ಮಹಿಳೆಯರ ಮುಡಿಗೆ ಸೌಂದರ್ಯವನ್ನು ಹೆಚ್ಚಿಸುವ ಗುಲಾಬಿ ಹೂಗಳು, ಸೌಂದರ್ಯವರ್ಧಕಗಳ ಬಳಕೆಯಲ್ಲಿಯೂ ಪ್ರಮುಖ ಪಾತ್ರವಹಿಸಿವೆ. ಇನ್ನು ಅಷ್ಟೇ ಅಲ್ಲ ದೇಹದ ಆರೋಗ್ಯವನ್ನು ಕಾಪಾಡುವಲ್ಲಿಯೂ ಗುಲಾಬಿ ಹೂ ಕಾರ್ಯವನ್ನು ನಿರ್ವಹಿಸುತ್ತದೆ. ಇಷ್ಟೊಂದು ಅನುಕೂಲಕರವಾಗಿರುವ ಈ ಗುಲಾಬಿ ಹೂ ಬೆಳೆಯನ್ನು ಬೆಳೆಯುವುದರಲ್ಲಿ ಎಲ್ಲಾ ರೈತರು ಯಶಸ್ವಿಯಾಗುವುದಿಲ್ಲ. ನೋಡುವುದಕ್ಕೆ ಆಕರ್ಷಿತವಾಗಿರುವ ಹೂಗಳ ಬೆಳೆ, ರೋಗ, ಕೀಟ ಬಾಧೆಯನ್ನು ಬಹುಬೇಗ ತಂದೊಡ್ಡಿಕೊಳ್ಳುತ್ತವೆ. ಆದರೆ ಇಲ್ಲೊಬ್ಬ ಕೃಷಿಕರ ಗುಲಾಬಿ ತೋಟದಲ್ಲಿ ಯಾವುದೇ ರೋಗ, ಕೀಟಬಾಧೆಗಳ ಸುಳಿವೇ ಇಲ್ಲ.
ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲೂಕು, ಇಲ್ಲೂರು ಗ್ರಾಮದ ಕೃಷಿಕರಾದ ಮಂಜುನಾಥ್ ಅವರು, ತಮ್ಮ 10 ಗುಂಟೆ ಕೃಷಿ ಭೂಮಿಯಲ್ಲಿ ಗುಲಾಬಿ ಮತ್ತು ಸೇವಂತಿಗೆ ಬೆಳೆಯನ್ನು ಬೆಳೆದಿದ್ದಾರೆ. ಇವರ ತೋಟದ ಹೂಗಳಲ್ಲಿ ಎತ್ತ ಹುಡುಕಿದರೂ, ಒಂದು ರೋಗ, ಕೀಟ ಬಾಧೆ ಕಾಣುವುದಿಲ್ಲ. ಇದಕ್ಕೆ ಕಾರಣ ರೈತ ಅನುಸರಿಸುತ್ತಿರುವ ಸಾವಯವ ಕೃಷಿ ಪದ್ಧತಿ. ಸಾವಯವ ಕೃಷಿ ಪದ್ಧತಿಯಲ್ಲಿ ಜೈವಿಕ ಗೊಬ್ಬರಗಳನ್ನು ಬಳಸಿ, ರೈತ ಮಂಜುನಾಥ್ ಹೂ ಬೆಳೆಗಳನ್ನು ನಿರ್ವಹಣೆ ಮಾಡುತ್ತಿದ್ದಾರೆ. ಇವರ ತೋಟದ ಗುಲಾಬಿ ಹೂಗಳು ದಿನದಿಂದ ದಿನಕ್ಕೆ ಇಳುವರಿಯನ್ನು ಹೆಚ್ಚಾಗಿ ನೀಡುತ್ತಿದ್ದು, ಮಾರ್ಕೆಟ್ ನಲ್ಲಿ ಸಾಕಷ್ಟು ಡಿಮ್ಯಾಂಡ್ ಕೂಡ ಇದೆ.
10 ಗುಂಟೆಯಲ್ಲಿ ಸುಮಾರು 450 ಗುಲಾಬಿ ಗಿಡಗಳನ್ನು ಬೆಳೆದಿದ್ದು, ಹೂಗಳ ಕ್ವಾಲಿಟಿ ಕಂಡು ಮಾರುಕಟ್ಟೆಯಿಂದ ಸಾಕಷ್ಟು ಬೇಡಿಕೆ ಬರುತ್ತಿದೆ. ಇಂತಹ ಆರೋಗ್ಯಕರ ಬೆಳೆಗೆ ರೈತ ಮಂಜುನಾಥ್ ಹೆಚ್ಚು ಖರ್ಚು ಮಾಡಿಯೇ ಇಲ್ಲವಂತೆ. 10 ಗುಂಟೆಗೆ ಕೇವಲ 3000 ರೂ. ಖರ್ಚು ಮಾಡಿದ್ದು ತಿಂಗಳಿಗೆ 30 ಸಾವಿರ ರೂ. ಆದಾಯವನ್ನು ಪಡೆಯುತ್ತಿದ್ದಾರೆ.
ಮಂಜುನಾಥ್ ಅವರು ಗುಲಾಬಿ ಹೂ ಬೆಳೆಯಲ್ಲಿ ಯಾವ ಜೈವಿಕ ಗೊಬ್ಬರವನ್ನು ಬಳಸುತ್ತಿದ್ದಾರೆ..! ಹೆಚ್ಚು ಇಳುವರಿಯನ್ನು ಪಡೆಯಲು ಇವರು ಮಾಡುತ್ತಿರುವ ಕೃಷಿ ಕಾಯಕ ಹೇಗಿದೆ? ನೀವೂ ಕೂಡ ಗುಲಾಬಿ ಬೆಳೆಯಲ್ಲಿ ಹೆಚ್ಚಿನ ಲಾಭ ಪಡೆಯಬೇಕೆಂದರೆ
ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ. ಗುಲಾಬಿ ಬೆಳೆ ಇಳುವರಿಯ ಗುಟ್ಟು ಪಡೆದುಕೊಳ್ಳಿ.
https://www.youtube.com/watch?v=ZvPt6UsBTcY&t=510s
ವರದಿ: ವನಿತಾ ಪರಸಣ್ಣವರ್
Blog