Blog

ಬಾಳೆ ಬೆಳೆಗೆ ಯಾವ ಮಣ್ಣು ಸೂಕ್ತ?

ಬೆಳೆ ಬೆಳೆಯುವ ಮುನ್ನ ಮಣ್ಣು ಪರೀಕ್ಷೆ ಮಾಡಿಸುವುದು ಸೂಕ್ತ, ಕೆಂದರೆ ಮಣ್ಣಿನಲ್ಲಿ ಯಾವ ಪೋಷಕಾಂಶವಿದೆ, ಯಾವ ಪೋಷಕಾಂಶವನ್ನು ನೀಡಿದರೆ ಉತ್ತಮ ಎಂಬ ಮಾಹಿತಿಯನ್ನು ನಾವು ತಿಳಿದುಕೊಳ್ಳಬಹುದು. ಇನ್ನು ಜಿಡ್ಡು ಮಣ್ಣು, ಹೆಚ್ಚು ಮರಳು ಮಣ್ಣು, ಉಪ್ಪು ಮಣ್ಣು ಬಾಳೆ ಬೆಳೆಯಲು ಸೂಕ್ತವಲ್ಲ. ಬಾಳೆಗೆ ಸೂಕ್ತವಾದ ಮಣ್ಣುಗಳೆಂದರೆ  ಮರಳು ಮಿಶ್ರಿತ ಬೂದು ಮಣ್ಣು, ಕೆಂಪು ಮಣ್ಣು. ಮಣ್ಣಿನಲ್ಲಿ ರಸಸಾರ  6, 7 ರಷ್ಟಿದ್ದು, ನೀರು ಇಂಗುವ ಶಕ್ತಿ ಆ ಮಣ್ಣಿನಲ್ಲಿರಬೇಕು.

ಭೂಮಿಯ ಸಿದ್ಧತೆ?

ನಾಟಿಯ ಮೊದಲು ಭೂಮಿಯ ಸಿದ್ಧತೆಯ ಬಗ್ಗೆ ನಾವು ಹೆಚ್ಚಿನ ನಿಗಾವಹಿಸಬೇಕಾಗುತ್ತದೆ. ಬಾಳೆ ನಾಟಿಯ ಮೂರು ತಿಂಗಳ ಪೂರ್ವದಲ್ಲಿಯೇ ನಾವು ಭೂಮಿಯ ಸಿದ್ಧತೆಯನ್ನು ಮಾಡಿಕೊಳ್ಳಬೇಕಾಗುತ್ತದೆ, ಒಂದು ಬೆಳೆಯನ್ನು ನಾವು ಕಟಾವು ಮಾಡಿದಮೇಲೆ ಹಸಿರೆಲೆಗೊಬ್ಬರಗಳನ್ನು ಭೂಮಿಯಲ್ಲಿ ಮಲ್ಚಿಂಗ್ ಮಾಡಿ ಮೊದಲು ಭೂಮಿಯನ್ನು ಹದಗೊಳಿಸಬೇಕು, ಹಸಿರೆಲೆ ಗೊಬ್ಬರಗಳನ್ನು  ಲ್ಚಿಂಗ್ ಮಾಡಿ ಮೂರು ತಿಂಗಳ ಬಳಿಕ ಬೇವಿನ ಹಿಂಡಿ, ಕೊಟ್ಟಿಗೆ ಗೊಬ್ಬರಗಳನ್ನು ಭೂಮಿಗೆ ನೀಡಿ ಸಾವಯವ ಕೃಷಿಯಲ್ಲಿ ಭೂಮಿ ಸಿದ್ಧತೆಯನ್ನು ಮಾಡಿಕೊಂಡು ಬೆಳೆ ನಾಟಿ ಮಾಡಬೇಕು.

