ಮಣ್ಣಿನ ಫಲವತ್ತತೆ:
ಬಾಳೆ ಮತ್ತು ಅಡಿಕೆ ಬೆಳೆಗೆ ಸಾವಯವ ಕೃಷಿ ಪದ್ಧತಿ ಅನುಸರಿಸಿದ್ದರಿಂದ ಕೃಷಿ ಭೂಮಿಯಲ್ಲಿ ಜೈವಿಕ, ಭೌತಿಕ, ರಾಸಾಯನಿಕ ಗುಣಗಳು ಅಭಿವೃದ್ಧಿಯಾಗಿವೆ.
ಜೈವಿಕ ಗುಣ: ಮಣ್ಣಿನಲ್ಲಿ ಅಸಂಖ್ಯಾತ ಸೂಕ್ಷ್ಮಾಣು ಜೀವಿಗಳು ಮತ್ತು ಎರೆಹುಳುಗಳು ನೆಲೆಯೂರಿರುವುದರಿಂದ ಕೃಷಿ ಭೂಮಿ ಮೃದುವಾಗಿದೆ. ಇದರಿಂದಾಗಿ ಮಣ್ಣಿನ ಆಳಕ್ಕೆ ನೀರು ಮತ್ತು ಗಾಳಿ, ಬೆಳಕು ಸರಾಗವಾಗಿ ಚಲಿಸುತ್ತಿವೆ. ಈ ಪ್ರಕ್ರಿಯೆಯಿಂದಾಗಿ ತೋಟದಲ್ಲಿ ಜೈವಿಕ ಗುಣ ಚೇತರಿಯಾಯಿತು.
ಭೌತಿಕ ಗುಣ: ಮಣ್ಣು ಮುಟ್ಟಿದರೆ ನಯವಾಗಿರುವುದರಿಂದ ಮಣ್ಣಿನ ರಚನೆ ಸುಧಾರಿಸಿದೆ. ಇದಷ್ಟೆ ಅಲ್ಲದೆ ಮಣ್ಣಿನಲ್ಲಿ ಪೋಷಕಾಂಶ ಸಮೃದ್ಧವಾಗಿದೆ. ಹೀಗಾಗಿ ಕೃಷಿಕನ ತೋಟದಲ್ಲಿ ಭೌತಿಕ ಗುಣವು ಸುಧಾರಿಸಿತು.
ರಾಸಾಯನಿಕ ಗುಣ: ಮಣ್ಣಿನಲ್ಲಿ ಉಪಕಾರಿ ಸೂಕ್ಷ್ಮಾಣು ಜೀವಿಗಳು ಮತ್ತು ಎರೆಹುಳುಗಳ ಚಟುವಟಿಕೆ ಕ್ರಿಯಾಶೀಲವಾಗಿದ್ದರಿಂದ ಮಣ್ಣಿನಲ್ಲಿ ಬಿದ್ದ ತ್ಯಾಜ್ಯ ಸಂಪೂರ್ಣವಾಗಿ ಜೈವಿಕ ವಿಘಟನೆಗೊಂಡಿದೆ. ಹೀಗಾಗಿ ತೋಟದಲ್ಲಿ ಸಾವಯವ ಇಂಗಾಲಕ್ಕೆ ಕೊರತೆನೆಯಿಲ್ಲ.
ರಸ ಸಾರ:
ಕೃಷಿ ಭೂಮಿ ಸರಿಸುಮಾರು 2.5 ರಿಂದ 7.5 ವರೆಗೆ ರಸ ಸಾರವನ್ನ ಹೊಂದಿದ್ದರೆ, ಆ ಒಂದು ಕೃಷಿ ಭೂಮಿಯಲ್ಲಿ ಬೆಳೆದ ಬೆಳೆಗೆ ಯಾವುದೇ ಆಹಾರದ ಕೊರತೆಯಾಗದೆ, ಬೆಳೆ ಆರೋಗ್ಯಕರವಾಗಿ ಬೆಳೆಯುತ್ತದೆ. ಅದಕ್ಕೆ ತಾಜಾ ಉದಾಹರಣೆ ಅಂದ್ರೆ ಈ ತೋಟದಲ್ಲಿ ಬೆಳೆಯುತ್ತಿರುವ ಬಾಳೆ ಬೆಳೆಯೇ ಸಾಕ್ಷಿ. ಹೌದು ಬೆಳೆಯ ಬೆಳೆವಣಿಗೆ ಹಂತ ಅಥವಾ ಕಟಾವಿನ ಹಂತ ತಲುಪುತ್ತಿದ್ದಂತೆ ಬೆಳೆಗೆ ಸಾಕಷ್ಟು ರೀತಿಯ ಅಪಾಯಕಾರಿ ರೋಗಗಳು ತಗಲುತ್ತವೆ. ಆದ್ರೆ ಈ ತೋಟ ಮಾತ್ರ ಹಚ್ಚ ಹಸಿರಾಗಿ ಗೊನೆಗಳನ್ನ ಹೊತ್ತು ಆರೋಗ್ಯದ ಸೂಚನೆ ನೀಡುತ್ತಿವೆ.
ವರದಿ: ಶ್ವೇತಾ ಕಲಕಣಿ
ಇನ್ನು ಹಚ್ಚಿನ ಮಾಹಿತಿಗಾಗಿ ತಿಳಿಯಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://www.youtube.com/watch?v=vHG_oeXmMAU&t=65s
#DrSoilBanana #OrganicBanana #Bumperyieldinbanana #howtodoorganicfarming #organicbanana #farminginKarnataka #organicbananaripening #organicbananafertilizer #OrganicbananafarminginKannada #organicarecanut #arecanut #organicfarming #organicagriculture #HowfarmerearnsinLakhsinarecanut #OrganicfarmingArecanut #Howtogrowhealthyarecanut #trees #Whichfertilizerisbestforarecanut
Blog