Blog

ಈರುಳ್ಳಿ ಇಲ್ಲ ಎಂದ್ರೆ, ಬಹುತೇಕರ ಮನೆಯಲ್ಲಿ ಅಡುಗೆಯೇ ಅಪೂರ್ಣವಾಗಿಬಿಡುತ್ತದೆ.  ಯಾವುದೇ ಅಡುಗೆಯ ರುಚಿಯೂ ಇಲ್ಲಾ ಎಂದರ್ಥ. ಈರುಳ್ಳಿಯ ಒಗ್ಗರಣೆ ಚುರ್ ಎನ್ನಲಿಲ್ಲಾ ಎಂದರೆ ಅಡುಗೆ ಮನೆಗೆ ಕಳೇನೆ ಇರುವುದಿಲ್ಲ. ಆದರೆ ಒಗ್ಗರಣಗೆ ಮಾತ್ರವಲ್ಲ ಆರೋಗ್ಯವನ್ನು ಕಾಪಾಡಿಕೊಳ್ಳುವುದರಲ್ಲಿಯೂ ಈರುಳ್ಳಿ ಪ್ರಮುಖ ಪಾತ್ರ ವಹಿಸುತ್ತೆ.

 

ನಾವು ಊಟದ ಜತೆಗೆ ಸಾಮಾನ್ಯವಾಗಿ ಹಸಿ ಈರುಳ್ಳಿ ತಿನ್ನುತ್ತೇವೆ. ಆದರೆ ಇದರ ಉಪಯೋಗಗಳ ಬಗ್ಗೆ ನಗೆ ತಿಳಿದಿರುವುದಿಲ್ಲ. ಈರುಳ್ಳಿಯನ್ನು ತಿನ್ನುವುದರಿಂದ ಕ್ಯಾನ್ಸರ್ ಕಾರಕಗಳ ವಿರುದ್ಧ ಹೋರಾಡುವ ಶಕ್ತಿ ದೇಹಕ್ಕೆ ಹೆಚ್ಚುತ್ತದೆ. ಉಸಿರಾಟದ ತೊಂದರೆ, ಹೃದಯ ಸಂಬಂಧಿಖಾಯಿಲೆಗಳು. ಜೀರ್ಣಾಂಗರೋಗ್ಯವನ್ನು ಕಾಪಾಡುವ ಶಕ್ತಿ ಈರುಳ್ಳಿಯಲ್ಲಿ ಹೆಚ್ಚಿದೆ. ಇನ್ನು ಇಂತಹ ಹತ್ತು ಹಲವಾರು ಉದಾಹರಣೆಗಳು ಸಿಗುತ್ತವೆ.

 

ಷ್ಟೆಲ್ಲಾ ಆರೋಗ್ಯಕ್ಕೆ ಉಪಕಾರಿಯಾದ ಈರುಳ್ಳಿಯನ್ನು ನಮ್ಮ ರೈತರು ರಾಸಾಯನಿಕ ಕೃಷಿಯಲ್ಲಿ ಬೆಳೆದು ಈರುಳ್ಳಿಯನ್ನು ವಿಷಯುಕ್ತವಾಗಿ ಮಾಡುತ್ತಿದ್ದಾರೆ. ಈರುಳ್ಳಿ ಮಾತ್ರವಲ್ಲ ನಾವು ಈಗ ಸೇವಿಸುವ ಪ್ರತಿ ಆಹಾರವೂ ವಿಷಯುಕ್ತವಾಗಿದೆ. ಆದ್ದರಿಂದ ಮನುಷ್ಯನಲ್ಲಿ ರೋಗ ನಿರೋಕ ಶಕ್ತಿ ಕುಂದಿ ಹಲವಾರು ರೋಜರುಜಿನಗಳಿಗೆ ತುತ್ತಾಗುತ್ತಿದ್ದಾರೆ.

 

ಕೃಷಿ ಭೂಮಿಯ ಉಳಿವು, ರೈತರ ಉಳಿವು ಹಾಗೂ ಜಗದ ಉಳಿವಿಗಾಗಿ ನಮ್ಮ ರೈತರು ರಾಸಾಯನಿಕ ಕೃಷಿ ಪದ್ಧತಿ ನಿಲ್ಲಿಸಿ,ಸಾವಯವ ಕೃಷಿಯತ್ತ ಮುಖ ಮಾಡಬೇಕಿದೆ.

ಈ ನಿಟ್ಟಿನಲ್ಲಿ ಜಮಖಂಡಿ ತಾಲೂಕು ಕೊನ್ನೂರು ಗ್ರಾಮದ ಕೃಷಿಕ ಸಿದ್ದಪ್ಪ ಅವರು ಸಾವಯವ ಕೃಷಿ ಪದ್ಧಯಲ್ಲಿ ಈರುಳ್ಳಿಯನ್ನು ಬೆಳೆಯುತ್ತಿದ್ದು ಕಡಿಮೆ ಖರ್ಚು, ಕಡಿಮೆ ಶ್ರಮದಲ್ಲಿ ವಿಷಮುಕ್ತವಾದ ಉತ್ತಮ ಬೆಳೆಯನ್ನು ಬೆಳೆದಿದ್ದಾರೆ.

 

https://www.youtube.com/watch?v=2JR4IzAQlXk&t=397s

 

 ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233

ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:

https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE

 Microbi Agrotech Website: http://www.microbiagro.com

 Subscribe to Microbi Agrotech: https://youtube.com/c/MICROBIAGROTECHPVTLTDKANNADA

 Like us on Facebook: https://www.facebook.com/microbiagrotech/

 

ವರದಿ : ವನಿತಾ ಯ ಪರಸನ್ನವರ

 




Blog




Home    |   About Us    |   Contact    |   
microbi.tv | Ocat Online Catalog Marketing Service in India | Powered by Adsin Technologies