ಹಾವೇರಿ ಜಿಲ್ಲೆ, ಹಾವೇರಿ ತಾಲೂಕಿನ ಕೃಷಿಕ ವಿರೂಪಾಕ್ಷಪ್ಪ ಅವರು, ತಮ್ಮ ಕಬ್ಬು ಬೆಳೆಗೆ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡಿದ್ದಾರೆ. ಇದರಿಂದಾಗಿ ಕೃಷಿ ಭೂಮಿಯಲ್ಲಿ ಉಳುಮೆ ಮಾಡುವ ಸಂದರ್ಭದಲ್ಲಿ, ಕೃಷಿಕನಿಗೆ ಮತ್ತು ಎತ್ತುಗಳಿಗೆ ಆಯಾಸವಾಗುತ್ತಿಲ್ಲ, ಬದಲಿಗೆ ಮತ್ತಷ್ಟು ಉತ್ಸಾಹ ಚಿಗುರುತ್ತಿದೆ. ಯಾಕಂದ್ರೆ ಕೃಷಿ ಭೂಮಿಯ ಜೈವಿಕ ಗುಣದಿಂದಾಗಿ ಕೃಷಿ ಭೂಮಿ ಮೃದುವಾಗಿದ್ದಾಳೆ.
ಕಬ್ಬು ಬೆಳೆಯ ಬೆಳವಣಿಗೆ:
ಸಮೃದ್ಧತೆ ತಾಂಡವವಾಡುತ್ತಿರುವ ಇಂತಹ ಮಣ್ಣಿನಲ್ಲಿ ಬೆಳೆಯುತ್ತಿರುವ ಕಬ್ಬು ಬೆಳೆ, ಬರಿ ಆರು ತಿಂಗಳ ಪ್ರಾಯದಲ್ಲೇ, 18 ರಿಂದ 20 ಗಣಿಕೆ ಹಾಗೂ 12 ರಿಂದ 15 ಮರಿಗಳನ್ನ ಒಳಗೊಂಡು ವರ್ಷದ ಕಬ್ಬನ್ನ ಮೀರಿಸುವಷ್ಟು ಸದೃಢವಾಗಿದೆ. ಇಂತಹ ಅಪರೂಪದ ಬದಲಾವಣೆಗೆ ನೇರ ಕಾರಣ ಕೃಷಿಕ ಅಳವಡಿಸಿಕೊಂಡಿರುವ ಸಾವಯವ ಕೃಷಿ ಪದ್ಧತಿ.
ಒಟ್ಟಿನಲ್ಲಿ ಒಂದು ಬೆಳೆ ಆರೋಗ್ಯಕರ ಅಥವಾ ಅನಾರೋಗ್ಯದ ಬದಲಾವಣೆ ಕಾಣುತ್ತಿದೆ ಅಂದ್ರೆ ಆ ಬದಲಾವಣೆಗೆ ರೈತ ಅಳವಡಸಿದ ಕೃಷಿ ಪದ್ಧತಿಯೇ ಮೂಲ ಕಾರಣ. ಹಾಗಾಗಿ ಕೃಷಿಕರು ಈ ಒಂದು ವಿಚಾರವನ್ನ ಸೂಕ್ಷ್ಮವಾಗಿ ಅರಿತು, ವೈಜ್ಞಾನಿಕ ಹಾದಿಯಲ್ಲಿ ಸಾಗುವುದು ಬುದ್ಧಿವಂತಿಕೆ.
ವರದಿ: ಶ್ವೇತಾ ಕಲಕಣಿ
ಇನ್ನು ಹಚ್ಚಿನ ಮಾಹಿತಿಗಾಗಿ ತಿಳಿಯಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://www.youtube.com/watch?v=JI3MPMVlJHk&t=69s
#ORGANICSUGARCANEFARMING #ORGANICSUGARCANEFARMINGINKARNATAKA #ORGANICSUGARCANEFARMINGINKANNADA #NATURALSUGARCANEFARMING #KNOWABOUTSUGARCANEPRODUCTION #SUGARCANECULTIVATIONMETHODS #AGRICULTURETECHNOLOGY #SUGARCANEHARVESTING
Blog