Blog

ಬೆಳೆಗಳು ಆರೋಗ್ಯವಾಗಿರಬೇಕು ಎಂದರೆ, ಬೆಳೆಗಳಿಗೆ ಪೋಷಕಾಂಶಗಳನ್ನು ಒದಗಿಸಬೇಕಾಗುತ್ತದೆ. ಬೆಳೆ ಆರೋಗ್ಯವಾಗಿ ಬೆಳೆದರೆ ಮಾತ್ರ, ರೈತ ಬೆಳೆದ ಬೆಳೆಯಲ್ಲಿ ಹೆಚ್ಚಿನ ಇಳುವರಿ ಪಡೆಯಬಹುದು. ಪೋಷಕಾಂಶಗಳನ್ನು ನೀಡುವ ಅವಸರದಲ್ಲಿ ನಮ್ಮ ರೈತರು ಕೃತಕ ಪೋಷಕಾಂಶಗಳಿಗೆ ಮೊರೆ ಹೋಗಿ ರಾಸಾಯನಿಕ ಗೊಬ್ಬರಗಳನ್ನು ಭೂಮಿಗೆ ಬಳಸಿ, ಭೂಮಿ-ಬೆಳೆ ಎರಡನ್ನೂ ಹಾಳು ಮಾಡಿಕೊಳ್ತಾರೆ. ಕೃತಕ ಪೋಷಕಾಂಶಗಳನ್ನು ಬಿಟ್ಟರೆ ರೈತರಿಗೆ ಬೇರೆ ದಾರಿ ಇಲ್ಲವಾ ಎಂಬ ಪ್ರಶ್ನೆಗೆ ಎಲ್ಲ ರೈತರು ಉತ್ತರ ತಿಳಿದುಕೊಳ್ಳಬೇಕಾಗಿದೆ.

ಸಾವಯವ ಕೃಷಿಯಲ್ಲಿ ಕೊಟ್ಟಿಗೆ ಗೊಬ್ಬರ, ಹಸಿರೆಲೆ ಗೊಬ್ಬರ, ಎರೆಹುಳು ಗೊಬ್ಬರ ಸೇರಿದಂತೆ ಜೈವಿಕ ಗೊಬ್ಬರಗಳನ್ನು ಭೂಮಿಗೆ ಬಳಸಿದರೆ, ಬೆಳೆ ಮತ್ತು ಭೂಮಿಗೆ ವಿಷಮುಕ್ತ ಆಹಾರ ನೀಡಿದಂತ್ತಾಗುತ್ತದೆ. ಜತೆಗೆ ಸಂಪನ್ಮೂಲಗಳಲ್ಲಿ ಒಂದಾದ ಮಣ್ಣು ಆರೋಗ್ಯವನ್ನು ಕಾಪಾಡಿದಂತ್ತಾಗುತ್ತದೆ.

ಕೊಟ್ಟಿಗೆ ಗೊಬ್ಬರ:
ಕೃಷಿ ಉತ್ಪಾದನೆಯಲ್ಲಿ ಕೊಟ್ಟಿಗೆ ಗೊಬ್ಬರದ ಬಳಕೆಯಿಂದಾಗುವ ಅನುಕೂಲಗಳು ಹಲವಾರು, ಮಣ್ಣಿನ ಆರೋಗ್ಯದ ಜತೆಗೆ ಭೂಮಿಯ ಫಲವತ್ತತೆಯನ್ನು ಕಾಪಾಡಿಕೊಂಡು ಬರುವಲ್ಲಿ ಕೊಟ್ಟಿಗೆ ಗೊಬ್ಬರ ಸಹಕಾರಿ.

