ಹಳದಿ ಹೂಗಳ ತಂತ್ರ:
ಹೌದು ಹಳದಿ ಹೂವುಗಳಾದ ಸೇವಂತಿಗೆ, ಚೆಂಡು ಹೂ ಮತ್ತು ಸಾಸಿವೆ ಗಿಡಗಳು ಇನ್ನಿತರ ಹಳದಿ ಹೂಗಳನ್ನು ಮುಖ್ಯ ಬೆಳೆಗಳ ಮಧ್ಯದಲ್ಲಿ ಬೆಳೆಸಿಕೊಳ್ಳುವುದರಿಂದ ಕೀಟಗಳ ಹಾವಳಿಯನ್ನು ತಡೆಗಟ್ಟಿ ಮುಖ್ಯ ಬೆಳೆಯನ್ನು ಕಾಪಾಡಿಕೊಳ್ಳಬಹುದು, ಹೇಗೆಂದರೆ ಮುಖ್ಯ ಬೆಳೆಗಳಿಗೆ ಅಟ್ಯಾಕ್ ಮಾಡುವ ಕೀಟಗಳು, ಈ ಹೂ ಬೆಳೆಗಳಿಗೆ ಆಕರ್ಷಿತವಾಗಿ ಮುಖ್ಯ ಬೆಳೆಗಳ ಬದಲು ಇವುಗಳ ಮೇಲೆ ದಾಳಿ ಮಾಡುತ್ತವೆ. ಇದರಿಂದ ಮುಖ್ಯ ಬೆಳೆ ಆರೋಗ್ಯವಾಗಿದ್ದು ಹೆಚ್ಚಿನ ಇಳುವರಿ ನೀಡುವುದರಲ್ಲಿ ಯಶಸ್ವಿಯಾಗುತ್ತೆ.
ಅಂಟು ಬಲೆಗಳು ( ಸ್ಟಿಕಿ ಟ್ರ್ಯಾಪ್ಸ್) :
ಎಕರೆಗೆ 10 ರಿಂದ 15 ಅಂಟು ಬಲೆಗಳನ್ನು ಬೆಳೆಗಳ ಮಧ್ಯೆ ಹಾಕಿಕೊಳ್ಳುವುದರಿಂದ ಕೀಟ ಬಾಧೆಯನ್ನು ತಡೆಯಬಹುದಾಗಿದೆ. ಹಳದಿ ಅಥವಾ ನೀಲಿ ಬಣ್ಣದ ಅಂಟು ಬಲೆಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಅವುಗಳನ್ನ ಬೆಳೆಯ ಮಧ್ಯದಲ್ಲಿ ಅಂಟಿಸಬೇಕು, ಗಾಳಿಗೆ ಹಾರಿ ಬಂದ ಕೀಟಗಳು ಅವುಗಳಿಗೆ ಅಂಟಿಕೊಂಡು ಸತ್ತುಹೋಗುತ್ತವೆ.
ಸೋಲಾರ್ ಲೈಟ್ ಟ್ರ್ಯಾಪ್:
ನಮ್ಮ ತೋಟದ ಮಧ್ಯದಲ್ಲಿ ಸೋಲಾರ್ ಲೈಟ್ ಟ್ರ್ಯಾಪ್ ಬಳಸುವುದರಿಂದ ಕೀಟ ಬಾಧೆಯನ್ನು ತಡೆಯಬಹುದು. ರಾತ್ರಿ ವೇಳೆಯಲ್ಲಿ ಕೀಟಗಳು ಬೆಳೆಗಳಿಗೆ ಅಟ್ಯಾಕ್ ಮಾಡುವ ಸಾಧ್ಯತೆ ಜಾಸ್ತಿ. ಹೀಗಿರುವಾಗ, ಸೋಲಾರ್ ಲೈಟ್ ಟ್ರ್ಯಾಪ್ ಬಳಕೆ ಅವುಗಳ ಹಾವಳಿಯನ್ನು ತಡೆಗಟ್ಟುತ್ತದೆ. ಈ ಸೋಲಾರ್ ಲೈಟ್ ನ ಹಳದಿ ಬಣ್ಣಕ್ಕೆ ಆಕರ್ಷಣೆಯಾಗುವ ಹುಳುಗಳು, ಲೈಟ್ ಗೆ ಬಂದು ಅಪ್ಪಳಿಸಿ ಕೆಳಗಿನ ಬುಟ್ಟಿಯಲ್ಲಿ ಬೀಳುತ್ತವೆ. ಆ ಬುಟ್ಟಿಯಲ್ಲಿ ಕೆಮಿಕಲ್ ಮಿಶ್ರಿತ ನೀರು ಇರುವುದರಿಂದ ಹುಳುಗಳು ಅದರಲ್ಲಿ ಬಿದ್ದು ಸತ್ತುಹೋಗುತ್ತವೆ.
ವರದಿ: ವನಿತಾ ಪರಸಣ್ಣವರ್
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
https://www.youtube.com/watch?v=Kws-l0o3E5Q
Blog