ಇದೆಲ್ಲಕ್ಕಿಂತ ಮೊದಲು ರೈತರು ತಿಳಿಯಲೇ ಬೇಕಾದ ವಿಚಾರವೇನು ಅಂದ್ರೆ, ಯಾವುದೇ ಬೆಳೆ ಬೆಳೆಯಲು ಮುಂದಾದಾಗ ಪೂರ್ವ ಸಿದ್ಧತೆ ಹಾಗೂ ವೈಜ್ಞಾನಿಕ ಕ್ರಮಗಳು ಬಹಳ ಪ್ರಮುಖವಾದದ್ದು. ಆಗ ರೈತ ಅಂದುಕೊಂಡ ಇಳುವರಿ, ಕ್ವಾಲಿಟಿ, ಮತ್ತು ಆದಾಯ ಸಿಗಲು ಸಾಧ್ಯವಾಗುತ್ತದೆ.
ಭೂಮಿ ಸಿದ್ಧತೆ:
ಮಳೆಯಾಶ್ರಿತದಲ್ಲಿ ಚೆಂಡು ಹೂ ಬೆಳೆಯಲು ಮುಂದಾಗುವ ರೈತರು, ಬೆಳೆ ಬೆಳೆಯುವ ಪೂರ್ವದಲ್ಲಿ ಹಸಿರೆಲೆ ಗೊಬ್ಬರ ಮತ್ತು ಮಾಗಿ ಉಳುಮೆಯಿಂದ ಭೂಮಿ ಸಿದ್ಧಗೊಳಿಸಿಬೇಕು. ಆನಂತರ ನಾಟಿಗೆ ಸಿದ್ಧವಿರುವ ಚೆಂಡು ಹೂ ಸಸಿಗಳನ್ನ ಬೀಜೋಪಚಾರದಿಂದ ಬೀಜೋಪಚರಿಸಿ ನಾಟಿ ಮಾಡಬೇಕು. ಹೀಗೆ ಮಾಡಿದ್ರೆ ಬೆಳೆಗೆ ಪೋಷಕಾಂಶದ ಕೊರತೆಯಾಗಿ ರೋಗ ಮತ್ತು ಕೀಟ ಬಾಧೆಗೆ ತುತ್ತಾಗುವ ಸಾಧ್ಯತೆ ಕಡಿಮೆಯಾಗುತ್ತದೆ.
ಕೃಷಿಕನ ಪರಿಚಯ:
ಕೋಲಾರ ಜಿಲ್ಲೆ ಕೋಲಾರ ತಾಲೂಕಿನ ಕೃಷಿಕ ಶಿವರಾಜ್ ಅವರು, ಮಳೆಯಾಶ್ರಿತದಲ್ಲಿ ಚೆಂಡು ಹೂ ಬೆಳೆ ಬೆಳೆಯುತ್ತಿದ್ದಾರೆ. ಶ್ರಾವಣ ಮಾಸವಂತು ಇವರ ನೇರ ಟಾರ್ಗೆಟ್. ಸಾವಯವ ಕೃಷಿ ಪದ್ಧತಿ ಅನುಸಾರವಾಗಿ ಭೂ ಸಿದ್ಧತೆ ಮತ್ತು ಬೀಜೋಚಾರ ಕ್ರಮಗಳನ್ನ ಕೈಗೊಂಡರು. ನಂತರ ಬೆಳೆಗೆ ಸಾವಯವ ಕೃಷಿಯಲ್ಲೆ ಸಾವಯವ ಗೊಬ್ಬರಗಳನ್ನ ನೀಡಿ ಚೆಂಡು ಹೂವಿನ ಬದುಕನ್ನ ಶೃಂಗಾರಗೊಳಿಸಿದರು.
ಚೆಂಡು ಹೂವಿನ ಇಳುವರಿ:
ಅರ್ಧ ಎಕರೆಯಲ್ಲಿ ಚೆಂಡು ಹೂ ಬೆಳೆಯಲು ಮುಂದಾದ ಶಿವಾರಾಜ್ ಅವರು, ಇಂದು ಟನ್ ಗಟ್ಟಲೇ ಇಳುವರಿ ಪಡೆಯುತ್ತಿದ್ದಾರೆ. ಹೌದು, ಇಂದಿನ ಅವೈಜ್ಞಾನಿಕ ಕೃಷಿ ಪದ್ಧತಿಯ ಕಾಲದಲ್ಲಿ, ಕೃಷಿಕರು ಎಕರೆಯಲ್ಲಿ ಒಂದು ಟನ್ ಇಳುವರಿ ತೆಗೆದುಕೊಳ್ಳುತ್ತಾರೆ. ಆದ್ರೆ ಸಾವಯವ ಕೃಷಿಯಡಿಯಲ್ಲಿ, ಅರ್ಧ ಎಕರೆಯಲ್ಲಿ ಟನ್ ಗಿಂತ ಹೆಚ್ಚು ಇಳುವರಿ ತೆಗೆದುಕೊಂಡು ಇತರರಿಗೆ ಸ್ಫೂರ್ತಿಯಾಗಿದ್ದಾರೆ.
