Blog

ಕೃಷಿಕನ ಪರಿಚಯ:

ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ಕೃಷಿಕ ಶಿವ ಪ್ರಕಾಶ್ ಅವರು, ಸಮಗ್ರ ಬೆಳೆಯ ಸುಲ್ತಾನರಾಗಿದ್ದಾರೆ. ಹೌದು ಸತತ 3 ವರ್ಷಗಳಿಂದ ಕೃಷಿಕ ಕಡಿಮೆ ಖರ್ಚಿನ ನಿರ್ವಹಣೆ ಅಂದ್ರೆ, ವೈಜ್ಞಾನಿಕ ಕೃಷಿಯಲ್ಲಿ(ಸಾವಯವ ಕೃಷಿ) ಸಾಗಿ, ತಮ್ಮ ಬೆಳೆ ಮತ್ತು ಭೂಮಿಯನ್ನ ಕಾಯ್ದುಕೊಂಡಿದ್ದಾರೆ.


ತೋಟದ ವಿಶೇಷತೆ:

ನಾಡಿನ ಖ್ಯಾತ ಸಾವಯವ ಕೃಷಿ ತಜ್ಞರಾದ ಡಾ.ಕೆ.ಆರ್ ಹುಲ್ಲುನಾಚೇಗೌಡರು ತಿಳಿಸುವಂತೆ, ಕೃಷಿಕ ಒಂದೇ ಬೆಳೆಗೆ ಸುಮ್ಮನಾಗದೆ, 6 ಬೆಳೆಗಳನ್ನ ಬೆಳೆಯುತ್ತಿದ್ದಾರೆ. ಅದು ಒಂದು ಬೆಳೆ ಮತ್ತೊಂದು ಬೆಳೆಗೆ ಪೂರಕವಾಗುವಂತೆ. ಇದರಿಂದ ಕೃಷಿಕನಿಗೆ ಆದಾಯ ಮತ್ತು ಇಳುವರಿಯ ಕೊರತೆ ಇಲ್ಲ.


ಏಕದಳದಲ್ಲಿ ದ್ವಿಳ ಧಾನ್ಯ ಬೆಳೆ:

ಏಕದಳ ಬೆಳೆಯಾದ ಮೆಕ್ಕೆಜೋಳ ಬೆಳೆಗೆ ಸಾರಜನಕದ ತೊಂದರೆಯಾಗಬಾರದೆಂಬ ನಿಟ್ಟಿನಲ್ಲಿ ಕೃಷಿಕ, ಮೆಕ್ಕೆಜೋಳದ ಮಧ್ಯ ದ್ವಿಧಾನ್ಯವಾಗಿರುವ ಹಲಸಂದಿ ಮತ್ತು ತೊಗರಿ ಬೆಳೆಗಳನ್ನ ಬೆಳೆದು, ನೈಸರ್ಗಿಕವಾಗಿ ಪೋಷಕಾಂಶಗಳನ್ನ ಸದ್ಭಳಕೆ ಮಾಡಿಕೊಂಡಿದ್ದಾರೆ. ಇದರಿಂದಾಗಿ ಏಕದಳ ಮತ್ತು ದ್ವಿಳ ಧಾನ್ಯ ಬೆಳೆಗಳು ಸಮೃದ್ಧವಾಗಿವೆ.


ಈರುಳ್ಳಿಯಲ್ಲಿ ವಿಭಿನ್ನ ಪ್ರಯೋಗ:

ಕೃಷಿಕ ಶಿವ ಪ್ರಕಾಶ್ ಅವರು ಒಂದು ಕಡೆ ಈರುಳ್ಳಿ ಬೆಳೆಯನ್ನ ಸಾಮಾನ್ಯವಾಗಿ ಬೆಳೆದಿದ್ದಾರೆ, ಮತ್ತೊಂದು ಕಡೆ ಬೆಡ್ ಗಳನ್ನ ನಿರ್ಮಿಸಿ ಬೆಳೆದಿದ್ದಾರೆ. ಈ ಎರಡು ಪ್ರಯೋಗದಲ್ಲಿ ಬೆಡ್ ಮೇಲೆ ಬೆಳೆದ ಈರುಳ್ಳಿ ಆರೋಗ್ಯಕರವಾಗಿದ್ದು, ಅತಿ ಹೆಚ್ಚು ವೈಜ್ಞಾನಿಕ ಬದಲಾವಣೆಗಳನ್ನ ಒಳಗೊಂಡಿದೆ.


