Blog

ಬಡವರ ಬಾದಾಮಿ ಶೇಂಗಾ ರಾಜ್ಯದ ಎಲ್ಲಾ ಭಾಗದಲ್ಲಿ ಬೆಳೆಯುವ ಬೆಳೆ. ಎಲ್ಲಾ ರೀತಿಯ ಹವಾಗುಣಕ್ಕೂ ಹೊಂದಿಕೊಳ್ಳುವುದರಿಂದ ಪ್ರಮುಖ ದ್ವಿದಳ ಎಣ್ಣೆಕಾಳು ಬೆಳೆ ಎಂದು ಕರೆಯುತ್ತಾರೆ.

 

ಶೇಂಗಾ ಅಥವಾ ಕಾಳು ಬೆಳೆಯನ್ನು ಬೆಳೆಯುವಾಗ ರೈತರು ತುಂಬಾ ಎಚ್ಚರಿಕೆ ವಹಿಸಬೇಕಾದ ವಿಷಯವೆಂದರೆ ಬೀಜೋಪಚಾರ ಮಾಡುವುದು. ಹೌದು ಬೀಜೋಪಚಾರ ಮಾಡದೆ ನೀವು ಯಾವುದೇ ಬೆಳೆ ಬೆಳೆದರೆ, ಅದು ಮೊಳಕೆಯೊಡೆಯುವ ಮುನ್ನವೇ ಮಣ್ಣಿನಲ್ಲಿ ಮಣ್ಣಾಗುವುದು ಖಂಡಿತ. ಮಣ್ಣಿನಲ್ಲಿರುವ ರೋಗಾಣುಗಳಿಂದಾಗಿ ಬಿತ್ತನೆ ಮಾಡಿದ ಬೀಜಗಳು ಸರಿಯಾಗಿ ಮೊಳಕೆಯೊಡೆಯುವುದಿಲ್ಲ. ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವ ಹಾಗೆ ಬೀಜೋಪಚಾರವಿಲ್ಲದೆ ಯಾವ ಬೆಳೆ ಬೆಳೆದರೂ ನಾನಾ ಅಪಾಯಕ್ಕೆ ಆಹ್ವಾನ ನೀಡಿದಂತೆ.

 

ಇನ್ನು ಬೆಳೆ ಬೆಳೆದು ನಿಂತಾಗ ವಾತಾವರಣದಿಂದ ಹರಡುವ ರೋಗಗಳು ಹೆಚ್ಚಾಗಿರುತ್ತವೆ. ಅವುಗಳಿಂದ ಬೆಳೆ ಉಳಿಸಿಕೊಳ್ಳುವುದು ಹೇಗೆ ಎನ್ನುವುದಾದರೆ, ನೀವು ರಾಸಾಯನಿಕ ಕೃಷಿ ಪದ್ಧತಿಯನ್ನು ನಿಲ್ಲಿಸಿ ಸಾವಯವ ಮತ್ತು ವೈಜ್ಞಾನಿಕ ಕೃಷಿ ಅಳವಡಿಕೆ ಮಾಡಿಕೊಳ್ಳಬೇಕು. ರಾಸಾಯನಿಕ ಗೊಬ್ಬರಗಳನ್ನು ಬಳಸದೆ ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆಗಳ ಸಂಜೀವಿನಿ ಡಾ.ಸಾಯಿಲ್ ಜೈವಿಕ ಗೊಬ್ಬರಗಳನ್ನು ಬಳಸಿದರೆ, ಬೆಳೆಗಳಿಗೆ ಹೆಚ್ಚಿನ ರೋಗನಿರೋಧಕ ಶಕ್ತಿಯನ್ನು ಒದಗಿಸಿ ರೋಗಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಬೆಳೆಗೆ ಒದಗಿಸುತ್ತದೆ. ಇದಕ್ಕೆ ನೀವು ಹೆಚ್ಚು ಖರ್ಚು ಮಾಡುವ ಅವಶ್ಯಕತೆಯೂ ಬರುವುದಿಲ್ಲ. ರಾಸಾಯನಿಕ ಗೊಬ್ಬರದ ಖರ್ಚಿಗಿಂತ ಕನಿಷ್ಠ ಅರ್ಧ ಖರ್ಚು ಕಡಿಮೆಯಾಗುತ್ತದೆ.

 

ಗದಗ ಜಿಲ್ಲೆ, ಗಜೇಂದ್ರಗಡ ತಾಲೂಕಿನ ಕೃಷಿಕ ಕಳಕಪ್ಪ ಕಾಸಾಯಿ ಅವರು, ತಮ್ಮ ಮಗನ ಒತ್ತಾಯದ ಮೇರೆಗೆ ಡಾ.ಸಾಯಿಲ್ ಜೈವಿಕ ಗೊಬ್ಬರ ಬಳಸಿ ಶೇಂಗಾ ಬೆಳೆಯನ್ನು ಬೆಳೆದರು.  ಈಗ ತಮ್ಮ ಬೆಳೆಯನ್ನು ಕಂಡು ವಿಸ್ಮಿತರಾಗಿದ್ದು, ಎಲ್ಲರಿಗೂ ಡಾ.ಸಾಯಿಲ್ ಜೈವಿಕ ಗೊಬ್ಬರದ ಬಗ್ಗೆ ತಿಳಿಸುತ್ತಿದ್ದಾರೆ. ಇದು ರೈತರಿಗೆ ತುಂಬಾ ಉಪಯುಕ್ತ. ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಕೊಡುವ ಅಮೃತ ಬಿಂದು ಎನ್ನುತ್ತಾರೆ. ಸಾವಯವ ಕೃಷಿಕರಾದ ಕಳಕಪ್ಪ ಅವರು, ಮೈಕ್ರೋಬಿ ಟಿವಿಯೊಂದಿಗೆ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ.

 

https://www.youtube.com/watch?v=yJkIK5ffgNE&t=99s 


ವರದಿ: ವನಿತಾ ಪರಸನ್ನವರ್


ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233

 

ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:

https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE

 Microbi Agrotech Website: http://www.microbiagro.com

 Subscribe to Microbi Agrotech: https://youtube.com/c/MICROBIAGROTECHPVTLTDKANNADA

 Like us on Facebook: https://www.facebook.com/microbiagrotech/

 

#Organicgroundnut  #organicgroundnutfarming  #organicfertilizerforshenga  #groundnutgrower  #peanutsfarming,  #Bijopachara  #seedtreatment  #shenga  #seeds  #viralvideo  #trandingvideo  #goodcrop  #healthyfood  #0rganicfood  #mostpopularvideo  #highincomeinagriculture  #howtodoagriculture  #organicagriculture  #benefits  #krushiloka  #krushivideos  #krushimarukatte  #agriculturevideosinkannada  



Blog




Home    |   About Us    |   Contact    |   
microbi.tv | Powered by Ocat Online Advertising Service in India