ಅನಾರೋಗ್ಯದ ಕಂಟಕಕ್ಕೆ ರಾಮಬಾಣವಾಗಿರುವ ಶುಂಠಿ ಬೆಳೆಯ ಮೇಲೆ ಒಂದು ಆರೋಪವಿದೆ. ಅದು ಏನಂದ್ರೆ, ಕೃಷಿಕರು ಶುಂಠಿ ಬೆಳೆಯಲು ಆಯ್ಕೆ ಮಾಡಿಕೊಂಡರೆ ಭೂತಾಯಿ ಬರಡಾಗುತ್ತಾಳೆ ಎಂದು. ಆದ್ದರಿಂದ ಬಹುತೇಕ ಕೃಷಿಕರು ಶುಂಠಿ ಬೆಳೆಯ ಸಹವಾಸಕ್ಕೆ ಅಂಜುತ್ತಾರೆ.
ಶುಂಠಿಬೆಳೆಯು ಮಣ್ಣಿನಿಂದಲೇ ಹೆಚ್ಚು ಪೋಷಕಾಂಶ ಪಡೆದು ಬೆಳೆಯುವ ಬೆಳೆ. ಹೀಗಿರುವಾಗ ಅತಿಯಾದ ರಾಸಾಯನಿಕದ ಬಳಕೆ ಶುಂಠಿ ಮೇಲೆ ಮಾಡುವುದರಿಂದ, ಬೆಳೆ ಮತ್ತು ಕೃಷಿ ಭೂಮಿ ಹಾಳಾಗುವುದಲ್ಲದೆ, ಜೇಬಿಗೆ ಕತ್ತರಿ ಗ್ಯಾರಂಟಿ. ಆದ್ರೆ ಇಲ್ಲೊಬ್ಬ ಕೃಷಿಕ ಮಾತ್ರ, ಶುಂಠಿಯಲ್ಲಿ ಸರಳವಾಗಿ ಸಾಧನೆ ಮಾಡಿ ತೋರಿಸಿದ್ದಾರೆ.
ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ತಿಕ್ಕಾಂಶ ಹೊಸೂರು ಗ್ರಾಮದ ಕೃಷಿಕರಾದ ಚಂದ್ರು ಅವರು, ಪ್ರಪ್ರಥಮವಾಗಿ ಶುಂಠಿ ಬೆಳೆ ಬೆಳೆಯಲು ಮುಂದಾದರು. ಅಮೂಲ್ಯ ಮಾರ್ಗದರ್ಶನದ ಮೇರೆಗೆ, ನಾಟಿಯಿಂದಲೇ ಸಾವಯವಕ್ಕೆ ಎಂಟ್ರಿಕೊಟ್ಟರು. ಬೀಜೋಪಚಾರದಿಂದ ಬೀಜೋಪಚರಿಸಿ, ಶುಂಠಿ ಬೆಳೆದಿದ್ದರ ಫಲವಾಗಿ, ಇಂದು ಶುಂಠಿ ಬೆಳೆಗೆಯಾವುದೇ ಪೋಷಕಾಂಶದ ಕೊರತೆಯಾಗದೆ ಹಸಿರು ಬಣ್ಣದಿಂದ ರಂಗೇರಿದೆ.
ಹೆಚ್ಚು ಪೋಷಕಾಂಶದ ಬಯಕೆ ಇರುವ ಶುಂಠಿ ಬೆಳೆ, ಕೃಷಿಕ ಚಂದ್ರು ಅವರ ತೋಟದಲ್ಲಿ ಸಂಭ್ರಮಿಸುತ್ತಿದೆ. ಸಾವಯವ ಕೃಷಿಯಲ್ಲಿ ಬೆಳೆಯುತ್ತಿರುವ ಕಾರಣ ಶುಂಠಿಗೆ ಪೋಷಕಾಂಶದ ಕೊರತೆಯಾಗಲಿಲ್ಲ, ಕೃಷಿ ಬರಡಾಗಲಿಲ್ಲ. ಹಾಗಾಗಿ ಶುಂಠಿ ಚಿಕ್ಕ ವಯಸ್ಸಿನಲ್ಲೇ ಹೆಚ್ಚು ಮರಿಗಳನ್ನ ಒಳಗೊಂಡು ಆರೋಗ್ಯವಾಗಿದೆ.
ಒಟ್ಟಿನಲ್ಲಿ ಸಾವಯವ ಕೃಷಿ ಅಳವಡಿಸಿಕೊಂಡರೆಕೃಷಿಗೆ ಮೂಲಾಧಾರವಾದ ಕೃಷಿ ಭೂಮಿಯು ಆರೋಗ್ಯವಾಗಿ, ಸಕಲ ಪೋಷಕಾಂಶಗಳನ್ನ ಹೊಂದಿರುತ್ತಾಳೆ. ಆಗ ನೀವು ಎಂತಹದ್ದೇ ಬೆಳೆ ಬೆಳೆದರೂ ಸಹಿತ, ಪೋಷಕಾಂಶ ಕೊರತೆ ಕಾಣದೆ ಬೆಳೆ ಸಮೃದ್ಧವಾಗಿ ಬೆಳೆದು ಆರೋಗ್ಯವಾಗಿರುತ್ತದೆ.
ವರದಿ: ಶ್ವೇತಾ ಕಲಕಣಿ
ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.
https://www.youtube.com/watch?v=Mx3oy6iqSNo