Blog

ತಂತ್ರಜ್ಞಾನವಿಜ್ಞಾನಶಿಕ್ಷಣ ಸೇರಿದಂತೆ ಎಲ್ಲದರಲ್ಲೂ ನಾವು ಮುಂದೆ ಸಾಗುತ್ತಿರುವುದು ಹೆಮ್ಮೆಯ ವಿಚಾರವೇ. ಅದರಂತೆ ಕೃಷಿ ಕ್ಷೇತ್ರದಲ್ಲಿಯೂ ಒಂದಲ್ಲಾ ಒಂದು ಬೆಳವಣಿಗೆ, ಪ್ರಯೋಗ ನಿತ್ಯವೂ ಸಾಗಿದೆ.  ಇತ್ತೀಚಿನ ದಿನಗಳಲ್ಲಿ ಹೆಚ್ಚು ಪ್ರಚಲಿತವಾಗಿರುವ ಹೈಡ್ರೋಪೋನಿಕ್ಸ್ ಕೃಷಿ ಎಲ್ಲರ ಗಮನ ಸೆಳೆಯುತ್ತಿದೆ. ಕೃಷಿಗೆ ಮಣ್ಣೇ ಜೀವಾಳ. ಆದರೆ ಈ ಹೊಸ ಮಾದರಿಯ ಕೃಷಿಗೆ ಮಣ್ಣು ಬೇಡವೇ ಬೇಡ. ಮಣ್ಣಿಲ್ಲದೆ ಕೃಷಿ ಮಾಡಿ ಅಧಿಕ ಆದಾಯ ಗಳಿಸಬಹುದು. ಹೈಡ್ರೋಪೋನಿಕ್ಸ್ ತಂತ್ರಜ್ಞಾನವೆಂದು ಕರೆಯಲ್ಪಡುವ ಈ ವಿಧಾನವನ್ನು 1940ರಲ್ಲಿ ಪರ್ಡ್ಯೂ ವಿಶ್ವವಿದ್ಯಾಲಯದ ಸಂಶೋಧಕರು ವ್ಯವಸ್ಥೆಯಲ್ಲಿ ಬೆಳೆಯುವ ಬೆಳವಣಿಗೆಗೆ ಬೇಕಾಗುವ ಪೋಷಕಾಂಶ ದ್ರಾವಣವನ್ನು ಅಭಿವೃದ್ಧಿಪಡಿಸಿದರು. ನಂತರ 1960 ಮತ್ತು 70ರ ದಶಕದಲ್ಲಿ ಕೆಲವೊಂದು ದೇಶಗಳಲ್ಲಿ ಹೈಡ್ರೋಪೋನಿಕ್ಸ್ ಫಾರ್ಮ್ ಗಳು ತಲೆ ಎತ್ತಿದವು.

 

2021ರಲ್ಲಿ ಬಿಡುಗಡೆಯಾದ ವರದಿಯ ಪ್ರಕಾರಭಾರತೀಯ ಹೈಡ್ರೋಪೋನಿಕ್ಸ್ ಮಾರುಕಟ್ಟೆಯು 2020 ಮತ್ತು 2027 ನಡುವೆ 13.53% ನದರದಲ್ಲಿ ಬೆಳೆಯುವ ಸಾಧ್ಯತೆಯಿದೆಹಾಗೆಯೇ ಜಲಕೃಷಿಯ ಜಾಗತಿಕ ಮಾರುಕಟ್ಟೆಯು 6.8% ರಷ್ಟು ಬೆಳೆಯುತ್ತದೆ ಎಂದು ಹೇಳಲಾಗಿದೆ.


ಜಲಕೃಷಿ ಅಥವಾ ಹೈಡ್ರೋಪೋನಿಕ್ಸ್ ಎಂದರೆ ಖನಿಜ ಪೋಷಕಾಂಶಗಳುಳ್ಳ ನೀರಿನಂತಹ ದ್ರಾವಣಗಳ್ನು ಬಳಸಿಕೊಂಡು ಮಣ್ಣಿಲ್ಲದೇ ಮಾಡುವ ಕೃಷಿಯಾಗಿದೆಕೆಲವರಿಗೆ ಕೃಷಿ ಮಾಡುವ ಆಸಕ್ತಿ ಇರುತ್ತದೆ. ಆದರೆ ಕೃಷಿ ಭೂಮಿ ಇರುವುದಿಲ್ಲಇನ್ನು ಕೆಲವರಿಗೆ ಕೃಷಿ ಭೂಮಿ ಇದ್ದರೂ ಸಹಿತ ಬೆಳೆ ಬೆಳೆಯಲು ಯೋಗ್ಯವಾಗಿರುವುದಿಲ್ಲ. ಅಂತವರಿಗೆ  ಹೈಡ್ರೋಪೋನಿಕ್ಸ್ ಕೃಷಿ ತುಂಬಾ ಅನುಕೂಲವಾಗಿದೆ.

  

https://www.youtube.com/watch?v=jQ8dBrWjQ0U&t=81s

 

 ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233

ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:

https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE

 Microbi Agrotech Website: http://www.microbiagro.com

 Subscribe to Microbi Agrotech: https://youtube.com/c/MICROBIAGROTECHPVTLTDKANNADA

 Like us on Facebook: https://www.facebook.com/microbiagrotech/

 

 ವರದಿ: ವನಿತಾ ಯ ಪರಸನ್ನವರ್

 




Blog




Home    |   About Us    |   Contact    |   
microbi.tv | Powered by Ocat Online Advertising Service in India