಜಯನಗರ ಮುಂತಾದ ಜಿಲ್ಲೆಗಳಲ್ಲಿ ಯಶಸ್ವಿಯಾಗಿ ನೆರವೇರಿಸಿ, ಕಳೆದ ಶುಕ್ರವಾರ ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳ ಪ್ರತಿನಿಧಿಗಳ ತರಬೇತಿ ಕಾರ್ಯಕ್ರಮವನ್ನು ಚಿಕ್ಕಮಗಳೂರು ನಗರದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಅತಿಯಾದ ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ನಮ್ಮ ದೇಶದ ಕೃಷಿ ಭೂಮಿ ಬರಡಾಗಿ, ಇಡೀ ದೇಶ ಸಂಕಷ್ಟಕ್ಕೆ ಸಿಲುಕಿದೆ. ನಾವು ತಿನ್ನುವ ಆಹಾರವು ವಿಷಮಯವಾಗಿ ಮಾನವ ಜನಾಂಗವಲ್ಲದೆ ಪ್ರಾಣಿ, ಪಕ್ಷಿ ಸಂಕುಲಗಳೆಲ್ಲ ನಾಶವಾಗುವ ಹಂತ ತಲುಪಿದೆ. ಇಂಥ ಸಂದರ್ಭದಲ್ಲಿ ನಾವೆಲ್ಲ ಒಟ್ಟಾಗಿ, ಭೂಮಿಯನ್ನು ವಿಷಮುಕ್ತಗೊಳಿಸುವ ಮಹೋನ್ನತ ಕಾರ್ಯವನ್ನು ಕೈಗೊಳ್ಳುತ್ತಿರುವುದು ನಿಜಕ್ಕೂ ಮಹತ್ಕಾರ್ಯವಾಗಿದೆ. ದೇಶದ ಪ್ರಧಾನ ಮಂತ್ರಿಗಳಾದಿಯಾಗಿ ನಾಯಕರು ದೇಶದ ಕೃಷಿಯನ್ನು ರಾಸಾಯನಿಕ ಮುಕ್ತಗೊಳಿಸಲು ಪಣತೊಟ್ಟಿರುವುದು ಅತ್ಯಂತ ಮೇರುಕಾರ್ಯವಾಗಿದೆ. ನಾವು ಕಳೆದ ಹತ್ತುವರ್ಷಗಳಿಂದ ಇದಕ್ಕಾಗಿ ಶ್ರಮಿಸುತ್ತಾ ಬಂದಿದ್ದು, ದೇಶದ ದಿಕ್ಕನ್ನೇ ಬದಲಿಸುತ್ತಿದ್ದೇವೆ. ಇನ್ನು ಮುಂದೆ ನಾವೆಲ್ಲ ಹೆಚ್ಚು ಉತ್ಸಾಹದಿಂದ ಮತ್ತು ಹೆಚ್ಚು ಜವಾಬ್ದಾರಿಯಿಂದ ಕೆಲಸ ಮಾಡಬೇಕಾಗುತ್ತದೆ. ಅದಕ್ಕಾಗಿ ಪ್ರತಿಯೊಂದು ತಾಲ್ಲೂಕಿನ ಸಾವಯವ ರಾಯಭಾರಿಗಳ ತರಬೇತಿಯನ್ನು ಹಮ್ಮಿಕೊಂಡಿದ್ದೇವೆ. ನಾವೆಲ್ಲ ಇಂದು ಮುಖ್ಯವಾಗಿ 6 ಸಂಕಲ್ಪಗಳನ್ನು ಮಾಡುತ್ತಾ ಪ್ರತಿಜ್ಞೆಯನ್ನು ಮಾಡಬೇಕಾಗುತ್ತದೆ. ನಮ್ಮ ಭೂಮಿಯನ್ನು ರಾಸಾಯನಿಕ ಮುಕ್ತ ಕೃಷಿಭೂಮಿಯಾಗಿ ಪರಿವರ್ತಿಸುವ ಅನಿವಾರ್ಯತೆಯನ್ನು ಪ್ರತಿಯೊಬ್ಬ ರೈತರಿಗೂ ಮನವರಿಕೆ ಮಾಡಿಕೊಡಬೇಕು.
1. ನಮ್ಮ ತಾಲ್ಲೂಕಿನ ಕೃಷಿ ಭೂಮಿಯನ್ನು ವಿಷಮುಕ್ತಗೊಳಿಸುತ್ತೇನೆ.
2. ಸದೃಢ ಮತ್ತು ಆರೋಗ್ಯವಂತ ಸಮಾಜ ನಿರ್ಮಾಣ ಮಾಡುತ್ತೇನೆ.
3.ತಾಲ್ಲೂಕಿನ ಪ್ರತಿಯೊಬ್ಬ ರೈತನನ್ನು ಸಾವಯವ ಪ್ರತಿನಿಧಿಯಾಗಿ ಮಾಡುತ್ತೇನೆ.