ಸಾವಯವದಲ್ಲಿ ಚೆಂಡು ಹೂವಿನ ವಿಶೇಷತೆ:
ಕೃಷಿಕ ಶಿವರಾಜ್ ತಮ್ಮ ಚೆಂಡು ಹೂವಿಗೆ ಸಾವಯವ ಕೃಷಿ ಅನುಸರಿಸಿಕೊಂಡಿದ್ದರಿಂದ, ಹೂವಿನಲ್ಲಿ ಸಾಕಷ್ಟು ರೀತಿಯ ಬದಲಾವಣೆಗಳು ಕಾಣಸಿಗುತ್ತವೆ. ಹೌದು ಈ ಹೂ ತೋಟದಲ್ಲಿ ಕೃಷಿ ಕಾರ್ಮಿಕರು ಓಡಾಡುತ್ತಿದ್ದರೆ, ಎಲೆಗಳು ಮತ್ತು ಕಾಂಡಗಳು ಮೃದುವಾಗಿರುವುದರಿಂದ ಯಾವುದೆ ಗಾಯ ಮತ್ತು ತುರಿಕೆ ಬರುವುದಿಲ್ಲ. ಹೂಗಳನ್ನ ನೋಡುತ್ತಿದ್ದರೆ, ನೋಡುತ್ತಲೇ ಇರುಬೇಕು ಎಂದೆನಿಸುವಷ್ಟು ಆಕರ್ಷಿತವಾಗಿವೆ. ಮಾರುಕಟ್ಟೆಯಲ್ಲಿ ಹೂವಿನ ರೇಟು ಕಡಿಮೆಯಾದ್ರೆ, ಎರಡು ಮೂರು ದಿನ ಇಟ್ಟು ಮಾರಿದರು ಕ್ವಾಲಿಟಿ ಮಾತ್ರ ಕಡಿಮೆಯಾಗಲ್ಲ ಅಂತಾರೆ ಕೃಷಿಕರು.
ನಿರ್ವಹಣಾ ವೆಚ್ಚ:
ರಾಸಾಯನಿಕದಲ್ಲಿ ನಿರ್ವಹಣೆ ಮಾಡಲು ಮುಂದಾದ್ರೆ, ಸಾಕಷ್ಟು ಭಾರಿ ಪೋಷಕಾಂಶಗಳನ್ನ ನೀಡಬೇಕು. ಇದರ ಜತೆಗೆ ಆಗಾಗ ಹೆಚ್ಚು ಸ್ಪ್ರೇಗಳನ್ನ ಕೊಡ್ತಾ ಇರಬೇಕು. ಇದರಿಂದ ರೈತರಿಗೆ ಆಗುವ ಖರ್ಚು ಮಾತ್ರ ಹೆಚ್ಚು. ಅದೇ ಸಾವಯವದಲ್ಲಿ ಕಡಿಮೆ ಖರ್ಚು, ಕಡಿಮೆ ನಿರ್ವಹಣೆಯ ಮೂಲಕ ಇಂದು ಅರ್ಧ ಎಕರೆಯಲ್ಲಿ ಟನ್ ಗಟ್ಟಲೆ ಇಳುವರಿ ಪಡೆದು ಅಚ್ಚರಿಗೆ ಕಾರಣರಾಗಿದ್ದಾರೆ.
ಒಟ್ಟಿನಲ್ಲಿ ಕೃಷಿಕರು ಸಾವಯವದಲ್ಲಿ ಕೃಷಿ ಕಾರ್ಯವನ್ನ ತೊಡಗಿಸಿಕೊಂಡರೆ, ಕೃಷಿ ಭೂಮಿ ಮತ್ತು ಬೆಳೆ ನೆಮ್ಮದಿಯಿಂದ ಇರುತ್ತದೆ ಎಂಬುವುದಕ್ಕೆ ಕೃಷಿಕ ಶಿವರಾಜ್ ಅವರ ಕೃಷಿ ಜೀವನವೆ ಹಿಡಿದ ಕನ್ನಡಿಯಾಗಿದೆ.
ವರದಿ: ಶ್ವೇತಾ ಕಲಕಣಿ
ಇನ್ನು ಹಚ್ಚಿನ ಮಾಹಿತಿಗಾಗಿ ತಿಳಿಯಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://www.youtube.com/watch?v=09y3kBhj8zs&t=53s