Blog

ಆಹಾರ, ನಾರು ಹಾಗೂ ಇಂಧನವನ್ನು ಒದಗಿಸುವುದು, ಸಾವಯವ ವಸ್ತುಗಳು ವಿಭಜನೆ (ಉದಾ: ಸತ್ತ ಸಸ್ಯ & ಪ್ರಾಣಿಜನ್ಯ), ಅಗತ್ಯ ಪೋಷಕಾಂಶಗಳ ಮರುಬಳಕೆ, ನೀರಿನ ಗುಣಮಟ್ಟ ಹಾಗೂ ನೀರಿನ ಪೊರೈಕೆಯ ನಿಯಂತ್ರಣ, ಅಸಂಖ್ಯಾತ ಪ್ರಾಣಿಗಳು ಹಾಗೂ ಸೂಕ್ಷ್ಮಣುಜೀವಿಗಳಿಗೆ ವಾಸಸ್ಥಾನ ಒದಗಿಸುವುದು.

 

ಕೃಷಿಯಲ್ಲಿನ ಅಕ್ರಮಣಕಾರಿ ಮಾನವ ಚಟುವಟಿಕೆಗಳ ಕಾರಣದಿಂದಾಗಿ ಮಣ್ಣು ಜಾಗತಿಕ ಮಟ್ಟದಲ್ಲಿ ವೇಗವಾಗಿ ಕುಸಿಯುತ್ತಿದೆ. ಮಾನವ ಮತ್ತು ಪರಿಸರ ವ್ಯವಸ್ಥೆ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ.

 

ಸಾವಯವ ವಸ್ತು ಎಂದರೇನು?

  ಸಾವಯವ ವಸ್ತುವು ಜೀವಿಗಳಿಂದ ರಚಿಸಲ್ಪಟ್ಟ ಇಂಗಾಲದ ಸಂಯುಕ್ತಗಳನ್ನು ಒಳಗೊಂಡಿರುತ್ತದೆ. ಉದಾಹರಣೆಗೆ ಸಸ್ಯಭಗ್ನಾವಶೇಷ, ಚೂರುಚೂರು ಎಲೆಗಳು. ಪ್ರಾಣಿಗೊಬ್ಬರ ಮತ್ತು ಹುಲ್ಲಿನ ತುಣುಕುಗಳು.

 

ಸಾವಯವ ವಸ್ತು ಮಣ್ಣಿಗೆ ಏನು ಮಾಡುತ್ತದೆ?

ಸಸ್ಯಗಳಿಗೆ ಪೋಷಕಾಂಶಗಳನ್ನು ಪೂರೈಸುವುದು, ಮಣ್ಣಿನ ರಚನೆಯನ್ನು ಸುಧಾರಿಸುವುದುಮಾಲಿನ್ಯಕಾರಿ ಅಂಶಗಳನ್ನು ಬಂಧಿಸುವಲ್ಲಿ, ಸಾವಯವ ವಸ್ತುವು ಪ್ರಮುಖ ಪಾತ್ರ ವಹಿಸುತ್ತದೆ.

ನಿಮ್ಮ ಮಣ್ಣಿನಲ್ಲಿರುವ ಜೀವಿಗಳು ಸಾವಯವ ತ್ಯಾಜ್ಯಗಳನ್ನು ಕಳಿಯುವಂತೆ ಮಾಡಿ ಗೊಬ್ಬರವನ್ನಾಗಿಸುತ್ತವೆ ಹಾಗೂ ಅದನ್ನು ಪೋಷಕಾಂಶಗಳಿಂದ ಕೂಡಿದ ಹ್ಯೂಮಸ್ ಆಗಿ ಪರಿವರ್ತಿಸುತ್ತವೆ.

 

ಸೂಕ್ಷ್ಮಜೀವಿಗಳು ಸಾವಯವ ತ್ಯಾಜ್ಯಗ¼ನ್ನು ತಿನ್ನುತ್ತಿದ್ದಂತೆ, ಅವು ರಂಧ್ರ ಹಾಗೂ ಗಾಳಿಯ ಪಾಕೆಟ್‍ಗಳನ್ನು ಮಣ್ಣಿನಲ್ಲಿ ರಚಿಸುತ್ತªÉ ಇದರಿಂದ ಗಾಳಿ ಹಾಗೂ ನೀರು ಬೇರುಗಳುನ್ನು ತಲುಪಲು ಅನುವು ಮಾಡಿಕೊಡಲು ಮಣ್ಣನ್ನು ಹಗುರಗೊಳಿಸುತ್ತದೆ.

ಮಣ್ಣಿನಲ್ಲಿ ಸಾವಯವ ತ್ಯಾಜ್ಯಗಳನ್ನು ಸೇರಿಸುವುದರಿಂದ ಮಣ್ಣನ್ನು ಉತ್ತಮವಾಗಿಸಿ ಮಣ್ಣಿನ ಫಲವತ್ತತೆ, ಮಣ್ಣಿನ ರಚನೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಹಾಗೂ ಸಸ್ಯಗಳ ಬೇರುಗಳು ಸುಲಭವಾಗಿ ಬೆಳೆದು, ಸಸ್ಯಗಳು ಬೆಳವಣಿಗೆಯಲ್ಲಿ ಅಭಿವೃದ್ಧಿ ಕಾಣುತ್ತವೆ.

