ಗ್ರಾಮ ಪಂಚಾಯ್ತಿ ಸದಸ್ಯರಾದ ಉಮೇಶ್ ಯಾದವ್ ರ ಅಡಿಕೆ ತೋಟ ಹಿಂದೆ ಬಹಳ ಹೀನಾಯ ಸ್ಥಿತಿಯಲ್ಲಿತ್ತು. ತಾಲೂಕಿನ ಮುಖ್ಯರಸ್ತೆಯಲ್ಲೇ ತೋಟವಿರುವುದರಿಂದ ದಾರಿಹೋಕರು 'ತೋಟವನ್ನು ಹಾಳುಬಿಟ್ಟಿದ್ದಾನೆ' ಎಂದು ನಿಂದನೆ ಮಾಡುತಿದ್ದರು. ಇದನ್ನೆಲ್ಲ ಕೇಳಿ ರೋಸಿಹೋದ ಇವರ ಬುದ್ಧಿವಂತ ಹೆಂಡತಿ ರಾಧಾ(ಸಾಫ್ಟ್ ವೇರ್ ಉದ್ಯೋಗಿ) ಮೈಕ್ರೋಬಿ ಸಂಸ್ಥೆಯ ಹೆಡ್ ಆಫೀಸಿಗೆ ಫೋನು ಮಾಡಿ ತುರುವೇಕೆರೆ ಪ್ರತಿನಿಧಿಯ ಫೋನ್ ನಂಬರನ್ನು ಪಡೆದುಕೊಂಡು ಕೂಡಲೇ ಅಂಗಡಿಗೆ ಬಂದು ಡಾಕ್ಟರ್ ಸಾಯಿಲ್ ಅರೇಕ ಸ್ಪೆಷಲ್ ನ್ನು ಖರೀದಿಸಿ ತಮ್ಮ ತೋಟಕ್ಕೆ ಹಾಕಿದರು.
ಹಾಕಿದ 3 ತಿಂಗಳಲ್ಲೇ ಎಂಥ ಬದಲಾವಣೆ! ಇವತ್ತು ತೋಟವನ್ನು ಹತ್ತಾರು ಜನ ಆಶ್ಚರ್ಯದಿಂದ ನಿಂತು ನೋಡುವಂತಾಗಿದೆ! "ನಿಮ್ಮ ತೋಟ ಇಷ್ಟು ಚೆನ್ನಾಗಿ ಹೇಗಾಯ್ತು?!" ಎಂದು ಜನ ವಿಸ್ಮಯದಿಂದ ಉಮೇಶ್ ರನ್ನು ವಿಚಾರಿಸುತ್ತಿದ್ದಾರೆ. ಇವತ್ತು ಜನ ಗೌರವದಿಂದ ಹೊಗಳುತ್ತಿದ್ದಾರೆ. ಇದನ್ನು ನಮ್ಮೊಂದಿಗೆ ಸಂತೋಷದಿಂದ ಹಂಚಿಕೊಂಡು ತೋಟಕ್ಕೆ ಭೇಟಿ ನೀಡುವಂತೆ ಉಮೇಶ್ ಕೇಳಿಕೊಂದಿದ್ದರು. ಆದರಂತೆ ನಾವು ಅವರ ತೋಟಕ್ಕೆ ಹೋದೆವು.
ಅವರು ಡಾಕ್ಟರ್ ಸಾಯಿಲ್ ನ್ನು ಒಂದು ಬಾರಿ ಉಪಯೋಗಿಸಿದರೂ ಸಹ ಆ ತೋಟವೇನು ಅದ್ಭುತವಾಗಿರಲಿಲ್ಲ. ಅಲ್ಲಿ 'ಸ್ಪಿಂಡಲ್ ಬಗ್' ಕೀಟ ಬಾಧೆ ಇತ್ತು. ಅತಿಯಾದ ನೀರು ಕೊಡುವಿಕೆಯಿಂದ ಭೂಮಿ ಗಟ್ಟಿಯಾಗಿತ್ತು ಮತ್ತು ಹಿಡಿಮುಂಡಿಗೆ ರೋಗ ಶುರುವಾಗಿತ್ತು. ಹಾಗೆಯೇ ಅವರು ಟ್ರಾಕ್ಟರ್ ನಲ್ಲಿ ಉಳುಮೆ ಮಾಡಿಸಿ ತಪ್ಪುಮಾಡಿದ್ದರು. ಇವೆಲ್ಲವನ್ನು ಅವರಿಗೆ ಮನಮುಟ್ಟುವಂತೆ ಸಾಯಿಲ್ ಡಾಕ್ಟರ್ ಶಿಲ್ಪ ವಿವರಿಸಿದರು. ನಂತರ ಒಳ್ಳೆಯ ಅಡಿಕೆ ಮರದ ಬೇರುಗಳ ಅಭಿವೃದ್ಧಿ, ಬೆಳವಣಿಗೆ ಕುಂಠಿತವಾಗಿರುವ ಮರದ ಬೇರಿನ ಬೆಳವಣಿಗೆಯನ್ನು ಅವರಿಗೆ ಕಣ್ಣಾರೆ ತೋರಿಸಿ ಮನವರಿಕೆ ಮಾಡಿಕೊಡಲಾಯಿತು.
