ಹಾವೇರಿ ಜಿಲ್ಲೆ, ಸವಣೂರು ತಾಲೂಕಿನ ಕೃಷಿಕ ಚೆನ್ನಪ್ಪ ಕಲಕಣಿ ಅವರು, ಎಲ್ಲರಂತೆ ರಾಸಾಯನಿಕ ಕೃಷಿ ಪದ್ಧತಿಯಲ್ಲಿ ಸಾಗಿದ್ದರು. ಮುಂದೆ ಇವರಿಗೆ ಸಾವಯವ ಕೃಷಿ ಪದ್ಧತಿಯ ಧ್ವನಿ ಕೇಳಿ ಬಂತು. ಆಗ ಸಾವಯವ ಕೃಷಿ ಮಾಡಿದ್ರೆ ರೈತರಿಗೆ ಆಗುವ ಉಪಯೋಗದ ಬಗ್ಗೆ ತಿಳಿಯಲು ಸ್ವತ: ತಮ್ಮ ಕೃಷಿ ಭೂಮಿಯಲ್ಲಿ ಮೆಣಸಿನಕಾಯಿ, ಶೇಂಗಾ, ಸೌತೆಕಾಯಿ, ಹೀರೆಕಾಯಿ ಬೆಳೆ ಮೇಲೆ ಸಾವಯವ ಸಂಜೀವಿನಿ ಬಳಸಿದರು.
ಬೀಜೋಪಚಾರ:
ಸಾವಯವ ಕೃಷಿಯಲ್ಲಿ ಪ್ರಪ್ರಥಮ ಬಾರಿಗೆ ಮಾಡಬೇಕಾದ ಕೆಲಸ ಅಂದ್ರೆ ಅದು ಬೀಜೋಪಚಾರ. ಇದರಿಂದ ರಾಸಾಯನಿಕದಿಂದ ನಶಿಸಿದ ಉಪಕಾರಿ ಸೂಕ್ಷ್ಮಾಣು ಜೀವಿಗಳು ಮತ್ತೆ ಜನ್ಮ ತಾಳುತ್ತವೆ. ಹಾಗಾಗಿ ಕೃಷಿಕ ಮೆಣಸಿನ ಕಾಯಿ, ಶೇಂಗಾ, ಸೌತೆಕಾಯಿ, ಹೀರೆಕಾಯಿ ನಾಟಿಗೂ ಮುನ್ನ ಬೀಜೋಪಚಾರ ಕೈಗೊಂಡರು.
ನಂತರ ಬಿತ್ತಿದ ಪ್ರತಿ ಬೀಜ ಮೊಳಕೆ ಒಡೆಯಿತು, ನಾಟಿ ಮಾಡಿದ ಮೆಣಸಿಕಾಯಿ ಸಸಿಗಳು ಸದೃಢವಾಗಿದ್ದವು. ಆಗ ರೈತನ ಮನಸ್ಸಿನಲ್ಲಿ ಸಾವಯವ ಕೃಷಿಯ ಬಗ್ಗೆ ನಂಬಿಕೆಯ ಬೀಜ ಮೊಳಕೆಯೊಡೆಯಿತು.
ಪೋಷಕಾಂಶ ಮತ್ತು ನೀರಿನ ನಿರ್ವಹಣೆ:
ಮೊಳಕೆಯೊಂದಿಗೆ ರೋಗ ಬರುವಂತಹ ಸಮಯದಲ್ಲಿ ಬೆಳೆ ಸದೃಢವಾಗಿದ್ದು, ರೈತನಿಗೆ ಖುಷಿ ನೀಡಿತು. ಆನಂತರ ಪೋಷಕಾಂಶದ ವಿಚಾರದಲ್ಲಿ ರಾಸಾಯನಿಕ ಮುಟ್ಟಲೇ ಬಾರದು ಎಂಬ ನಿರ್ಧಾರ ಕೈಗೊಂಡ ಸಾವಯವ ಕೃಷಿಯಡಿಯಲ್ಲಿ ಸಮಗ್ರ ಪೋಷಕಾಂಶಗಳನ್ನ ನೀಡಲು ಶುರು ಮಾಡಿದ್ರು. ಹೆಚ್ಚು ಖರ್ಚು ಮಾಡಿ ಬೆಳೆ ಬೆಳೆಯುವಾಗ ಕಾಣದ ಸಮೃದ್ಧತೆ, ಕಡಿಮೆ ಖರ್ಚಿನಲ್ಲಿ ಕಾಣುತ್ತಿರುವುದರಿಂದ ಹರ್ಷ ವ್ಯಕ್ತಪಡಿಸಿದ್ರು.
ಇನ್ನು ನೀರಿನ ವಿಚಾರಕ್ಕೆ ಬಂದ್ರೆ ಈ ಮಾತು ಹೊರತಾಗಿಲ್ಲ. ಮಳೆಯಾಶ್ರಿತ ನೀರಿನಲ್ಲಿ ಬೆಳೆಯುವ ರೈತನಿಗೆ, ಒಂದುವೇಳೆ ಮಳೆ ಬೀಳುವುದು ತಡವಾದ್ರೆ, ಬೆಳೆ ಸುಟ್ಟಂತಹ ಅನುಭವವಾಗುತ್ತಿತ್ತು. ಆದ್ರೆ ಇದೀಗ ತಿಂಗಳಾದ್ರು ಪರವಾಗಿಲ್ಲ, ಬೆಳೆ ಆರಾಮವಾಗಿದೆ ಎನ್ನುತ್ತಾರೆ ರೈತ ಚೆನ್ನಪ್ಪ ಅವರು.
ತೋಟದಲ್ಲಿನ ವಿಶೇಷತೆ:
ಬೆಳೆಗೆ ಸಾವಯವ ಪೋಷಕಾಂಶ ಕೊಡುವಾಗ ಡಾ.ಸಾಯಿಲ್ ದ್ರಾವಣ ಬಿದ್ದ ಜಾಗದಲ್ಲೆಲ್ಲ ಎರೆಹುಳು ಹೇರಳವಾಗಿದ್ದವು. ಆಗ ಅರ್ಥವಾದ ಮಾಹಿತಿ ಅಂದ್ರೆ, ಸಕ್ಕರೆ ಇದ್ದಲ್ಲಿ ಇರುವೆ ಬರುತ್ತೆ, ಹಾಗೆ ಸಾವಯವ ಅಂಶವಿದ್ದಲ್ಲಿ ಎರೆಹುಳು ಬರುತ್ತೆ.
ಒಟ್ಟಿನಲ್ಲಿ ಸಾವಯವ ಕೃಷಿ ವೈಜ್ಞಾನಿಕ ಕೃಷಿಯಾಗಿದ್ದು, ಮಣ್ಣಿನಲ್ಲಿನ ಜೀವಾಣುಗಳನ್ನ ಬದಕುಳಿಸಲು ಸಾವಯವ ಕೃಷಿ ಅಳವಡಸಿ, ಕೃಷಿ ಭೂಮಿ ಮತ್ತು ಬೆಳೆಗಳನ್ನ ಸಮೃದ್ಧವಾಗಿಸಿ.
https://www.youtube.com/watch?v=7iLEpzFrnFg&t=518s