Blog

ಮೊದಲು ಸಾವಯವ ಕೃಷಿ ಎಂದ್ರೆ ಮೂಗು ಮುರಿಯುವ ಜನರು ಹೆಚ್ಚಾಗಿದ್ದರು. ಆದ್ರೆ ಇತ್ತೀಚಿನ ವರ್ಷಗಳಲ್ಲಿ ಸಾವಯವ ಕೃಷಿಯ ಮಹತ್ವವನ್ನು ಅರಿಯುತ್ತಿರುವುದರಿಂದ ಬೆಳೆ, ಭೂಮಿ ಉಳಿಸಿಕೊಳ್ಳಲು ಸಾವಯವ ಕೃಷಿ ಅನಿವಾರ್ಯ ಎಂಬುದನ್ನು ಮನಗಾಣುತ್ತಿದ್ದಾರೆ.

 

ಸಾವಯವ ಕೃಷಿಯು ಪರಿಸರ ಆಧಾರಿತ ಕೀಟ ನಿಯಂತ್ರಣಗಳನ್ನು ಬಳಸುವ ಕೃಷಿ ವ್ಯವಸ್ಥೆ ಮತ್ತು ಜೈವಿಕ ಗೊಬ್ಬರಗಳನ್ನು ಹೆಚ್ಚಾಗಿ ಪ್ರಾಣಿ ಮತ್ತು ಸಸ್ಯ ತ್ಯಾಜ್ಯಗಳಿಂದ, ಹಸಿರೆಲೆ ಗೊಬ್ಬರಗಳು, ಕವರಿಂಗ್ ಬೆಳೆಗಳಿಂದ ಮಾಡುವಂತಹ ಕೃಷಿ. ಇದು ಕೃಷಿ ಭೂಮಿಗೆ ಪೂರಕವಾಗಿದೆ. ಆದ್ರೆ ಇದನ್ನು ಅರಿಯದೆ ಎಷ್ಟೋ ರೈತರು ರಾಸಾಯನಿಕ ಗೊಬ್ಬರಗಳಿಗೆ ಮೊರೆ ಹೋಗಿ ಭೂಮಿಯನ್ನು ಹಾಳುಮಾಡಿಕೊಳ್ಳುತ್ತಾ, ಸಾಲದ ಸುಳಿಯಲ್ಲಿ ಸಿಲುಕುತ್ತಿದ್ದಾರೆ. ಅದನ್ನು ನಿಲ್ಲಿಸಿ ಸಾವಯವ ಕೃಷಿಯಲ್ಲಿ ಮುಂದುವರೆದರೆ ಕೃಷಿ ಭೂಮಿಗೂ ಉಳಿಗಾಲ, ರೈತರಿಗೂ ಉಳಿಗಾಲ. ಅದರಂತೆ ಬೇಸಿಗೆ ಬಂತಂದ್ರೆ ಬೆಳೆಗಳನ್ನು ಉಳಿಸಿಕೊಳ್ಳುವುದು ಹೇಗೆ? ನೀರಿನ ನಿರ್ವಹಣೆ ಹೇಗೆ? ಅಂತ ಸಾಕಷ್ಟು ರೈತರು ಕಂಗಾಲಾಗಿ ಹೋಗ್ತಾರೆ. ನೀರಿನ ಅಭಾವ ತಡೆಯೋದ್ರಲ್ಲಿ ರೈತರ ಕಸರತ್ತು ಒಂದಲ್ಲಾ, ಎರಡಲ್ಲಾ. ಟ್ಯಾಂಕರ್ ಗಳಿಂದ ನೀರು ಹಾಯಿಸೋದು, ಬೆಳೆಯಲ್ಲಿ ನೀರಿನ ಹೊಳೆಯನ್ನು ಹರಿಸೋದು, ಹೀಗೆ ಅವೈಜ್ಞಾನಿಕ ಪದ್ಧತಿಯಿಂದ ಎಡವಟ್ಟುಗಳನ್ನು ಮಾಡುವುದು ಜಾಸ್ತಿ.

 

ನೀರಿನ ನಿರ್ವಹಣೆಯೂ ಕೂಡ ಮುಖ್ಯವೇ. ಆದ್ರೆ ಯಾವುದೂ ಅತಿಯೂ ಆಗಬಾರದು, ಕಡಿಮೆನೂ ಆಗಬಾರದು. ಹಾಗಾದ್ರೆ ಕಡಿಮೆ ನೀರು ಇದ್ದಾಗ ರೈತರು ಬೇಸಿಗೆ ಸಮಯದಲ್ಲಿ ಬೆಳೆಗಳನ್ನು ಉಳಿಸಿಕೊಳ್ಳುವುದು ಹೇಗೆ? ಎಂಬ ಪ್ರಶ್ನೆಗೆ ಉತ್ತರವಾಗಿದೆ ಈ ಯುವ ಕೃಷಿಕನ ಸಾವಯವ ಕೃಷಿ.

 

ಹರಿಹರ ತಾಲೂಕಿನ ಕೃಷಿಕ ಮಾರುತಿ ಪೂಜಾರ್ 2 ವರ್ಷದಿಂದ ಸಾವಯವ ಕೃಷಿ ಮಾಡುತ್ತಿದ್ದು, ಇಂತಹ ಬೇಸಿಗೆ ಸಮಯದಲ್ಲಿಯೂ ತಿಂಗಳಿಗೆ ಒಂದು ಬಾರಿ ಅಡಿಕೆ ತೋಟಕ್ಕೆ ನೀರನ್ನು ನೀಡುತ್ತಾರಂತೆ. ಇನ್ನೂ ಈ ವರ್ಷ ಇಳುವರಿಯೂ ಕೂ ಹೆಚ್ಚಾಗಿದ್ದು 9 ವರ್ಷದ ಅಡಿಕೆಯಲ್ಲಿ 4 ಲಕ್ಷ ರೂ. ಲಾಭವನ್ನು ಪಡೆಯುತ್ತಿದ್ದಾರೆ.

 

ಊರಿನ ಜನರ ಹೀಯಾಳಿಕೆಗೆ ಕಿವಿಗೊಡದೆ ಸ್ವಂತ ಬುದ್ಧಿಯಿಂದ ಸಾವಯವ ಕೃಷಿ ಮಾಡಿದ್ದಕ್ಕೆ ರೈತನಿಗೆ ಇಂದು ಸಕ್ಸಸ್ ಸಿಕ್ಕಿದೆ. ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಪಡೆಯುತ್ತಾ, ಊರ ಜನರಿಗೆ ಸೆಡ್ಡು ಹೊಡೆದು ಜೀವನ ಸಾಗಿಸುತ್ತಿದ್ದಾರೆ ಕೃಷಿಕ ಮಾರುತಿ.

   

https://www.youtube.com/watch?v=oLCEHvtbi1w

 

ವರದಿ: ವನಿತಾ ಯ ಪರಸನ್ನವರ್

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233

ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:

https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE

 Microbi Agrotech Website: http://www.microbiagro.com

 Subscribe to Microbi Agrotech: https://youtube.com/c/MICROBIAGROTECHPVTLTDKANNADA

 Like us on Facebook: https://www.facebook.com/microbiagrotech/

 

 

 




Blog




Home    |   About Us    |   Contact    |   
microbi.tv | Powered by Ocat Online Advertising Service in India