ಮಣ್ಣಿನ ಭೌತಿಕ, ರಾಸಾಯನಿಕ ಹಾಗೂ ಜೈವಿಕ ಗುಣಗಳ ಮಹತ್ವವನ್ನು ಹೇಳಿಕೊಡಲಾಯಿತು. ಅಡಿಕೆ ತೋಟದಲ್ಲಿ ದ್ವಿದಳ ಧಾನ್ಯಗಳನ್ನು ಹಾಕಿ ಹಸಿರೆಲೆ ಗೊಬ್ಬರವನ್ನು ಮಾಡಿಕೊಳ್ಳಲು ಸಲಹೆ ನೀಡಲಾಯಿತು. ನಂತರ ಇವರದ್ದೇ ಆದ ಇನ್ನೊಂದು ತೋಟಕ್ಕೆ ಭೇಟಿನೀಡಿದೆವು. ಅಲ್ಲಿ ಟ್ರಂಚನ್ನು ಹೊಡೆಸಿ ಅಡಿಕೆ ಸಸಿಗಳನ್ನು ನೆಟ್ಟಿದ್ದರು. ಆರು ತಿಂಗಳ ಸಸಿ ಮೇಲಕ್ಕೆ ಎದ್ದಿರಲಿಲ್ಲ. ಅತಿಯಾದ ಹುಲ್ಲು, ಕಾಂಗ್ರೆಸ್ ಗಿಡಗಳಿಂದ ತುಂಬಿಹೋಗಿತ್ತು. ಅಡಿಕೆ ಗಿಡಗಳ ಆರೈಕೆಯನ್ನು ಹೇಗೆ ಮಾಡಬೇಕೆಂದು ಉಮೇಶ್ ರಿಗೆ ಮನದಟ್ಟು ಮಾಡಲಾಯಿತು.
ತೋಟದಲ್ಲಿ ಅಂತರಬೆಳೆಗಳಾಗಿ ಬಾಳೆ, ನುಗ್ಗೆ, ಜಾಕಾಯಿ, ವಿವಿಧಬಗೆಯ ತರಕಾರಿಗಳು, ಹೂವಿನಗಿಡಗಳು, ಹಣ್ಣಿನಗಿಡಗಳನ್ನು ಹಾಕಿಕೊಳ್ಳಲು ಸಲಹೆ ನೀಡಲಾಯಿತು. ಹಾಗೆಯೇ ಆ ಊರಿನ ಮತ್ತೊಬ್ಬ ರೈತರಾದ ಜುಂಜೇಗೌಡರ ತೋಟಕ್ಕೆ ಭೇಟಿನೀಡಿದೆವು. ಅವರು ತಮ್ಮ ಅಡಿಕೆ ತೋಟದಲ್ಲಿ ವಿವಿಧ ತರಕಾರಿ, ಹೂವಿನ ಗಿಡಗಳನ್ನು ಅಂತರಬೆಳೆಗಳನ್ನಾಗಿ ಬೆಳೆಸಿದ್ದರು. ಅಲ್ಲಿ ಭೂಮಿಯು ಮೃದುವಾಗಿ ತೋಟವು ಚೆನ್ನಾಗಿರುವುದನ್ನು ಉಮೇಶ್ ರಿಗೆ ತೋರಿಸಲಾಯಿತು. ಬಾಳೆಗಿಡಗಳನ್ನು ಹಾಕಿದ್ದ ಜಾಗದಲ್ಲಿ ಸಾವಯವ ಇಂಗಾಲವು ಇರುವುದನ್ನು ತೋರಿಸಿ, ಅದರ ಪ್ರಾಮುಖ್ಯತೆಯನ್ನು ವಿವರಿಸಲಾಯಿತು. ಮತ್ತೊಂದು ಅಡಿಕೆ ತೋಟದಲ್ಲಿ ಕಾಳುಮೆಣಸನ್ನು ಬೆಳೆಸಲು ಸಲಹೆ ನೀಡಿದೆವು. ಅವರದ್ದೇ ಆದ ಉಳುಮೆಮಾಡದ ತೆಂಗಿನ ತೋಟವನ್ನು ತೋರಿಸಿ ಅಲ್ಲಿ ಎಷ್ಟೊಂದು ಕಾಯಿ ಬಿಟ್ಟಿರುವುದನ್ನು ಬೊಟ್ಟುಮಾಡಿ ಸಾವಯವ ಕೃಷಿಯ ಮಹತ್ವವನ್ನು ಮನವರಿಕೆ ಮಾಡಿದೆವು.
ವರದಿ: ಶ್ರೀನಿವಾಸ್ ರೈತ
8197443132
For more information watch this video
https://www.youtube.com/watch?v=bhNpqvfSRGs&t=160s
Blog