Blog

ಕೃಷಿಕನಿಗೆ ಸಾವಯವ ಕೃಷಿಯ ಪರಿಚಯ:

ಕೃಷಿಕ ಮಲ್ಲು ಮೆಳ್ಳಿಗೆರಿ ಅವರಿಗೆ ಮೊದಲು ಸಾವಯವ ಕೃಷಿಯ ಮಾಹಿತಿ ಇರಲಿಲ್ಲ. ತಮ್ಮ ಎರಡು ಎಕರೆ ಕಬ್ಬು ಬೆಳೆಗೆ ರಾಸಾಯನಿಕ ಗೊಬ್ಬರವನ್ನೇ ಬಳಸಿದ್ದರು. ನಂತರ ಸರಿಯಾದ ಮಾಹಿತಿ ದೊರೆತ ಕೂಡಲೇ ಕೃಷಿಕ ತಮ್ಮ ಮತ್ತೊಂದು ಎರಡು ಎಕರೆ ಕಬ್ಬು ಬೆಳೆಗೆ ಸಾವಯವ ಕೃಷಿಯ ಮೂಲಕ ನಿರ್ವಹಣೆ ಮಾಡಲು ಪ್ರಾರಂಭಿಸಿದ್ರು.  ಆಗ ಕೃಷಿಕನಿಗೆ ಒಂದು ಗೊಂದಲವಿತ್ತು ಅದೇನು ಅಂದ್ರೆ, ರಾಸಾಯನಿಕದಲ್ಲಿ ಬೆಳೆದ ಕಬ್ಬು ಮತ್ತು ಸಾವಯವದಲ್ಲಿ ಬೆಳೆದ ಕಬ್ಬು, ಈ ಎರಡರಲ್ಲಿ ಯಾವುದು ಹೆಚ್ಚು ಆರೋಗ್ಯ ಕಾಯ್ದುಕೊಳ್ಳುತ್ತದೆ ಎನ್ನುವುದು. ಕೃಷಿಕನಿಗೆ ಪ್ರಾಯೋಗಿಕ ಅನುಭವ ಬೇಕಿತ್ತು, ಅದನ್ನು ಅವರು ಪಡೆದುಕೊಂಡೇ ಬಿಟ್ಟರು.

 

ರಾಸಾಯನಿಕದಲ್ಲಿ ಬೆಳೆದ ಕಬ್ಬಿನ ಆರೋಗ್ಯ:

 

ಕೃಷಿಕ ಮಲ್ಲು ಮೆಳ್ಳಿಗೆರಿ ಅವರು, ರಾಸಾಯನಿಕದಲ್ಲಿ ನಿರ್ವಹಣೆ ಮಾಡುತ್ತಿರುವ ಕಬ್ಬು ಬೆಳೆಯ ವಯಸ್ಸು ಒಂದು ವರ್ಷ. ಈ ಅವಧಿಯಲ್ಲಿ ಕಬ್ಬು ಬೆಳೆ 10 ರಿಂದ 12 ಮರಿಗಳನ್ನ, 20 ರಿಂದ 30 ಗಣಿಕೆಗಳನ್ನ ಒಳಗೊಂಡಿದೆ, ನೋಡಲು ಲಕ್ಷಣವಿಲ್ಲ, ಕಬ್ಬಿನ ಗಳಗಳು ಕೂಡ ಸದೃಢವಾಗಿಲ್ಲ. ಮಣ್ಣು ಬಿರುಸಾಗಿದೆ, ಷ್ಟೇ ನೀರು ಕೊಟ್ಟರೂ ಭೂಮಿಯ ಆಳಕ್ಕೆ ಇಳಿಯುತ್ತಿಲ್ಲ(ಇಂಗುತ್ತಿಲ್ಲ). ಉತ್ಕೃಷ್ಟ ಇಳುವರಿ ಸಿಗುವ ನಂಬಿಕೆಯಂತೂ ಇಲ್ಲವೇ ಇಲ್ಲ. ಇಂತಹ ಬೆಳೆಗೆ ಆಗಿರುವ ಖರ್ಚು ಮಾತ್ರ ಕಿಸೆ ಸುಡುವಷ್ಟು.