 

ಪ್ರಯೋಜನಕಾರಿ ಸೂಕ್ಷ್ಮಾಣು ಜೀವಿಗಳು:    

 

     ಸೂಕ್ಷ್ಮಾಣುಜೀವಿಗಳಿಲ್ಲಿ ಶಿಲೀಂಧ್ರಗಳು, ಬ್ಯಾಕ್ಟೀರಿಯಾ ಹಾಗೂ ವೈರಸ್‍ಗಳು ಸೇರಿವೆ. ರೈತರು ಸಾಮಾನ್ಯವಾಗಿ ಸೂಕ್ಷ್ಮಜೀವಿಗಳನ್ನು ತಮ್ಮ ಬೆಳೆಗಳಿಗೆ ಅಥವಾ ಪ್ರಾಣಿಗಳಿಗೆ ಹಾನಿಕಾರಕವೆಂದು ಭಾವಿಸುತ್ತಾರೆ. ಆದರೆ ಅನೇಕ ಸೂಕ್ಷ್ಮಜೀವಿಗಳು ಪ್ರಯೋಜನಕಾರಿಯಾಗಿವೆ. ಸಾವಯವ ಪದಾರ್ಥಗಳನ್ನು ಕಳಿಯಲು ಮತ್ತು ಹಳೆಯ ಸಸ್ಯ ವಸ್ತುಗಳನ್ನು ಮರುಬಳಕೆ ಮಾಡಲು ಮಣ್ಣಿನ (ಬ್ಯಾಕ್ಟೀರಿಯಾಗಳು ಹಾಗೂ  ಶಿಲೀಂಧ್ರಗಳು) ಅವಶ್ಯಕ. ಕೆಲವು ಮಣ್ಣಿನ ಬ್ಯಾಕ್ಟೀರಿಯಾಗಳು ಮತ್ತು ಶಿಲೀಂಧ್ರಗಳು ಸಸ್ಯದ ಬೇರುಗಳೊಂದಿಗೆ ಸಂಬಂಧವನ್ನು ರೂಪಿಸುತ್ತದೆ. ಅದು ಸಾರಜನಕ, ರಂಜಕದಂತಹ ಪ್ರಮುಖ ಪೋಷಕಾಂಶಗಳನ್ನು ಒದಗಿಸುತ್ತದೆ. ಶಿಲೀಧ್ರಗಳು ಸಸ್ಯಗಳ ಮೇಲಿನ ಭಾಗಗಳನ್ನು ವಸಾಹತುವನ್ನಾಗಿ ಮಾಡಬಹುದು ಮತ್ತು ಬರ ಸಹಿಷ್ಠ್ಣುತೆ, ಶಾಖ ಸಹಿಷ್ಣುತೆ, ಕೀಟ ನಿರೋಧಕ, ರೋಗನಿರೋಧಕ ಶಕ್ತಿಯನ್ನು ಅಭಿವೃದ್ಧಿಗೊಳಿಸುತ್ತದೆ. ಅದಕ್ಕಿಂತ ಹೆಚ್ಚಾಗಿ ಮಣ್ಣಿನ ಭೌತಿಕ, ರಾಸಾಯನಿಕ ಹಾಗೂ ಜೈವಿಕ ಗುಣಗಳನ್ನು ಅಭಿವೃದ್ಧಿಪಡಿಸಿ, ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತದೆ.

 

ಪ್ರಯೋಜನಕಾರಿ ಸೂಕ್ಷ್ಮಾಣುಜೀವಿಗಳಿಗೆ ಉದಾಹರಣೆಗಳೆಂದರೆ: ರೈಜೋಬಿಯಂ, ಅಜೊಟೊಬ್ಯಾಕ್ಟರ್, ಅಜೋಸ್ಪಿರುಲಮ್ ಪಿ.ಎಸ್.ಬಿ, ಬ್ಯಾಸಿಲಸ್, ವ್ಯಾಮ್, ಟ್ರೈಕೊಡರ್ಮ ಇತ್ಯಾದಿ.

 

ಅದರೆ ಈ ಪ್ರಯೋಜನಕಾರಿ ಸೂಕ್ಷ್ಮಾಣುಜೀವಿಗಳು ರಾಸಾಯನಿಕ ಪದ್ಧತಿಯಿಂದ ಮಣ್ಣಿನಲ್ಲಿ ಕಡಿಮೆಯಾಗುತ್ತಾ ಬರುತ್ತಿವೆ. ಹಾಗಾಗಿ ಮಣ್ಣಿನ ಆರೋಗ್ಯ, ಬೆಳೆಗಳ ವ್ಯವಸ್ಥೆ, ಬೆಳೆಗಳ ವೈವಿಧಿಕರಣಕೆ ಕುಂಠಿತಗಳ್ಳುತ್ತಿದೆ.

 

ಸಾವಯವ ಪದ್ಧತಿಯನ್ನು ಅಳವಡಿಸಿಕೊಂಡು ಮಣ್ಣಿನ ಆರೋಗ್ಯ, ಬೆಳೆಗಳ ವ್ಯವಸ್ಥೆ, ಬೆಳೆಗಳ ವೈವಿಧಿಕರಣಕೆ ದಾರಿ ಮಾಡಿಕೊಡಬಹುದು. ಜೊತೆಗೆ ಮಣ್ಣಿನ ಮಾಲಿನ್ಯ, ಪರಿಸರ ಮಾಲಿನ್ಯಗಳು ಸಹ ಕ್ಷೀಣಿಸುತ್ತದೆ.

ವರದಿ: ಮಾನಮ್ಮ ದೊಡ್ಡಮನಿ

 

https://www.youtube.com/watch?v=BEsQvquZ_Yo

 

 



Blog




Home    |   About Us    |   Contact    |   
microbi.tv | Ocat Online Catalog Marketing Service in India | Powered by Adsin Technologies