ಕೊಟ್ಟಿಗೆ ಗೊಬ್ಬರವನ್ನು ಮಣ್ಣಿಗೆ ಸೇರಿಸುವುದರಿಂದ ಮಣ್ಣಿನ ಕಣಗಳ ರಚನೆ ಸುಧಾರಣೆಯಾಗಿ, ಹರಳು ರೂಪದ ಉತ್ತಮ ಕಣಗಳು ವೃದ್ಧಿಯಾಗಿ, ಮಣ್ಣಿನಲ್ಲಿ ನೀರು ಹಿಡಿದಿಡುವ ಸಾಮರ್ಥ್ಯ ಹೆಚ್ಚಾಗುತ್ತದೆ. ಮಣ್ಣಿನಲ್ಲಿರುವ ಉಪಕಾರಿ ಸೂಕ್ಷಾಣು ಜೀವಿಗಳ ಬೆಳೆವಣಿಗೆಗೆ ಇದು ಪೂರಕವಾಗಿದೆ. ರೈತ ಮಿತ್ರ ಎರೆಹುಳುಗಳ ಸಂಖ್ಯೆ ಹೆಚ್ಚಿಸಲು ಕೊಟ್ಟಿಗೆ ಗೊಬ್ಬರ ಸಹಾಯಕವಾಗಿದೆ. ಮಣ್ಣಿನಲ್ಲಿ ಸಾರಜನಕ ಸ್ಥಿರೀಕರಿಸುವ ಗುಣ ಕೊಟ್ಟಿಗೆ ಗೊಬ್ಬರದಲ್ಲಿದ್ದು ರಾಸಾಯನಿಕ ಗುಣವನ್ನು ವೃದ್ಧಿಸುತ್ತದೆ.

ಉದಾ: ದನದ ಗೊಬ್ಬರ , ಕುರಿ ಗೊಬ್ಬರ , ಕೋಳಿ ಗೊಬ್ಬರ

ಹಸಿರೆಲೆ ಗೊಬ್ಬರ:
ಕೃಷಿಯಲ್ಲಿ ಹಸಿರೆಲೆ ಗೊಬ್ಬರಗಳ ಬಳಕೆ ನೂರಾರು ವರ್ಷದ ಹಿಂದಿನಿಂದ ಬಂದ ಪದ್ಧತಿ. ಮಣ್ಣಿನಲ್ಲಿ ಭೌತಿಕ ಗುಣವನ್ನು ಕಾಪಾಡುವಲ್ಲಿ ಮಹತ್ವದ ಸ್ಥಾನ ವಹಿಸಿರುವ ಹಸಿರೆಲೆ ಗೊಬ್ಬರಗಳು, ಭೂಮಿಗೆ ಮುಖ್ಯವಾದ ಪೋಷಕಾಂಶಗಳಾದ ಸಾರಜನಕ, ರಂಜಕ, ಪೊಟ್ಯಾಷ್ ಗಳನ್ನಲದೆ, ಇತರೆ ಲಘು ಪೋಷಕಾಂಶಗಳನ್ನೂ ಒದಗಿಸುತ್ತದೆ.ರೈತರು ಖರ್ಚೆ ಇಲ್ಲದೆ ನೈಸರ್ಗಿಕವಾಗಿ ಭೂಮಿಗೆ ಪೋಷಕಾಂಶಗಳನ್ನು ನೀಡಬಹುದು.

ಹೊಲದ ಬದುವಿನಲ್ಲಿ ಅಥವಾ ಮುಖ್ಯ ಬೆಳೆಯನ್ನು ಬಿತ್ತುವ ಮೊದಲು ಇಲ್ಲವೇ ಬೆಳೆಗಳ ಜತೆಗೆ ಬಿತ್ತಬಹುದು.ಬಿತ್ತಿದ ಆರು ತಿಂಗಳ ಬಳಿಕ ಭೂಮಿಯಲ್ಲಿ ಸೇರಿಸಬಹುದು.
ಉದಾ: ಡಯಂಚಾ, ಸೆಣಬು, ಗ್ಲಿರಿಸಿಡಿಯಾ, ಲಸಂದಿ, ನ್ನಿತರ ದ್ವಿದಳ ಧಾನ್ಯಗಳು.

