Blog

ರಾಮನಗರ ಜಿಲ್ಲೆ, ಮಾಗಡಿ ತಾಲೂಕಿನ ಚಿಕ್ಕನಹಳ್ಳಿ ಗ್ರಾಮದ ಕೃಷಿಕ ಯೋಗೇಶ್ ಅವರು ಮೂಲತ: ಕೃಷಿ ಕುಟುಂದವರಾಗಿದ್ದು, ವೃತ್ತಿಯಲ್ಲಿ ಶಿಕ್ಷಕರು. ಆದ್ರೆ ಮೂಲ ಕಸುಬಾಗಿರುವ ಕೃಷಿಯನ್ನ ಕೈಬಿಡಬಾರದೆಂಬ ಇಚ್ಛೆಯಿಂದ, ವೃತ್ತಿಯೊಂದಿಗೆ ಕೃಷಿಯನ್ನೂ ಎದೆಗಪ್ಪಿದರು.

ದಿನಕ್ಕೆ 8 ಗಂಟೆ ಕೆಲಸದಲ್ಲಿ ತೊಡಗಿ, ಮನೆಗೆ ತೆರಳುವಷ್ಟರಲ್ಲಿ ಸಾಕುಸಾಕಾಗಿರುತ್ತದೆ. ಆದ್ರೆ ಇವರು ಹೇಗೆ ಕೃಷಿ ಮಾಡಲು ಒಪ್ಪಿಕೊಂಡರು ಅಂತ ಪ್ರಶ್ನೆ ಮೂಡುವುದು ಸಹಜ. ಆದ್ರೆ ಇದು ನಿ,ಶಿಕ್ಷಕ ವೃತ್ತಿಯ ಜತೆ ಕೃಷಿಯನ್ನೂ ಮಾಡುತ್ತ ನೆಮ್ಮದಿಯಿಂದ ಇದ್ದಾರೆ.

ಕೃಷಿ ಕಾರ್ಯ ನಿರ್ವಹಣೆ:

ಮುಂದೆ ಗುರಿ, ಹಿಂದೆ ಗುರು ಇದ್ರೆ, ಯಶಸ್ಸು ಬಹಳ ಹತ್ತಿರವಾಗುತ್ತದೆ. ಈ ಮಾತು ಕೃಷಿಕ ಯೋಗೇಶ್ ಅವರ ಕೃಷಿ ಜೀವಕ್ಕೆ ಸರಿ ಹೊಂದುತ್ತದೆ. ಮಾಗಡಿ ತಾಲೂಕಿನಲ್ಲಿರುವ ಮೈಕ್ರೋಬಿ ಆಗ್ರೋಟೆಕ್ ಸಂಸ್ಥೆಯ ಪ್ರತಿನಿಧಿಯಾದ ಮಂಜುನಾಥ ಅವರು, ಕೃಷಿಯಲ್ಲಿ ಆಸಕ್ತಿ ಹೊಂದಿದ್ದ ಯೋಗೇಶ್ ಅವರಕಾರ್ಯವನ್ನು ಶ್ಲಾಘಿಸಿ, ಸಾವಯವ ಕೃಷಿಗೆ ಆಹ್ವಾನಿಸಿದರು. ನಂತರ ಒಂದು, ಎರಡು ಬೆಳೆಗೆ ಎಕರೆ ಭೂಮಿನಾ ಮುಡುಪಾಗಿಡುವುದಕ್ಕಿಂತ ಸಮಗ್ರ ಸಾವಯವ ಕೃಷಿ ಪದ್ಧತಿ ಅನುಸರಿಸಿ,ಆದಾಯದಲ್ಲಿ ಸುಸ್ಥಿರತೆ ಕಾಣುವುದು ಉತ್ತಮ ಎಂದು ಕೃಷಿಕನಿಗೆ ತಿಳಿಹೇಳಿದ್ರು.