ಕಳೆ ನಿರ್ವಹಣೆ:

ಈ ತೋಟದಲ್ಲಿ ಕಳೆಯ ಬೆಳವಣಿಗೆ ವಿರಳವಾಗಿದೆ. ಯಾಕಂದ್ರೆ ಸಾವಯವ ಕೃಷಿಯಿಂದ ಕೃಷಿ ಭೂಮಿ ಸಡಿಲವಾದ ಬೆನ್ನಲ್ಲೇ, ಕಳೆಗಳ ಬೆಳೆವಣಿಗೆ ಕುಂಠಿತವಾಗಿದೆ. ಹೀಗಿರುವಾಗ ಕೃಷಿಕನಿಗೆ ಯಾವುದೇ ಕಳೆ ನಾಶಕದ ಅವಶ್ಯಕತೆ ಎದುರಾಗಲಿಲ್ಲ, ಬದಲಿಗೆ ಶೂನ್ಯ ಖರ್ಚಿನಲ್ಲಿ ಕಳೆ ಮಾಯವಾಗಿದೆ.


ಸೈನಿಕ ಹುಳು ನಿಯಂತ್ರಣ:

ಕೃಷಿಕರು ಮೆಕ್ಕೆಜೋಳ ಬೆಳೆಯುತ್ತಿದ್ದಂತೆ ಸೈನಿಕ ಹುಳುವಿನ ಬಾಧೆ ನಿಯಂತ್ರಣಕ್ಕೆ ತಲೆ ಕೆಡಿಸಿಕೊಳ್ಳುವುದು ಸಾಮಾನ್ಯ. ಆದ್ರೆ ಕೃಷಿಕ ಶಿವ ಪ್ರಕಾಶ್ ಮಾತ್ರ ತಮ್ಮ ಮೆಕ್ಕೆಜೋಳಕ್ಕೆ ಸೈನಿಕ ಹುಳು ದಾಳಿ ಮಾಡಿದಾಗ ಎದೆಗುಂದಲಿಲ್ಲ. ಬದಲಿಗೆ ಬೇವಿನ ಎಣ್ಣೆ ಸ್ಪ್ರೇ ಮಾಡುವ ಮೂಲಕ ಸಮಸ್ಯೆ ಪರಿಹರಿಸಿಕೊಂಡಿದ್ದಾರೆ.

ಒಟ್ಟಿನಲ್ಲಿ ಕೃಷಿಕ ಶಿವ ಪ್ರಕಾಶ್ ಅವರು ಒಂದು ಬೆಳೆ ಮತ್ತೊಂದು ಬೆಳೆಗೆ ಪೂರಕವಾಗುವಂತೆ, 6 ಬೆಳೆಗಳನ್ನ ಬೆಳೆದರು. ಹಾಗೆ ತೋಟಗಾರಿಕೆ ಬೆಳೆ ಮತ್ತು ಮೇವು ಬೆಳೆಗಳನ್ನ ಬೆಳೆದಿದ್ದರೆ ಮತ್ತಷ್ಟು ಲಾಭ ಪಡೆಯಬಹುದಾಗಿತ್ತು.


ವರದಿ: ಶ್ವೇತಾ ಕಲಕಣಿ

 

ಈ ಕುರಿತು ಹೆಚ್ಚಿನ ಮಾಹಿತಿ ತಿಳಿಯಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

https://www.youtube.com/watch?v=rnpMp-4uOjw

 

#Howtodointegratedfarming  #integratedorganicfarming  #integratedfarmingsystem  #integratedfarminginkannada  #multiplefruitvarieties  #SuccessfulIntegratedfarming  #integratedfarming  



Blog




Home    |   About Us    |   Contact    |   
microbi.tv | Powered by Ocat Online Advertising Service in India