ಕೆಂಪು ಕೊಳೆ ರೋಗದ ಲಕ್ಷಣಗಳು:
ಕಬ್ಬಿನ ಎಲೆಯ ಮೇಲ್ಭಾಗದಿಂದ ನಾಲ್ಕನೆ ಎಲೆ ಉದುರುತ್ತಿರುತ್ತದೆ. ಇದರ ಜತೆಗೆ ಕಬ್ಬನ್ನ ಸೀಳಿದಾಗ ಕಬ್ಬಿನ ಒಳಭಾಗದಲ್ಲಿ ಕೆಂಪು ಬಣ್ಣ ಆವರಿಸಿರುತ್ತದೆ. ಇಂತಹ ಕಬ್ಬಿನಲ್ಲಿ ಅಷ್ಟಾಗಿ ಸಿಹಿಯೂ ಇರುವುದಿಲ್ಲ, ಮತ್ತೆ ಹೆಚ್ಚು ನೀರೂ ತುಂಬಿರುವುದಿಲ್ಲ. ಹೀಗಾಗಿ ಕೃಷಿಕರು ಅಂದಕೊಂಡು ಇಳುವರಿ ಸಿಗದೆ ಹೋಗುತ್ತದೆ. ಈ ಕೆಂಪು ಕೊಳೆ ರೋಗ ಆವರಿಸಿದಾಗ ಸುಮಾರು 60 ರಿಂದ 80 ರಷ್ಟು ಇಳುವರಿ ರೈತನ ಕೈ ತಪ್ಪುವುದು ಖಚಿತ. ಹೀಗಾಗಿ ಕೃಷಿಕರು ಕೆಂಪು ಕೊಳೆ ರೋಗ ಬರದಂತೆ ನೋಡಿಕೊಳ್ಳುವುದು ಬಹಳ ಮುಖ್ಯವಾಗಿದೆ.
ಕೆಂಪು ಕೊಳೆ ರೋಗ ನಿಯಂತ್ರಣ:
ನಾಟಿ ಮಾಡುವ ಮೂರ್ವದಲ್ಲಿ ಕೃಷಿಕರು ಕಬ್ಬಿನ ಕಣ್ಣಿನ ಆಯ್ಕೆ ಮಾಡುವುದು ಬಹಳ ಮುಖ್ಯವಾಗಿರುತ್ತದೆ. ಯಾಕಂದ್ರೆ ಆ ಕಣ್ಣಿನ ಮೂಲಕವೇ ಕೆಂಪು ಕೊಳೆ ರೋಗ ಹರಡುವ ಸಾಧ್ಯತೆ ಹೆಚ್ಚು. ಹಾಗಾಗಿ ರೈತರು ರೋಗ ಮುಕ್ತವಿರುವ ಕಬ್ಬಿನ ತೋಟದಿಂದ ಕಣ್ಣುಗಳನ್ನ ಆಯ್ಕೆ ಮಾಡಿಕೊಳ್ಳಬೇಕು.
ನಾಟಿ ಮಾಡುವ ಮುನ್ನ, ಕಬ್ಬಿನ ಕಣ್ಣುಗಳನ್ನ ಬಿಸಿ ನೀರಿನಲ್ಲಿ ನೆನೆಸಿ, ನಂತರ ಡಾ.ಸಾಯಿಲ್ ಅಜೋಸ್ಪಿರಿಲಮ್ ನಿಂದ ಬೀಜೋಪಚಾರ ಮಾಡಿಕೊಳ್ಳಬೇಕು. ಹೀಗೆ ಮಾಡುವುದರಿಂದ ಒಂದೊಮ್ಮೆ ರೋಗವಿದ್ದರೂ ನಿಯಂತ್ರಣವಾಗುತ್ತದೆ.ಸಾವಯವ ಕೃಷಿಯಲ್ಲಿ ರೈತರು ಕಬ್ಬು ಬೆಳೆ ಬೆಳೆಯಲು ಮುಂದಾದ್ರೆ, ಭೂಮಿ ಫಲವತ್ತಾಗಿರುತ್ತದೆ, ನೀರು ಹಿಡಿದಿಟ್ಟುಕೊಳ್ಳುವ ಶಕ್ತಿ ಹೆಚ್ಚಾಗಿರುತ್ತದೆ. ಆದ ಕಾರಣ ಇಲ್ಲಿ ಯಾವುದೇ ರೋಗ ಮತ್ತು ಕೀಟ ಬಾಧೆಯ ತಲೆ ನೋವು ವಿರಳವಾಗಿರುತ್ತದೆ.
ಬೆಳೆ ಆವರ್ತನೆ:
ಕಬ್ಬು ಒಂದೇ ಬೆಳೆಯನ್ನ ಪದೆ ಪದೆ ಬೆಳೆಯುವುದರಿಂದಲೂ, ಕೆಂಪು ಕೊಳೆ ರೋಗ ಆವರಿಸುತ್ತದೆ. ಹೀಗಾಗಿ ರೈತರು ಆಗ ಆಗ ಬೆಳೆ ಬದಲಿಸಬೇಕಾಗಿದ್ದು ಅನಿವಾರ್ಯ. ಕಬ್ಬು ಬೆಳೆದ ಭೂಮಿಯಲ್ಲಿ ಮತ್ತೆ ಕಬ್ಬು ಬೆಳೆಯದೆ ಬೆರೆ ಬೆಳೆ ಬೆಳೆಯುವುದರಿಂದ ಕೆಂಪು ಕೊಳೆ ರೋಗ ನಿಯಂತ್ರಿಸಬಹುದಾಗಿದೆ.
ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ:
https://www.youtube.com/watch?v=p9Pqgb2qFzw
ವರದಿ: ಶ್ವೇತಾ ಕಲಕಣಿ
#OrganicSugarcanefarming #organicsugarcanefarminginKarnataka #organicsugarcanefarminginkannada #Naturalsugarcanefarming #knowaboutsugarcaneproduction #sugarcanecultivationmethods #agriculturetechnologysugarcaneharvesting
Blog