 

ಎರೆಹುಳು ಗೊಬ್ಬರ:

ರೈತನಂತೆ ಭೂಮಿಯಲ್ಲಿ ನಿರಂತರವಾಗಿ ಕೆಲಸ ಮಾಡುವ ಎರೆಹುಳುಗಳು ನೈಸರ್ಗಿವಾಗಿ ಪೋಷಕಾಂಶ ಯುಕ್ತ ಗೊಬ್ಬರವನ್ನು ರೈತರಿಗೆ ಒದಗಿಸಲು ಸಹಾಯಕವಾಗಿದೆಎಲ್ಲಾ ಸಾವಯವ ಬೆಳೆಗಳ ಕಸಕಡ್ಡಿ, ವ್ಯರ್ಥ ಪದಾರ್ಥಗಳನ್ನು ಬಳಸಿಕೊಂಡು  ಎರೆಹುಳದ ಸಹಾಯದಿಂದ ಒಳ್ಳೆಯ ಗೊಬ್ಬರ ತಯಾರಿಸಬಹುದುಮಣ್ಣಿನ ಫಲವತ್ತತೆ ಹೆಚ್ಚಿಸಲು  ಗೊಬ್ಬರ ಉಪಯುಕ್ತವಾಗಿದೆ.


ಪ್ರತಿಯೊಬ್ಬ ರೈತ ಸಹಜ ಮತ್ತು ಸುಸ್ಥಿರ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವದು ಇಂದಿನ ಅವಶ್ಯಕತೆಯಾಗಿರುತ್ತದೆ ಹಾಗೂ  ಮೇಲ್ಕಂಡ ಎಲ್ಲಾ ಸಮಸ್ಯೆಗಳಿಗೆ ಚಿಕ್ಕ ಉತ್ತರ “ಎರೆಹುಳು ಕೃಷಿ”. ಹಲವಾರು ಸಂಶೋಧನೆಗಳಿಂದ ತಿಳಿದುಬಂ ಸಂಗತಿ ಏನೆಂದರೆಸಾಗುವಳಿಗೆ ಯೋಗ್ಯವಾದ ಮಣ್ಣಿನ 3 ಸೆಂ.ಮೀಮೇಲ್ಪದರು ತಯಾರಾಗಲು ಒಂದು ಸಾವಿರ ವರ್ಷಗಳು ಬೇಕುಆದರೆ  ಪರೋಪಕಾರಿ ಜೈವಿಕ ನೇಗಿಲಾದ ಎರೆಹುಳುವಿನಿಂದ ಕಲ್ಲು ಉಸುಕಿನ ಹೊಲವನ್ನು ಹುಲ್ಲು ಗದ್ದೆಯಾಗಿ ಪರಿವರ್ತಿಸಲು ಕೇವಲ ಹತ್ತು ವರ್ಷಗಳು ಸಾಕುಸದಾ ಚಲನೆಯಲ್ಲಿರುವ ಎರೆಹುಳುಗಳು ಭೂಮಿಯಲ್ಲಿ ಮಾಡು ರಂಧ್ರಗಳಿಂದ, ಭೂಮಿಯ ಒಳಗೆ ಗಾಳಿ ಪ್ರವೇಶಿಸಲು ಯೋಗ್ಯವಾಗುತ್ತದೆ. ಎರೆಹುಳು ಇಡುವ ಹಿಕ್ಕೆಯಿಂದ ಮಣ್ಣಿಗೆ ಜೈವಿಕ ಗೊಬ್ಬರ ದೊರೆತಂತಾಗಿ, ಮಣ್ಣಿನಲ್ಲಿ ಜೈವಿಕ ಗುಣ ನಿರ್ಮಾಣವಾಗುವುದರ ಜತೆಗೆ, ಬೆಳೆಗಳ ಬೆಳೆವಣಿಗೆ ಆರೋಗ್ಯ ಹಿತದೃಷ್ಠಿಯಲ್ಲಿ ಎರೆಹುಳು ಕೆಲಸ ಮುಖ್ಯವಾಗಿದೆ.

