Blog

ಅಂತರ ಬೆಳೆಯು ಕಳೆ ಮತ್ತು ಕೀಟಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಅಂತರ ಬೆಳೆ ಎನ್ನುವುದು ಸುಸ್ಥಿರ ಅಭ್ಯಾಸವಾಗಿದ್ದು,  ಇದು ಪೋಷಕಾಂಶಗಳು ಮತ್ತು ನೀರಿನಂತಹ ಸಂಪನ್ಮೂಲಗಳ ಬಳಕೆಯ ದಕ್ಷತೆಯನ್ನು ಸುಧಾರಿಸುತ್ತದೆ  ಮತ್ತು ಕಡಿಮೆ ಖರ್ಚಿನಲ್ಲಿ ಕೃಷಿ ಪದ್ದತಿಗಳನ್ನು  ಅಳವಡಿಸಿಕೊಳ್ಳಲು ಸಹಾಯ ಮಾಡುತ್ತದೆ.

 ಅಂತರ ಬೆಳೆಯು ಇಳುವರಿಯನ್ನು ಹೇಗೆ ಹೆಚ್ಚಿಸುತ್ತದೆ?

 ಬೆಳೆಯುವ ಪ್ರಮುಖ ಹಂತದಲ್ಲಿ ಒಂದು ಹೊಲದಲ್ಲಿ ಎರಡು ಅಥವಾ ಹೆಚ್ಚಿನ  ಬೆಳೆಗಳನ್ನು ಬೆಳೆಯುವ ಬಹು ಬೆಳೆ ಪದ್ಧತಿ ಎಂದು ಅಂತರ ಬೆಳೆಯನ್ನು ವ್ಯಖ್ಯಾನಿಸಬಹುದು. ಬೆಳೆಗಳ ಬೆಳವಣಿಗೆ, ಕಳೆಗಳು, ಕೀಟಗಳು ಮತ್ತು ರೋಗಗಳ ಕಡಿತ, ಸಂಪನ್ಮೂಲಗಳ ಹೆಚ್ಚು ಪರಿಣಾಮಕಾರಿ ಬಳಕೆಯಿಂದಾಗಿ ಬೆಳೆಗಳ ಇಳುವರಿ ಹೆಚ್ಚಾಗುತ್ತದೆ.

 ಅಂತರ ಬೆಳೆ  ಪರಿಸರಕ್ಕೆ ಹೇಗೆ ಪರಿಣಾಮ ಬೀರುತ್ತದೆ?

 ಸಾಂಪ್ರದಾಯಿಕ ಕೃಷಿ  ಪದ್ಧತಿಯಲ್ಲೊಂದಾಗಿ ಅಂತರ ಬೆಳೆಯು ಬೆಳಕು, ನೀರು ಮತ್ತು ಪೋಷಕಾಂಶಗಳಂತಹ ಸಂಪನ್ಮೂಲಗಳನ್ನು  ಹೆಚ್ಚು ಪರಿಣಾಮಕಾರಿಯಾಗಿ  ಬಳಸುವುದರ ಮೂಲಕ  ಬೆಳೆಗಳ ಇಳುವರಿಯನ್ನು ಸುಧಾರಿಸಲು ಮಾತ್ರವಲ್ಲ, ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತದೆ, ಮಣ್ಣಿನ ಸವಕಳಿಯನ್ನು ತಡೆಯುತ್ತದೆ . ರೋಗಗಳ ಹಾಗೂ ಕೀಟಗಳ ಬಾಧೆಯನ್ನು ಕಡಿಮೆ ಮಾಡುವುದರ ಜತೆಗೆ  ಕಳೆಗಳನ್ನು ಸಹ ಕಡಿಮೆ ಮಾಡುತ್ತದೆ.

  ಅತಿಯಾದ ರಸಗೊಬ್ಬರದ ಬಳಕೆಗೆ ಅಂತರ ಬೆಳೆ ಹೇಗೆ ಪರಿಹಾರ ?

