ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಕೃಷಿಕ, ಹೊನ್ನಪ್ಪ ಅವರು, ಸೊರಗುತ್ತಿದ್ದ ಅಡಿಕೆ ಬೆಳೆಗೆ ಸಾವಯವ ಕೃಷಿಯ ಮೂಲಕ ಡಾ.ಸಾಯಿಲ್ ಅರೇಕಾ ಸ್ಪೆಷಲ್ ನೀಡಿದ್ರು. ಇದರಿಂದಾಗಿ ಹಳದಿಯಾಗಿದ್ದ ಅಡಿಕೆ ಬೆಳೆ, ಹಸಿರು ಬಣ್ಣಕ್ಕೆ ತಿರುಗಿತು. ಆರೋಗ್ಯಕರ ಹೊಸ ಸುಳಿ ಚಿಗುರಲು ಪ್ರಾರಂಭವಾಯಿತು. ಇಂತಹ ಬದಲಾವಣೆ ಕಂಡ ಕೃಷಿಕ ಹೊನ್ನಪ್ಪ ಅವರು, ಹುದುಗಿದ್ದ ಕನಸುಗಳಿಗೆ ಮತ್ತೆ ಜೀವ ನೀಡಿದರು. ಇದಷ್ಟೆ ಅಲ್ಲದೆ ಮುಂಗಾರು ಹಂಗಾಮಿನಲ್ಲಿ ನಾಟಿಗೆ ಸಜ್ಜಾಗಿದ್ದ ಮೆಕ್ಕೆಜೋಳ ಮತ್ತು ಈರುಳ್ಳಿ ಬೆಳೆಗೂ ಸಹಿತ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು ನಿರ್ಧಾರ ಮಾಡಿದ್ರು.
ಮೆಕ್ಕೆಜೋಳ ಮತ್ತು ಈರುಳ್ಳಿ ಬೆಳೆ:
ಮೆಕ್ಕೆಜೋಳ ಮತ್ತು ಈರುಳ್ಳಿ ಬೆಳೆ ಬಿತ್ತನೆ ಪೂರ್ವದಲ್ಲಿ ಬೀಜಗಳಿಗೆ ಬೀಜೋಪಚಾರದಿಂದ ಉಪಚರಿಸಿ, ನಾಟಿ ಮಾಡಿದ್ರು. ಇದರಿಂದಾಗಿ ಬೆಳೆಗಳು ಉತ್ತಮವಾಗಿ ಮೊಳಕೆಯೊಡೆದು, ಬಿಳಿ ಬೇರು ಹಾಗೂ ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸಿಕೊಂಡು ಆರೋಗ್ಯದಿಂದ ಸಂಭ್ರಮಿಸುತ್ತಿವೆ.
ಸಾವಯವ ಕೃಷಿಯಿಂದ ತೋಟದ ಬದಲಾವಣೆ:
ಕೃಷಿಕ ಹೊನ್ನಪ್ಪ ಅವರು, ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡಿದ್ದರ ಫಲವಾಗಿ ಕೃಷಿ ಭೂಮಿ ಫಲವತ್ತಾಗಿದೆ. ಇದನ್ನ ಹೇಗೆ ಗುರುತಿಸಬಹುದು ಅಂದ್ರೆ, ತೋಟದಲ್ಲಿ ಎಲ್ಲಂದರಲ್ಲಿ ಎರೆಹುಳುಗಳು, ಸಾವಯವ ಇಂಗಾಲ, ಹೀಗಾಗಿ ಮಣ್ಣು ಸಡಿಲವಾಗಿದೆ.
ಒಟ್ಟಿನಲ್ಲಿ ಕೃಷಿಕ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡಿದ್ದರಿಂದ ಬೆಳೆ, ಸಮೃದ್ಧವಾಗಿವೆ, ಉತ್ತಮ ಇಳುವರಿಯತ್ತ ಹೆಜ್ಜೆ ಹಾಕುತ್ತಿವೆ. ಇದರೊಂದಿಗೆ ಕೃಷಿಗೆ ಮೂಲಾಧಾರವಾದ ಕೃಷಿ ಭೂಮಿ ಸಹಿತ ಜೈವಿಕ ಗುಣ, ಭೌತಿಕ ಗುಣ, ರಾಸಾಯನಿಕ ಗುಣಗಳಿಂದ ಸಂಪದ್ಭರಿತವಾಗಿದೆ.
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ:
https://www.youtube.com/watch?v=RfsXrF9kdbQ&t=100s
ವರದಿ: ಶ್ವೇತಾ ಕಲಕಣಿ