Contact

ಬೀಜೋಪಚಾರ ಎಂಬುದು ಬೀಜಗಳಿಗೆ ರಕ್ಷಾಕವಚ. ಬೀಜಗಳನ್ನು ಬಿತ್ತುವ ಮುನ್ನ ಬೀಜೋಪಚಾರ ಮಾಡಿ ಬಿತ್ತನೆ ಮಾಡಿದರೆ, ಎಲ್ಲಾ ಬೀಜಗಳು ಉತ್ತಮವಾಗಿ ಮೊಳಕೆಯೊಡೆಯುವುದರ ಜತೆಗೆ ಆರೋಗ್ಯವಾದ ಬೆಳೆ ಪಡೆಯಬಹುದು. ಏಕದಳ ಧಾನ್ಯ, ದ್ವಿದಳ ಧಾನ್ಯ, ಸಸಿಗಳು ಹೀಗೆ ಆಯಾ ಬೆಳೆಗೆ ತಕ್ಕಂತಹ ಬೀಜೋಪಚಾರಗಳು ಲಭ್ಯ.ಆದರೆ ಆದಷ್ಟು ಸಾವಯವ ಕೃಷಿ ಪದ್ಧತಿಯಲ್ಲಿ ಜೈವಿಕ ಬೀಜೋಪಚಾರಗಳನ್ನು ಬಳಸುವುದು ಒಳ್ಳೆಯದು.

 

ಅದೇ ರೀತಿಯಾಗಿ ನಾವು ಡಾ.ಸಾಯಿಲ್ ಜೈವಿಕ ಬೀಜೋಪಚಾರಗಳಲ್ಲಿ ಏಕದಳ ಧಾನ್ಯಗಳಿಗೆ ಅಜೋಸ್ಪಿರಲಂ, ದ್ವಿದಳ ಧಾನ್ಯಗಳಿಗೆ ರೈಜೋಬಿಯಂ, ಸಸಿಗಳಿಗಾಗಿ ಅಜಟೋಬ್ಯಾಕ್ಟರ್ ಬಿಜೋಪಚಾರಗಳನ್ನು ಬಳಸಬಹುದು. ಇವು ಕಡಿಮೆ ಖರ್ಚಿನಲ್ಲಿ ಲಭ್ಯವಿದ್ದು ನೂರಕ್ಕೆ ನೂರರಷ್ಟು ಫಲಿತಾಂಶ ಕೊಡುತ್ತವೆ. ಈಗಾಗಲೇ ಡಾ.ಸಾಯಿಲ್ ಬೀಜೋಪಚಾರ ಬಳಸಿ ಅಧಿಕ ಲಾಭವನ್ನು ಪಡೆದುಕೊಂಡ ಎಷ್ಟೋ ರೈತರ ಉದಾಹರಣೆಗಳು ನಮ್ಮಲ್ಲಿದ್ದು, ಸಾವಯವ ಕೃಷಿಯಲ್ಲಿ ಅದ್ಭುತ ಸಾಧನೆ ಗೈದಿದ್ದಾರೆ.

 

ದಾವಣಗೆರೆ ಜಿಲ್ಲೆ, ಜಗಳೂರು ತಾಲೂಕಿನ ರೈತರೊಬ್ಬರು ತಮ್ಮ ಮೆಕ್ಕೆಜೋಳ ಬೆಳೆಗೆ ಡಾ.ಸಾಯಿಲ್ ಅಜೋಸ್ಪಿರಿಲಂ ಬೀಜೋಪಚಾರ ಬಳಸಿ ಬಿತ್ತನೆ ಮಾಡಿದ್ದರಿಂದ ಬೆಳೆ ಉತ್ಕೃಷ್ಟವಾಗಿ ಬೆಳೆದು ಹೆಚ್ಚು ಲಾಭ ತಂದುಕೊಟ್ಟಿದೆ. ಅಷ್ಟೇ ಅಲ್ಲ ಬೆಳೆಯಲ್ಲಿ ಹಾಗೂ ಕೃಷಿ ಭೂಮಿಯಲ್ಲಿ ಧನಾತ್ಮಕ ಬದಲಾವಣೆಗಳು ಹೆಚ್ಚಾಗಿದೆ.

 

https://www.facebook.com/100063639686893/videos/1565031177228330

 

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233

ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:

https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE

 Microbi Agrotech Website: http://www.microbiagro.com

 Subscribe to Microbi Agrotech: https://youtube.com/c/MICROBIAGROTECHPVTLTDKANNADA

 Like us on Facebook: https://www.facebook.com/microbiagrotech/

 

ಬರಹ: ವನಿತಾ ಪರಸನ್ನವರ್

 




Contact




Home    |   About Us    |   Contact    |   
microbi.tv | Powered by Ocat Online Advertising Service in India