4.ತಾಲೂಕಿನಲ್ಲಿ ಕನಿಷ್ಠ 2 ಮಾದರಿ ಪ್ರಾತ್ಯಕ್ಷಿಕೆಯನ್ನು ಅಭಿವೃದ್ಧಿ ಪಡಿಸಿ, ತಾಲ್ಲೂಕಿನಲ್ಲಿ ಕೃಷಿ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತೇನೆ.
5. ಸಮಗ್ರ ಸುಸ್ಥಿರ ಸಾವಯವ ಕೃಷಿಯನ್ನು ರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಮಾಡುತ್ತೇನೆ.
6. ರೈತರಲ್ಲಿ ಕೆಲವರನ್ನು ಯಶಸ್ವಿ ಕೃಷಿ ಉದ್ಯಮಿಗಳನ್ನಾಗಿ ಮಾಡುತ್ತೇನೆ.
ಈ ಮೇಲಿನ 6 ಉದಾತ್ತವಾದ ತತ್ತ್ವಗಳನ್ನು ಸಂಕಲ್ಪ ಮಾಡುವುದರ ಮುಖಾಂತರ ನಾವೆಲ್ಲ ಸಾಧಿಸಬೇಕು. ಮುಖ್ಯವಾಗಿ ರೈತರು ಬೆಳೆದ ಉತ್ಪನ್ನಗಳಿಗೆ ಮೌಲ್ಯಯುತವಾದ ಮಾರುಕಟ್ಟೆಯನ್ನು ಮೈಕ್ರೋಬಿ ಸಂಸ್ಥೆಯ ಧಾತು ಆಪ್ ನಲ್ಲಿ ಅವಕಾಶ ಕಲ್ಪಿಸುತ್ತಿದ್ದೇವೆ. ಮುಂದೆ ರೈತರು ಯಾವುದೇ ಮಧ್ಯವರ್ತಿಗಳಿಲ್ಲದೆ ತಮ್ಮ ಉತ್ಪನ್ನಗಳನ್ನು ಯೋಗ್ಯ ಬೆಲೆಗೆ ಮಾರಾಟ ಮಾಡಿ ಲಾಭ ಸಂಪಾದಿಸಬಹುದು ಎಂದು ಮನೋಜ್ಞವಾಗಿ ಕಂಪನಿಯ ಅಧ್ಯಕ್ಷರೂ ಆಗಿರುವ ಡಾ. ಕೆ.ಆರ್.ಹುಲ್ಲುನಾಚೆಗೌಡರು ಪ್ರತಿಪಾದಿಸಿದರು.
ಮೈಕ್ರೋಬಿ ಸಂಸ್ಥೆಯ ಮಾರುಕಟ್ಟೆ ವಿಭಾಗದ ನಿರ್ದೇಶಕರಾಗಿರುವ ಡಾ. ವಿಕ್ರಮ್ ರವರು ಮಾತನಾಡಿ, ಸಂಸ್ಥೆಯ ಮೂಲ ಉದ್ದೇಶ "ಮಣ್ಣನ್ನು ವಿಷಮುಕ್ತ ಗೊಳಿಸುವುದು. ಆ ಮುಖಾಂತರ ಆರೋಗ್ಯವಂತ ದೇಶವನ್ನು ಕಟ್ಟುವುದು". ಅಧ್ಯಕ್ಷರ ಮಾರ್ಗದರ್ಶನದಂತೆ ನಾವೆಲ್ಲ ಇಂದು ಪ್ರತಿಜ್ಞೆಯನ್ನು ಮಾಡಿದ್ದೇವೆ. ಆ ಸಂಕಲ್ಪಗಳನ್ನು ಸಾಕಾರಗೊಳಿಸುವ ಮುಖಾಂತರ ಅವರಿಗೆ ಗೌರವ ಸಲ್ಲಿಸಬೇಕು. ಅವರ ಮಾರ್ಗದರ್ಶನವನ್ನು ಚಾಚೂ ತಪ್ಪದೆ ಪಾಲಿಸಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧಿಕಾರಿಗಳಾದ ಶ್ರೀಕಾಂತ್, ಚರಣ್, ಅನಿಲ್ ಮತ್ತು 25 ಸಾವಯವ ಪ್ರತಿನಿಧಿಗಳು ಭಾಗವಹಿಸಿದ್ದರು. ಸಾವಯವ ತರಬೇತಿ ಕಾರ್ಯಕ್ರಮವನ್ನು ರಾಜ್ಯದ ಎಲ್ಲಾ ಜಿಲ್ಲೆಗಳ ಎಲ್ಲಾ ತಾಲ್ಲೂಕಿನ ಪ್ರತಿನಿಧಿಗಳಿಗೆ ಹಮ್ಮಿಕೊಳ್ಳಲಾಗಿದೆ.
ಶ್ರೀನಿವಾಸ್ ರೈತ
ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233
ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:
https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE
► Microbi Agrotech Website: http://www.microbiagro.com
► Subscribe to Microbi Agrotech: https://youtube.com/c/MICROBIAGROTECHPVTLTDKANNADA
► Like us on Facebook: https://www.facebook.com/microbiagrotech/