ನಾಟಿ ಮಾಡುವ ವಿಧಾನ:

ಬಾಳೆಯ ಕಂದು ಅಥವಾ ಸಸಿಗಳನ್ನು ನಾಟಿ ಮಾಡುವ ಮುನ್ನ ಬೀಜೋಪಚಾರ ಮಾಡುವುದು ಉತ್ತಮ. ಜೈವಿಕ ಗೊಬ್ಬರಗಳನ್ನು ಬಳಸಿ ಅಜೋಸ್ಪಿರಿಲಮ್ ನಿಂದ ಬಾಳೆಯನ್ನು ಬೀಜೋಪಚರಿಸಿದರೆ ಬೆಳೆಗೆ ರಕ್ಷಾ ಕವಚವನ್ನು ಹಾಕಿದಂತಾಗುತ್ತದೆ ಬೆಳೆಯುವ ಹಂತದಲ್ಲಿ ಬೆಳೆಗೆ ಯಾವುದೇ ರೋಗಕ್ಕೆ ತುತ್ತಾಗದಂತೆ ಇದು ರಕ್ಷಣೆಯನ್ನು ನೀಡುತ್ತದೆ. ಜತೆಗೆ ಬಾಳೆ ನಾಟಿಗೆ ಗುಣಿಗಳನ್ನು ತೆಗೆಯುವ ಸಮಯದಲ್ಲಿ ರೈತರು ಹೆಚ್ಚಿನ ಜಾಗ್ರತೆ ವಹಿಸಬೇಕಾಗುತ್ತದೆ. ಗುಂಡಿಯನ್ನು ತೆಗೆಯುವಾಗ ಉದ್ದ, ಅಗಲ, ಆಳ 45*45*45 ಸೆಂ.ಮೀ ಇರಬೇಕಾಗುತ್ತದೆ. ಗುಣಿಯಲ್ಲಿ ಬೇವಿನ ಹಿಂಡಿ, ಕೊಟ್ಟಿಗೆ ಗೊಬ್ಬರ, ಹಸಿರೆಲೆ ಗೊಬ್ಬರ ಮತ್ತು ಮೇಲು ಪದರ ಮಣ್ಣು ಆ ಗುಂಡಿಗೆ ಸೇರಿಸಬೇಕಾಗುತ್ತದೆ. ಇನ್ನು ಬೆಳೆಯಲ್ಲಿ ಅಂತರವನ್ನು ನೋಡುವುದಾದರೆ 3 ರಿಂದ ಮೂರೂವರೆ ಮೀಟರ್ ನಷ್ಟು, ಬೆಳೆಯಿಂದ ಬೆಳೆಗೆ ಸಾಲಿನಿಂದ ಸಾಲಿಗೆ ಅಂತರ ಕಾಯ್ದುಕೊಳ್ಳಬೇಕಾಗುತ್ತದೆ. 

ಒಟ್ಟಿನಲ್ಲಿ ರೈತ ಬೆಳೆದ ಬೆಳೆ ಸಮೃದ್ಧವಾಗಿರಬೇಕು, ರೈತನಿಗೆ ಹೆಚ್ಚು ಇಳುವರಿ ಸಿಗಬೇಕು ಎಂದರೆ ನಾವು ಬೆಳೆಗೆ ನಾಟಿಯಿಂದ, ಇಳುವರಿಯ ಹಂತದ ವರೆಗೆ ಎಂತಹ ಪೋಷಕಾಂಶಗಳನ್ನು ನೀಡುತ್ತೇವೆ ಎಂಬುದು ತುಂಬಾ ಮುಖ್ಯವಾಗಿರುತ್ತೆ.

ವರದಿ: ವನಿತಾ ಪರಸಣ್ಣವರ್

 ಬಾಳೆ ಬೆಳೆಯ ಇಳುವರಿ ಮತ್ತು ಗುಂಪು ಬಾಳೆಯ ಕುರಿತು ಹೆಚ್ಚಿನ ಮಾಹಿತಿಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.

 

https://www.youtube.com/watch?v=6SZHHToKDzw&t=13s

 

#tags  #Organicbanana  #Bumperyieldinbanana  #howtodoorganicfarming  #organicbananafarminginkarnataka  #organicbananaripening  #organicbananafertilizer  #OrganicbananafarminginKannada  #harvestingprocessing  #seedtreatment  


Blog




Home    |   About Us    |   Contact    |   
microbi.tv | Ocat® Promote in India | Powered by Adsin Technologies