Blog

ಕೋಳಿ ಸಾಕಾಣಿಕೆ ನಮ್ಮ ದೇಶದಲ್ಲಿ ಒಂದು ದೊಡ್ಡ ಉದ್ಯಮ. ಮೊಟ್ಟೆ, ಮಾಂಸಕ್ಕಾಗಿ ಇರುವ ಆಗಾಧ ಬೇಡಿಕೆಯಿಂದ, ಇಂದು ಈ ವಿಭಾಗದ ಉದ್ಯಮದಲ್ಲಿ ಹೊಸ ಪ್ರಯೋಗಗಳು, ಹೊಸ ತಳಿಗಳ ಪರಿಚಯವಾಗುತ್ತಿವೆ. ಇತ್ತೀಚಿನ ದಿನಗಳಲ್ಲಿ ಜನಪ್ರಿಯತೆ ಪಡೆದುಕೊಂಡಿರುವ ವಿಚಿತ್ರ ತಳಿ ಎಂದರೆ ಅದು ಕಡಕ್ನಾಥ್ ಕೋಳಿ. ಇದರ ದೇಹ, ಮಾಂಸ ಎಲ್ಲಾ ಕಡು ಕಪ್ಪು. ಇದರ ಕಪ್ಪು ಬಣ್ಣಕ್ಕೆ ಕಾರಣ ಮೆಲನಿನ್ ಎಂಬ ಪಿಗ್ಮೆಂಟ್. ಇದರ ಪರಿಚಯ ಮತ್ತು ಔದ್ಯಮಿಕ ಮೌಲ್ಯದ ಪರಿಚಯ ಇಲ್ಲಿದೆ.

       NBAGR(National Bureau of Animal Genetic Resourcesಪ್ರಕಾರ ನಮ್ಮ ದೇಶದಲ್ಲಿ 19 ಸ್ಥಳೀಯ ಕೋಳಿ ತಳಿಗಳಿವೆ. ಅದರಲ್ಲಿ ಕಡಕ್ನಾಥ್ ಕೂಡ ಒಂದು ಸ್ಥಳೀಯ ತಳಿ. ಇದನ್ನು ಮಧ್ಯ ಪ್ರದೇಶದ ಭಿಲ್, ಭಿಲಾಲ್ ಪ್ರಾಂತ್ಯಗಳ ಬುಡಕಟ್ಟು ಜನಾಂಗದ ಆದಿವಾಸಿಗಳು ಮಾತ್ರ ಸಾಕುತ್ತಿದ್ದರು. ಆದರೆ ಈ ಕೋಳಿಯ ಮಾಂಸದಿಂದ ಸಿಗುವ ಆರೋಗ್ಯದ ಪ್ರಯೋಜನಗಳಿಂದ ಇದರ ಬೇಡಿಕೆ ಹೆಚ್ಚಾಗಿದೆ.

 

ಆರೋಗ್ಯದ ಪ್ರಯೋಜನಗಳು

       ಕಡಕ್ನಾಥ್ ಮಾಂಸ ಪ್ರೋಟೀನ್ ನ ಆಗರ. ಇದರ ಮಾಂಸದಲ್ಲಿ ಶೇ. 25ರಷ್ಟು ಪ್ರೋಟಿನ್ ಇದೆ. ಇದರಲ್ಲಿ ಕೊಬ್ಬಿನಾಂಶ ಕೂಡ ಕಡಿಮೆ ಇದೆ. ಬೇರೆ ತಳಿಯ ಕೋಳಿಗಳಲ್ಲಿ ಶೇ. 13 ರಿಂದ 25ರಷ್ಟು ಕೊಬ್ಬಿದ್ದರೆ, ಇದರಲ್ಲಿ ಕೇವಲ ಶೇ. 0.73 ರಿಂ1.03ರಷ್ಟು ಮಾತ್ರ ಇದೆ. ಅಮೈನೋ ಆ್ಯಸಿಡ್ ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿದೆ. ವಿವಿಧ ವಿಟಮಿನ್ ಗಳು ಮತ್ತು ಖನಿಜಗಳನ್ನು ಹೊಂದಿದೆ.

ಕಡಕ್ನಾಥ್ ಮತ್ತು ಇತರ ತಳಿಗಳ ಪೋಷಕಾಂಶಗಳ ಹೋಲಿಕೆ :

ಕ್ರ. ಸಂ

ಪೋಷಕಾಂಶ

ಕಡಕ್ನಾಥ್

ಇತರ ತಳಿಗಳು

1

ಪ್ರೋಟಿನ್

ಶೇ. 25

ಶೇ.18 – 20%

2

ಕೊಬ್ಬು

ಶೇ. 0.3 – 1.03

13 -25%

3

ಕೊಲೆಸ್ಟ್ರಾಲ್

184.75mg/100g

218.12mg/100g

4

ಲಿನೊಲೀಕ್ ಆ್ಯಸಿಡ್

ಶೇ. 24

ಶೇ. 21

 

ಉದ್ಯಮವಾಗಿ ಕಡಕ್ನಾಥ್:

       ರೈತರು ಆದಾಯ ಹೆಚ್ಚಿಸಿಕೊಳ್ಳಬೇಕೆಂದರೆ ಬೇಡಿಕೆಯಿರುವ ಉತ್ಪನ್ನಗಳನ್ನು ಆಯ್ದುಕೊಳ್ಳಬೇಕು. ಕಡಕ್ನಾಥ್ ಈ ಸಾಲಿಗೆ ಬರುತ್ತದೆ. ಕಡಕ್ನಾಥ್ ಕೋಳಿಗಳ ಮಾಂಸ, ಮೊಟ್ಟೆಗಳಿಗೆ ಬೇಡಿಕೆ ಇರುವುದರಿಂದ ಇದರ ಬೆಲೆ ಜಾಸ್ತಿ ಇದೆ. 1 ಕೆ.ಜಿ ಮಾಂಸದ ಬೆಲೆ 700 ರೂ. ಇಂದ 1000 ರೂ. ವರೆಗೆ ಇದೆ ಮತ್ತು ಒಂದು ಮೊಟ್ಟೆಗೆ 50 ರೂ. ರಷ್ಟು ಇದೆ. ಇಷ್ಟು ಬೆಲೆಯ ಕಾರಣ, ಇದರ ಆರೋಗ್ಯ ಪ್ರಯೋಜನಗಳು ಮತ್ತು ಕಡಿಮೆ ಸಾಕಾಣಿಕೆ. ಕಡಕ್ನಾಥ್ ಕೋಳಿಗಳು ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಕೊಡಬಲ್ಲ ಒಂದು ಉಪಕಸುಬಾಗಿದೆ.

       ಕಡಕ್ನಾಥ್ ಕೋಳಿಯನ್ನು ಉದ್ಯಮವಾಗಿಸಿಕೊಳ್ಳಲು ಸಲಹೆ ಮತ್ತು ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ನೋಡಿ.

https://www.youtube.com/watch?v=rSo9hcW97Jw

 

ಬರಹ: ರವಿಕುಮಾರ್ ನಾಯಕ್

 

#kannadablog  #drsoil  #microbiagrotech  #agricultureblogs  #agricultureinkannada  #integratedfarming  #kadaknath  #poultry  #poultryfarming  #sideline  



Blog




Home    |   About Us    |   Contact    |   
microbi.tv | Powered by Ocat Online Advertising Service in India