Blog

ಇಂತಹ ಸನ್ನಿವೇಶ ಇತ್ತೀಚಿನ ದಿನಮಾನಲ್ಲಿ ಹೆಚ್ಚಾ ಹಿನ್ನೆಲೆಯಲ್ಲಿ, ರೈತರು ಇನ್ನೂ ಅಧಿಕ ಖರ್ಚಿನ ರಾಸಾಯನಿಕ ಗೊಬ್ಬರವನ್ನೇ ಅವಲಂಬಿಸಿದ್ದಾರೆ. ಇದರಿಂದಾಗಿ ಅವರಕೃಷಿ ಜೀವನ ಮತ್ತಷ್ಟು ಕಷ್ಟಕರವಾಗುತ್ತಿದೆ. ಹಾಗಾದ್ರೆ ಅಡಿಕೆ ಬೆಳೆಗಾರರ ಕೃಷಿ ಜೀವನ ಸರಳವಾಗಬೇಕು, ಇಳುವರಿ ಹೆಚ್ಚಾಗಬೇಕು ಅಂದ್ರೆ ಏನು ಮಾಡಬೇಕೆಂದು ಮೊದಲು ಅರಿಯಬೇಕು.

ಅಡಿಕೆ ಬೆಳೆಗೆ ಸಮಗ್ರ ಪೋಷಕಾಂಶಗಳನ್ನ ಸಮರ್ಕಕವಾಗಿ ನೀಡಿ, ಸರಿಯಾದ ಪ್ರಮಾಣದಲ್ಲಿ ನೀರಿನ ನಿರ್ವಹಣೆ ಮಾಡಬೇಕು.ನೈಸರ್ಗಿಕವಾಗಿ ಮಣ್ಣಿನ ಫಲವತ್ತತೆ ಹೆಚ್ಚಿಸಿಕೊಂಡರೆ, ಆಗ ಅಡಿಕೆ ಬೆಳೆ ಹೆಚ್ಚು ಇಳುವರಿ ನೀಡಲು ಶಕ್ತವಾಗುತ್ತದೆ. ಆಗ ಚಿಂತಾಕ್ರಾಂತ ಕೃಷಿ ಜೀವನವನ್ನ ಸುಖಕರವಾಗಿಸಿಕೊಳ್ಳಬಹುದು.

ಇಷ್ಟೆಲ್ಲ.. ಬೆಳವಣಿಗೆ ಅಡಿಕೆ ಬೆಳೆಯಲ್ಲಿ ಮಾಡುವಷ್ಟರಲ್ಲಿ, ಇನ್ನು ಅದೆಷ್ಟು ಖರ್ಚು ಬರುತ್ತೊ ಎಂದು ಯೋಚಿಸಬೇಡಿ, ಯಾಕಂದ್ರೆ ವಿಧಾನದಲ್ಲಿ ಹೆಚ್ಚು ಖರ್ಚಿನ ಅವಶ್ಯಕತೆ ರುವುದಿಲ್ಲ. ಈ ಎಲ್ಲ ಕಾರ್ಯವನ್ನ ಸಾವಯವ ಕೃಷಿಯಲ್ಲಿ ಮಾಡಿದರೆ ಖರ್ಚು ಕಡಿಮೆಯಾಗುತ್ತೆ, ವರ್ಷದಿಂದ ವರ್ಷಕ್ಕೆ ಇಳುವರಿಯೂ ಹೆಚ್ಚುತ್ತೆ.ಇನ್ನುಮಣ್ಣಿನಲ್ಲಿ ಜೈವಿಕ, ಭೌತಿಕ, ರಾಸಾಯನಿಕ ಗುಣಗಳು ಅಭಿವೃದ್ಧಿಯಾಗುತ್ತವೆ.

ಆನಂತರ ಮಣ್ಣಿನಲ್ಲಿ ನೈಸರ್ಗಿಕ ನೇಗಿಲಯೋಗಿ, ಅಂದ್ರೆ ರೈತನ ಮಿತ್ರಎರೆಹುಳುಗಳ ಸಂಖ್ಯೆ ದಿನೇದಿನೇ ಹೆಚ್ಚಾಗುತ್ತೆ. ಆಗ ಮಣ್ಣಿನಲ್ಲಿ ಎರೆಹುಳಿನ ಗೊಬ್ಬರ (ಕಾಂಪೋಸ್ಟ್) ಕೂಡ ಉಚಿತವಾಗಿ ಸಿಗುತ್ತೆ. ಅಡಿಕೆ ಬೆಳೆಯ ಜೀವನ ಆರಾಮದಾಯಕವಾಗಿರುತ್ತೆ, ಹಾಗೆ ರೈತನ ನಿರೀಕ್ಷೆಗಿಂತ ಅಧಿಕ ಇಳುವರಿ ಸಿಗುವುದರಲ್ಲಿ ಎರಡು ಮಾತಿಲ್ಲ.


ವರದಿ: ಶ್ವೇತಾ ಕಲಕಣಿ


ಇನ್ನು ಹೆಚ್ಚಿನ ಮಾಹಿತಿತಿಗಾಗಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

https://www.youtube.com/watch?v=fSsqwlpcuV4

 



Blog




Home    |   About Us    |   Contact    |   
microbi.tv | Ocat Online Catalog Marketing Service in India | Powered by Adsin Technologies