Blog

 ಮಣ್ಣಿನ ಫಲವತ್ತತೆ ಗುರುತಿಸಲು, ಪರೀಕ್ಷಿಸಲು ಇಂದು ಹಲವಾರು ವೈಜ್ಞಾನಿಕ ಮಾರ್ಗಗಳಿವೆ. ಆದರೆ ಅಂಗೈ ಹುಣ್ಣಿಗೆ ಕನ್ನಡಿ ಬೇಕೆ ಎಂಬಂತೆ, ಪ್ರತಿಯೊಬ್ಬ ಕೃಷಿಕನೂ ತನ್ನ ಜಮೀನಿನ ಮಣ್ಣು ಫಲವತ್ತಾಗಿದೆಯೊ ಇಲ್ಲವೊ ಎಂದು ತಾನೇ ಪರೀಕ್ಷಿಸಿಕೊಳ್ಳಬಹುದಾಗಿದೆ. ಪ್ರತಿಯೊಬ್ಬರೂ ಅವರ ತೋಟಗಳಿಗೆ ವಿಜ್ಞಾನಿಯಾಗಬೇಕಾಗಿದೆ.

 

ಮಣ್ಣಿನ ಫಲವತ್ತತೆಯ ಗುಣಗಳನ್ನು ಪ್ರತಿಯೊಬ್ಬ ಕೃಷಿಕ ಸ್ವತಃ ಪರಿಶೀಲಿಸಬೇಕು. ಇದಕ್ಕಾಗಿ ಇತರರ ಅವಲಂಬನೆ ಅಗತ್ಯವಿಲ್ಲ. ಮಣ್ಣಿನ ಮೂರು ಗುಣಗಳಾದ  1. ಮಣ್ಣಿನ ಭೌತಿಕ ಗುಣ, 2. ಮಣ್ಣಿನ ರಾಸಾಯನಿಕ ಗುಣ ಹಾಗೂ 3. ಮಣ್ಣಿನ ಜೈವಿಕ ಗುಣಗಳನ್ನು ಸರಿಯಾಗಿ ಅರಿತುಬಿಟ್ಟರೆ ಕೃಷಿಕನಿಗೆ ಕೃಷಿ ಉದ್ದಿಮೆಯಲ್ಲಿ ಸೋಲು ಎನ್ನುವುದು ಇರುವುದೇ ಇಲ್ಲ. ಇವುಗಳ ಬಗ್ಗೆ ಅರಿವು ಇಲ್ಲದಿದ್ದರೆ ಕಷ್ಟ-ನಷ್ಟ ಎಂದಿಗೂ ಕಟ್ಟಿಟ್ಟ ಬುತ್ತಿ.

 

ಕೃಷಿ ಭೂಮಿಯಲ್ಲಿನ ಮಣ್ಣನ್ನು ಪ್ರತಿಯೊಬ್ಬ ರೈತರೂ ಯಾವುದೇ ಯಂತ್ರದ ಸಹಾಯವಿಲ್ಲದೆ ಹೇಗೆ ಪರೀಕ್ಷೆ ಮಾಡಬಹುದು ಎಂದು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ ನಡೆದಾಡುವ ಸಾವಯವ ಕೃಷಿ ವಿಶ್ವಕೋಶ ಎಂದೇ ಖ್ಯಾತರಾಗಿರುವ, ಖ್ಯಾತ ಸಾವಯವ ಕೃಷಿ ತಜ್ಞ ಡಾ.ಕೆ.ಆರ್.ಹುಲ್ಲುನಾಚೇಗೌಡರು.

ನಿಮ್ಮ ಜಮೀನಿನ ಮಣ್ಣನ್ನು ಸ್ಥಳದಲ್ಲೇ ಸುಲಭವಾಗಿ ಪರೀಕ್ಷಿಸಿ? Simple techniques to test your soil on spot.

 https://youtu.be/mOexufefUcQ

 



Blog




Home    |   About Us    |   Contact    |   
microbi.tv | Powered by Ocat Web Promotion Service in India | Promoting Websites through Ocat Content Marketing