Blog

ಗ್ಲಿರಿಸಿಡಿಯಾದಿಂದ ಭೂಮಿಗೆ ಲಾಭ:

ಹೊಲದ ಬದುವಿನಲ್ಲಿ ಬೆಳೆಯ ಬಹುದಾದ ಈ ಗ್ಲಿರಿಸಿಡಿಯಾ ಗೊಬ್ಬರದ ಗಿಡದ ಎಲೆಗಳನ್ನು ಹಸಿರೆಲೆ ಗೊಬ್ಬರವನ್ನಾಗಿ ಬಳಸಿ ಭೂಮಿಗೆ ಮಲ್ಚಿಂಗ್ ಮಾಡುವುದರಿಂದ ಭೂಮಿಗೆ ಸಾವಯವ ಗೊಬ್ಬರವಾಗಿ ಸಾಕಷ್ಟು ಪೋಷಕಾಂಶವನ್ನು ಒದಗಿಸಿ, ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತದೆ. ಭೂಮಿಯಲ್ಲಿ ಭೌತಿಕ ಗುಣ, ರಾಸಾಯನಿಕ ಗುಣ, ಜೈವಿಕ ಗುಣವನ್ನು ಹುಟ್ಟುಹಾಕಿ ಭೂಮಿಯಲ್ಲಿ ಎರೆಹುಳುಗಳು ಸೃಷ್ಠಿಯಾಗಲು ಸಹಾಯ ಮಾಡುತ್ತದೆ. ಸಾರಜನಕವನ್ನು ಸ್ಥಿರೀಕರಣಗೊಳಿಸುವ ಶಕ್ತಿಯನ್ನು ಹೊಂದಿರುವ ಈ ಗೊಬ್ಬರದ ಗಿಡಗಳು ಬೆಳೆಗಳ ಬೆಳೆವಣಿಗೆಗೆ ಪೂರಕವಾಗಿದೆ.

 

ಇಲಿ ಹೆಗ್ಗಣಗಳಿಗೆ ಗ್ಲಿರಿಸಿಡಿಯಾ ಮದ್ದು:

ಬೆಳೆಗಳ ಬೆಳೆವಣಿಗೆ ಹಂತದಲ್ಲಿ ಕಾಡುವ ಕೀಟಬಾಧೆ, ರೋಗಬಾಧೆಗಳ ಜತೆಗೆ ಇಲಿ, ಹೆಗ್ಗಣಗಳ ಕಾಟವು ತಪ್ಪಿದ್ದಲ್ಲಹೀಗಿರುವಾಗ ಗ್ಲಿರಿಸಿಡಿಯಾ ಗಿಡಗಳನ್ನ ತೋಟದ ಬದುವಿನಲ್ಲಿ ಬೆಳೆದುಕೊಂಡರೆ ಇಲಿ, ಹೆಗ್ಗಣಗಳು ಬೆಳೆಗಳ ತಂಟೆಗೆ ಬಾರದೆ ಇರುವ ಹಾಗೆ ತಡೆಯಬಹುದಾಗಿದೆ. ಬದುವಿನಲ್ಲಿ ಈ ಗಿಡಗಳನ್ನು ಬೆಳೆದರೆ, ಬೆಳೆಗಳಿಗೆ ಅಟ್ಯಾಕ್ ಮಾಡಲು ಬರುವ ಇಲಿ, ಹೆಗ್ಗಣಗಳಿಗೆ ಈ ಗಿಡದ ಬೇರಿನಲ್ಲಿ ಮಾರಕವಾದ ಅಂಶ ಇರುವುದರಿಂದ ಇವುಗಳನ್ನು ತಿಂದಾಗ ಅವು ಸತ್ತುಹೋಗುತ್ತವೆ.  ಹೀಗಾಗಿ ಬೆಳೆಗೆ ಯಾವುದೇ ತೊಂದರೆಯಾಗುವ ಸಾಧ್ಯತೆ ಇರುವುದಿಲ್ಲ. ಹಾಗಾಗಿ ಇಲಿ, ಹೆಗ್ಗಣಗಳಿಗೆ ವಿಷದ ಬಲೆಯಾಗಿವೆ ಈ ಗ್ಲಿರಿಸಿಡಿಯಾ ಗೊಬ್ಬರದ ಗಿಡಗಳು.

 

ಮಣ್ಣಿನ ಸವಕಳಿ ತಡೆಯುತ್ತದೆ:

ಹಿಂದೆ ಹೇಳಿದ ಹಾಗೆ ಬದುವಿನಲ್ಲಿ ಬೆಳೆಯಬಹುದಾದ ಈ ಗಿಡಗಳು ದಷ್ಟವಾಗಿ ಬೆಳೆದು ಬೇರುಗಳು ಆಳವಾಗಿ ಭೂಮಿಯಲ್ಲಿ ಸೇರಿರುತ್ತೆ. ಹಾಗಿರುವಾಗ ಈ ಬೇರಿನ ಕಣಗಳಲ್ಲಿ ಮಣ್ಣನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಇರುವುದರಿಂದ ಕೃಷಿ ಮಣ್ಣು ಬೇರೆ ಕಡೆಗೆ ಹೋಗದೆ ಇರುವಹಾಗೆ ಗಿಡಗಳು ಕಾಪಾಡುತ್ತವೆ. ಜತೆಗೆ ಈ ಗಿಡಗಳಿಂದ ಭೂಮಿಯ ಮೇಲೆ ಬಿಳುವ ಸಾವಯವ ತ್ಯಾಜ್ಯಗಳು ಮಣ್ಣನ್ನು ರಕ್ಷಣೆ ಮಾಡುವುದರಿಂದ ಗಾಳಿ ಬಿಸಿಲಿಗೆ ಮಣ್ಣು ಸವಕಳಿಯಾಗದೆ ಇರುವ ಹಾಗೆ ನೋಡಿಕೊಳ್ಳುತ್ತೆ.

 

ವರದಿ: ವನಿತಾ ಪರಸಣ್ಣವರ್


ಗ್ಲಿರಿಸಿಡಿಯಾ ಗೊಬ್ಬರ ಗಿಡದ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.

https://www.youtube.com/watch?v=z3oS0vo6m-c&t=392s

 



Blog




Home    |   About Us    |   Contact    |   
microbi.tv | Powered by Ocat Web Promotion Service in India | Promoting Websites through Ocat Content Marketing