ಕಳೆ ನಿರ್ವಹಣೆ:
ಕಳೆಯನ್ನು ಬಹುತೇಕ ರೈತರು ಶತ್ರುವಾಗಿ ಪರಿಗಣಿಸುತ್ತಾರೆ. ಆದರೆ, ಕಳೆ ಕೂಡ ರೈತನ ಮಿತ್ರ ಎಂಬುದನ್ನು ರೈತರು ತಿಳಿದುಕೊಳ್ಳಬೇಕು. ಹೌದು, ಕಳೆ ಕೃಷಿ ಭೂಮಿಯಲ್ಲಿ ಲಕ್ಷ್ಮೀ ಇದ್ದಹಾಗೆ. ಅದು ಭೂಮಿಯಲ್ಲಿ ಇದ್ದರೆ ಲಾಭದಾಯಕ, ಕಳೆ ಅಥವಾ ಕಸ ಬಂತು ಎಂದರೆ ನಾವು ಕಳೆ ನಾಶಕವನ್ನು ಬಳಸಿ ಕಳೆ ಹಾಳು ಮಾಡಲು ನೋಡುತ್ತೆವೆ. ಆದರೆ ಅಲ್ಲಿ ರೈತರು ತಿಳಿಯ ಬೇಕಾದ ಸಂಗತಿ ಎಂದರೆ, ಅಲ್ಲಿ ಕಳೆ ಮಾತ್ರ ಹಾಳಾಗುವುದಿಲ್ಲ; ಕಳೆಯ ಜತೆ ಬೆಳೆಯೂ ನಾಶವಾಗಿ ಹೋಗುವುದು ಖಂಡಿತ. ಹೀಗಿರುವಾಗ ರೈತರು ಯಾವುದೇ ಕಳೆ ನಾಶಕಗಳನ್ನು ಬಳಸದೆ, ಕಳೆಯನ್ನು ಭೂಮಿಯಲ್ಲಿಯೇಲ್ಚಿಂಗ್ ಅಥವಾ ಭೂಮಿಯ ಮೇಲೆ ಹೊದಿಕೆ ಮಾಡಿದರೆ, ಅಲ್ಲಿಯೇ ಕಾಂಪೋಸ್ಟ್ ಆಗಿ ಭೂಮಿಗೆ ಮತ್ತಷ್ಟು ಗೊಬ್ಬರವನ್ನು ನೀಡಿದಂತಾಗುತ್ತದೆ.  ಸೂಕ್ಷ್ಮಾಣು ಜೀವಿಗಳಿಗೆ ಆಹಾರವಾಗಿ ಪರಿಣಮಿಸಿ, ಭೂಮಿಯನ್ನು ಆರೋಗ್ಯವಾಗಿಡಲು ಸಹಾಯಕವಾಗುತ್ತದೆ.    

ಇನ್ನು ಯಾವುದಾದರೂ ರೋಗ, ಕೀಟ ಬಾಧೆಗಳು ಕಂಡು ಬಂದಲ್ಲಿ, ರಾಸಾಯನಿಕ ಸ್ಪ್ರೇಗಳನ್ನು ಬಳಸದೆ ಬೇವಿನ ಎಣ್ಣೆ, ಬೇವಿನ ಹಿಂಡಿ, ಇನ್ನಿತರ ಸಾವಯವ ಕೃಷಿಯ ದಾರಿಯಲ್ಲಿಯೇ ನಿರ್ವಹಣೆಯನ್ನು ಮಾಡುವುದು ಉತ್ತಮ. ನಾವು ಯಾವುದೇ  ಕಳೆನಾಶಕ, ಕೀಟ ನಾಶಕಗಳನ್ನು ಬಳಸಿದರೆ, ಬೆಳೆ ನಾಶವನ್ನೂ ಸಹ ಉಚಿತವಾಗಿ ಮಾಡಿಕೊಳ್ಳಬೇಕಾಗುತ್ತದೆ.

ಮಣ್ಣಿನಲ್ಲಿ ಪೋಷಕಾಂಶಗಳ ಮಹತ್ವ ಎಷ್ಟು ಮುಖ್ಯ ಎಂಬ ಸಮಗ್ರ ಮಾಹಿತಿ ತಿಳಿಯಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ 

https://www.youtube.com/watch?v=BEsQvquZ_Yo&t=50s

ವರದಿ: ವನಿತಾ ಪರಸಣ್ಣವರ್

 




Blog




Home    |   About Us    |   Contact    |   
microbi.tv | Powered by Ocat Web Promotion Service in India | Promoting Websites through Ocat Content Marketing