ಸಾವಯವ ಕೃಷಿಯಲ್ಲಿ ಬೆಳೆದ ಕಬ್ಬಿನ ಆರೋಗ್ಯ:

ಸಾವಯವದಲ್ಲಿ ಬೆಳೆದ ಕಬ್ಬು ಬೆಳೆಗೆ ಸರಿಸುಮಾರು 8 ತಿಂಗಳು. ಈಗಾಗಲೇ ಬೆಳೆ 12 ರಿಂದ 18 ಮರಿ ಮತ್ತು 20 ರಿಂದ 25 ಗಣಿಕೆಗಳನ್ನ ಒಳಗೊಂಡಿದೆ. ಅದಷ್ಟೆ ಅಲ್ಲದೆ, ಕಬ್ಬು ಬೆಳೆ ನೋಡಲು ಸದೃಢವಾಗಿದೆ. ಹಚ್ಚ ಹಸಿರು ಬಣ್ಣ ತುಂಬಿಕೊಂಡಿದೆ, ಕೃಷಿ ಕೆಲಸ ಮಾಡುತ್ತಿರುವಾಗ ಮತ್ತಷ್ಟು ಉತ್ಸಾಹ ಬರುತ್ತದೆ. ಯಾಕಂದ್ರೆ ಬೆಳೆ ಸಮೃದ್ಧವಾಗಿದೆ, ಮಣ್ಣು ಮೃದುವಾಗಿದೆ, ಇದರ ಜತೆಗೆ ಭೂಮಿಗೆ ನೀರು ಕೊಟ್ಟರೆ, ನೀರು ಹಿಡಿದಿಟ್ಟುಕೊಳ್ಳುವ ಶಕ್ತಿ ಹೆಚ್ಚಿಸಿಕೊಂಡಿದೆ. ಬೆಳೆ ರೈತನಿಗೆ ಹೆಚ್ಚು ಇಳುವರಿ ನೀಡಲು ಮತ್ತಷ್ಟು ನಂಬಿಕೆ ಮೂಡಿಸುತ್ತಿದೆ. ಇಂತಹ ಸಮೃದ್ಧ ಬೆಳೆಗೆ ಕೃಷಿಕ ಮಾಡಿರುವ ಖರ್ಚು ಬಹಳ ಕಡಿಮೆಯಾಗಿದೆ.

 

ಸಾವಯವ ಕೃಷಿಯಿಂದ ಬದಲಾವಣೆ:

ಕೃಷಿಕ ಮಲ್ಲು ಮೆಳ್ಳಗೆರಿ ಅವರು ಸಾವಯವ ಕೃಷಿಯಲ್ಲಿಯಾದ ಬದಲಾವಣೆ ನೋಡಿ. ಒಂದು ಗುಂಟೆ ಕಬ್ಬನ್ನ ಕಟಾವು ಮಾಡಿದ್ರು. ಕಟಾವು ಮಾಡಿದ ಕಬ್ಬನ್ನ ತೂಕಕ್ಕೆ ಹಾಕಿದ್ರೆ ಸಿಕ್ಕ ಫಲಿತಾಂಶ ಬರೋಬ್ಬರಿ ಎರಡು ಟನ್. ನಂತರ ಕೃಷಿಕ ಆ ಕಬ್ಬಿನ ಗಣಿಕೆಗಳನ್ನ ತೆಗೆದುಕೊಂಡು ಮತ್ತೆ ಎರಡು ಎಕರೆ ಕೃಷಿ ಭೂಮಿಯಲ್ಲಿ ಬೀಜೋಪಚಾರ ಮಾಡಿ ನಾಟಿ ಮಾಡಿದ್ದಾರೆ. ಇನ್ಮುಂದೆ ಯಾವುದೆ ಬೆಳೆ ಬೆಳೆಯಲು ಮುಂದಾದ್ರೆ ಸಾವಯವ ಕೃಷಿಯ ಜತೆಗೆ ಸಾಗುವೆ ಎಂದು ಹರುಷ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ಕೃಷಿಕರು ಕಬ್ಬು ಅಥವಾ ಯಾವುದೇ ಬೆಳೆ ಬೆಳೆಯಲು ಮುಂದಾದ್ರೆ, ಸಾವಯವ ಕೃಷಿಯೊಂದಿಗೆ ಸಾಗಿದ್ರೆ ಬೆಳೆ ಮತ್ತು ಭೂಮಿ ಎಂದೆಂದಿಗೂ ಆರೋಗ್ಯವಾಗಿರುತ್ತದೆ.

ವರದಿ: ಶ್ವೇತಾ ಕಲಕಣಿ

 

ಈ ಕುರಿತು ಇನ್ನು ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

https://www.youtube.com/watch?v=eP1-4Tb2d6A&t=6s

 

 

 



Blog




Home    |   About Us    |   Contact    |   
microbi.tv | Ocat Online Catalog Marketing Service in India | Powered by Adsin Technologies