 ದ್ವಿದಳ ಧಾನ್ಯಗಳನ್ನು ಅಂತರ ಬೆಳೆಯಾಗಿ ಬೆಳೆದರೆ ಮುಖ್ಯ ಬೆಳಗಳಿಗೂ ಸಹ ಸಾರಜನಕ ಒದಗುತ್ತದೆ. ಇದರಿಂದಾಗಿ ಗೊಬ್ಬರ ಬಳಕೆಯನ್ನು ಸಹ ಕಡಿಮೆ ಮಾಡಬಹುದು ಹಾಗೂ ಅಲ್ಲಿಯೇ ಹೊದಿಕೆಯಂತೆ ಮಾಡುವುದರಿಂದ ಮಣ್ಣಿನ ಫಲವತತ್ತೆಯ  ಜತೆಗೆ ಕಳೆಗಳ ಬೆಳವಣಿಗೆಯು ಸಹ ಕಡಿಮೆಯಾಗುತ್ತದೆ. ಇದರಿಂದ ಖರ್ಚು ಕಡಿಮೆಯಾಗಿ, ಹೆಚ್ಚು ಲಾಭ ಪಡೆಯಬಹುದು. ಅಂತರ ಬೆಳೆಯಾಗಿ ಬೇರೆ ಬೇರೆ ಜಾತಿಯ ಗಿಡಗಳನ್ನು ಆಯ್ಕೆ ಮಾಡಿಕೊಂಡರೆ ಮಾತ್ರ ಹೆಚ್ಚು ಸಹಾಯಕಾರಿ.

   ಅಂತರ ಬೆಳೆಗೆ ಉದಾಹರಣೆಗಳು:

 ಅಡಿಕೆ–ಬಾಳೆ: ಅಡಿಕೆ ತೋಟದಲ್ಲಿ ಬಾಳೆಯನ್ನು  ಅಂತರ  ಬೆಳೆಯಾಗಿ  ಬೆಳೆಯಬಹುದು. ಎರಡು  ಅಡಿಕೆಯ ಸಾಲಿನ ಮಧ್ಯದಲ್ಲಿ ಒಂದು ಸಾಲು ಬಾಳೆ ಬೆಳೆಯಬಹುದು. ಬಾಳೆಯು ನೆರಳಿನಲ್ಲಿಯೂ ಸಹ ಚೆನ್ನಾಗಿ ಬೆಳೆಯುತ್ತದೆ.

 ಮೆಕ್ಕೆಜೋಳ–ಸಿಹಿ ಗೆಣಸು: ಮೆಕ್ಕೆಜೋಳ ಮತ್ತು ಸಿಹಿ ಗೆಣಸು ಅಂತರ ಬೆಳೆಯಾಗಿ ಬೆಳೆಯುವುದರಿಂದ ಒಂದೇ ಭೂಮಿಯಿಂದ ಹೆಚ್ಚಿನ ಇಳುವರಿಗೆ ಕಾರಣವಾಗುತ್ತದೆ.

 ಮೆಕ್ಕೆಜೋಳ–ಸೋಯಾಬೀನ್: ಮೆಕ್ಕೆಜೋಳ–ಸೋಯಾಬೀನ್  ಅಂತರ ಬೆಳೆಯಾಗಿ ಬೆಳೆಯುವುದರಿಂದ ಕಳೆಯನ್ನು ಕಡಿಮೆ ಮಾಡಬಹುದು.

ಸೋಯಾಬೀನ್ ದ್ವಿದಳ ಬೆಳೆಯಾಗಿದ್ದು  ಸಾರಜನಕ ಸ್ಥೀರಿಕರಣಕ್ಕೆ ಸಹಾಯ ಮಾಡಿ, ಮಣ್ಣಿನ ಫಲವತ್ತತೆಯು ಹೆಚ್ಚುತ್ತದೆ.

ಏಕಕಾಲದಲ್ಲಿ ಎರಡು ಅಥವಾ ಹೆಚ್ಚಿನ ಬೆಳೆಗಳನ್ನು  ಬೆಳೆಯುವುದರಿಂದ ಅಂತರ ಬೆಳೆಯು ರೈತರಿಗೆ ಹೆಚ್ಚಿನ  ಆದಾಯ ತರುವಲ್ಲಿ ಸಹಾಯವಾಗುತ್ತದೆ .                -ಭಾರ್ಗವಿ  ಗೌಡ

 



Blog




Home    |   About Us    |   Contact    |   
microbi.tv | Powered by Ocat Business Promotion Service in India