ನಂತರ ಕೃಷಿಕ ಯೋಗೇಶ್, ಮಾರ್ಗದರ್ಶಕರಾದ ಮಂಜುನಾಥವರ ಸಲಹೆ, ಸೂಚನೆಗಳನ್ನ ಅನುಸರಿಸಿದರು. ಇಂದು ಕೃಷಿಕನ ತೋಟದಲ್ಲಿ ಒಂದೇ ಬೆಳೆಯಿಲ್ಲ, ಬದಲಿಗೆ ನಿಂಬೆ, ತೆಂಗು, ಬಟರ್ ಫ್ರೂಟ್, ಅಡಿಕೆ, ಬಾಳೆ, ಏಲಕ್ಕಿ ಹೀಗೆ ಸಾಕಷ್ಟು ಬೆಳೆಗಳಿಂದ ಸಮೃದ್ಧವಾಗಿದೆ.

ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಸಲುವಾಗಿ ಬೋಧಿಸುವುದು ಒಂದು ಕಾರ್ಯವಾದ್ರೆ, ಕೃಷಿಯಲ್ಲಿ ಸಾವಯವಅಳವಡಿಸಿಕೊಂಡು, ಭೂತಾಯಿ ಮತ್ತು ಬೆಳೆಗಳ ಆರೋಗ್ಯ ಕಾಯ್ದು, ಉತ್ತಮ ಫಲ ಪಡೆಯುವುತ್ತಿರುವುದು ಹೆಮ್ಮೆಯ ವಿಚಾರ ಅಂತಾರೆ ಕೃಷಿಕ.

ಸಾವಯವ ಕೃಷಿಯಿಂದ ಭೂತಾಯಿಒಡಲು ಹಗುರವಾಗಿದ್ದು, ಬೆಳೆ ಆರೋಗ್ಯವಾಗಿದೆ. ಇನ್ನು ಈ ತೋಟದಲ್ಲಿ ವಿಶೇಷ ಅಂದ್ರೆ ಕೃಷಿ ಕಾರ್ಮಿಕರ ಅವಶ್ಯಕತೆಯೂ ಇಲ್ಲ. ಕೃಷಿಕ ಮತ್ತು ಕುಟುಂದವರು ಸೇರಿ, ಕೃಷಿ ಚಟುವಟಿಗಳನ್ನ ನಿಭಾಯಿಸಿಕೊಳ್ಳುವಷ್ಟು ಸರಳವಾಗಿದೆ.

ಒಟ್ಟಿನಲ್ಲಿ ಕೃಷಿ ಕಾರ್ಯವನ್ನ ಸರವಾಗಿಸಿಕೊಳ್ಳುವುದು ಮತ್ತು ಭಾರವಾಗಿಸಿಕೊಳ್ಳುವುದು ರೈತನ ಕೈಯಲ್ಲಿದೆ. ರೈತರು ಕೃಷಿಕ ಯೋಗೇಶ್ ಅವರಂತೆ ಸಮಗ್ರ ಸಾವಯವ ಕೃಷಿ ಪದ್ಧತಿ ಅಳವಡಸಿಕೊಂಡು ಸುಸ್ಥಿರತೆ ಕಾಣಬೇಕು ಎಂಬುವುದು ಮೈಕ್ರೋಬಿ ಆಗ್ರೋಟೆಕ್ ಕಳಕಳಿ.

ವರದಿ: ಶ್ವೇತಾ ಕಲಕಣಿ

ಇನ್ನು ಹೆಚ್ಚಿನ ಮಾಹಿತಿ ತಿಲಿಯಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

 https://www.youtube.com/watch?v=iPItzlX1jio&t=173s

 

#Howtodointegratedfarming  #integratedorganicfarming  #integratedfarmingsystem  #integratedfarminginkannada  #multiplefruitvarieties  #SuccessfulIntegratedfarming  #integratedfarming  



Blog




Home    |   About Us    |   Contact    |   
microbi.tv | Website Promotion and Content Marketing through Ocat Online Catalog in India | Powered by Ocat Digital Pvt.Ltd