Blog

ಹಸಿರೆಲೆ ಗೊಬ್ಬರ ಬೆಳೆಗಳಲ್ಲಿ ಎರಡು ವಿಧಗಳಿವೆ.  ಮೊದಲನೆಯದು ಹಸಿರೆಲೆ ಗೊಬ್ಬರದ ಬೆಳೆಗಳನ್ನು ಬೆಳೆಯುವುದರ ಮೂಲಕ ಮತ್ತು ಅರಣ್ಯಗಳಲ್ಲಿ ಬೆಳೆದ ಮರಗಳ ಸೊಪ್ಪನ್ನು ಸಂಗ್ರಹಿಸಿ ಅದನ್ನು ಗಿಡಗಳ ಬುಡಕ್ಕೆ ಹಾಕುವುದು. ದಾಹರಣೆ: ಸೆಣಬು, ಡಯಂಚ, ಹೊಂಗೆ, ಎಕ್ಕೆ ಮುಂತಾದವುಗಳು.

        ಎರಡನೆಯದು ದ್ವಿದಳ ಧಾನ್ಯಗಳನ್ನು ಬೆಳೆದು ಉಳುಮೆ ಮಾಡಿ ಮಣ್ಣಿಗೆ ಸೇರಿಸಿಕೊಳ್ಳಬಹುದು. ದಾಹರಣೆ: ಹೆಸರು, ಅಲಸಂದಿ, ಉದ್ದು, ಅವರೆ, ಕಡಲೆ, ಶೇಂಗ, ಸೋಯಾಬೀನ್ ಮುಂತಾದವುಗಳು.

ಹಸಿರೆಲೆ ಗೊಬ್ಬರದ ಬೆಳೆಗಳನ್ನು ಬೆಳೆಯುವ ಸಮಯ:

ಮುಖ್ಯ ಬೆಳೆಗಳನ್ನು ಬೆಳೆಯುವ ಮೊದಲು 6 ರಿಂದ 10 ವಾರದವರೆಗೆ ಹಸಿರೆಲೆ ಗೊಬ್ಬರದ ಗಿಡಗಳಾದ ಸೆಣಬು, ಡಯಂಚ, ವೆಲ್ವೆಟ್ ಬೀನ್ಸ್ ಬೆಳೆಯಬಹುದು. ಅಥವಾ ದ್ವಿದಳ ಧಾನ್ಯದ ಬೆಳೆಗಳನ್ನು ಬೆಳೆದು, ಕಟಾವಿನ ನಂತರ ಉಳುಮೆ ಮಾಡಿ ಆ ಬೆಳೆಯನ್ನು ಮಣ್ಣಿಗೆ ಸೇರಿಸಿಕೊಳ್ಳಬೇಕು. ನಂತರ ಮುಖ್ಯ ಬೆಳೆಯನ್ನು ಬೆಳದುಕೊಳ್ಳಬಹುದು.

ಹಸಿರೆಲೆ ಗೊಬ್ಬರ ಬೆಳೆಗಳ ಉಪಯೋಗಗಳು:

ಮಣ್ಣಿನಲ್ಲಿ ಹ್ಯೂಮಸ್ ರಚನೆಯಾಗಿ ಸಾವಯವ ಅಂಶವನ್ನು ಹೆಚ್ಚಿಸುತ್ತದೆ.

ವಾತಾವರಣದಲ್ಲಿರುವ ಸಾರಜನಕವನ್ನು ಸ್ಥಿರೀಕರಣ ಮಾಡುತ್ತದೆ.

ಹಸಿರೆಲೆ ಗೊಬ್ಬರವು ಮಣ್ಣಿನ ರಚನೆಯನ್ನು ಸುಧಾರಿಸುತ್ತದೆ.

ಮಣ್ಣಿನಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೆಚ್ಚಿಸುತ್ತದೆ.

ಮಣ್ಣಿನ ಸವೆತವನ್ನು ತಡೆಗಟ್ಟುತ್ತದೆ, ಸವೆತದಿಂದ ಆಗುವ ಮಣ್ಣಿನ ನಷ್ಟವನ್ನು ಕಡಿಮೆ ಮಾಡುತ್ತದೆ.

ಮಣ್ಣಿನ ಮೇಲ್ಮೈಯನ್ನು ರಕ್ಷಣೆ ಮಾಡುತ್ತದೆ.

ಹಸಿರೆಲೆ ಗೊಬ್ಬರವು ಕ್ಷಾರೀಯ ಮಣ್ಣನ್ನು ಪುನಃ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ.

ಹಸಿರೆಲೆ ಗೊಬ್ಬರದ ಬೆಳೆಗಳನ್ನು ಬೆಳೆಯುವುದರಿಂದ ಕಳೆಗಳ ಬೆಳೆವಣಿಗೆ ಕಡಿಮೆಯಾಗುತ್ತದೆ.

ಹಸಿರೆಲೆ ಗೊಬ್ಬರದಿಂದ ಬೇರು ಗಂಟು, ನೆಮಟೋಡ್ಸ್ ಗಳನ್ನು ನಿಯಂತ್ರಿಸಬಹುದು.

ದ್ವಿದಳ ಧಾನ್ಯದ ಹಸಿರೆಲೆ ಗೊಬ್ಬರದ ಬೆಳೆ ಮಣ್ಣಿಗೆ ಸಾರಜನಕವನ್ನು ಉಚಿತವಾಗಿ ಒದಗಿಸುತ್ತದೆ. 

ಹಸಿರೆಲೆ ಗೊಬ್ಬರವನ್ನು ಬಳಸುವುದರಿಂದ ಕೊಟ್ಟಿಗೆ ಗೊಬ್ಬರದ ಅವಶ್ಯಕತೆ ಕಡಿಮೆ ಇರುತ್ತದೆ.

ಹಸಿರೆಲೆ ಗೊಬ್ಬರವನ್ನು ಬಳಸುವುದರಿಂದ ಬೆಳೆಗಳಲ್ಲಿ ರೋಗದ ಒತ್ತಡವನ್ನು ಕಡಿಮೆ ಮಾಡುತ್ತದೆ.

ಕಳೆ ಮತ್ತು ರೋಗ ನಿಯಂತ್ರಿಸಲು ದ್ವಿದಳ ಧಾನ್ಯದ ಹಸಿರೆಲೆ ಗೊಬ್ಬರ ಬಳಸಬಹುದು.

ಹಸಿರೆಲೆ ಗೊಬ್ಬರ ಮಾಡುವುದಕ್ಕೆ ಖರ್ಚು ಕಡಿಮೆ, ಲಾಭ ಹೆಚ್ಚು.

ಹಸಿರೆಲೆ ಗೊಬ್ಬರವನ್ನು ಕಡಿಮೆ ಅವಧಿಯಲ್ಲಿ ಅತಿ ವೇಗವಾಗಿ ಬೆಳೆಯಬಹುದು,

ವರದಿ: ಕೋಮಲ.H.B

https://www.youtube.com/watch?v=cE_rlLvoHNo&list=PLuN9VcGQAtK7-6zk5mGOIJw8j-d89ka_H&index=20&t=6s



 

 



Blog




Home    |   About Us    |   Contact    |   
microbi.tv | Powered by Ocat Web Promotion Service in India | Promoting Websites through Ocat Content Marketing