ಅತಿಯಾದ್ರೆ ಅಮೃತವೇ ವಿಷ. ಇನ್ನು ನೀರು ಏನಾಗುತ್ತೆ..?

ನೀರು ಸಕಲ ಜೀವರಾಶಿಗಳಿಗೆ ಅತ್ಯಗತ್ಯ. ಜತೆಗೆ ಕೃಷಿಯಲ್ಲಿಯೂ ಕೂಡ ನೀರಿನ ಪಾತ್ರ ಅತಿ ಮುಖ್ಯ. ನೀರು ಇಲ್ಲವೆಂದ್ರೆ ಬೆಳೆಯೇ ಇಲ್ಲ, ಹಾಗಂತ ನೀರನ್ನು ಹೆಚ್ಚಾಗಿ ಬಳಕೆ ಮಾಡುವಂತಿಲ್ಲ.ತಿಯಾದರೂ ಸಮಸ್ಯೆ, ಕಡಿಮೆಯಾದರೂ ಸಮಸ್ಯೆ. ಹಾಗಾಗಿ ಕೃಷಿ ಭೂಮಿಗೆ ನೀರನ್ನು ಹೇಗೆ ಬಳಸಬೇಕೆಂಬುದನ್ನು ರೈತರು ತಿಳಿಯಬೇಕು.

ಸಾವಯವ ಕೃಷಿ ಮೊದಲ ಯತ್ನದಲ್ಲೇ 100 ಟನ್ ಕಬ್ಬು ಇಳುವರಿ

ಸಾವಯವ ಕೃಷಿ ಮತ್ತು ವೈಜ್ಞಾನಿಕ ಕೃಷಿಯತ್ತ ರೈತರು ಚಿತ್ತ ಹರಿಸಿದರೆ ತಮ್ಮ ಭೂಮಿಯ ಆಯಸ್ಸನ್ನು ಹೆಚ್ಚಿಸಿಕೊಳ್ಳುವುದರಲ್ಲಿ ಅನುಮಾನವಿಲ್ಲ. ತಮ್ಮ ಕೃಷಿ ಭೂಮಿ ಮುಂದಿನ ಪೀಳಿಗೆಗೂ ಉಳಿಯಬೇಕೆಂದರೆ ರಾಸಾಯನಿಕಕ್ಕೆ ಮುಕ್ತಾಯ ಹೇಳುವುದು ಅನಿವಾರ್ಯವಾಗಿದೆ. ಅಷ್ಟೇ ಅಲ್ಲ ಮನುಷ್ಯನ ಆಯಸ್ಸು ಸಹಿತ ಕೃಷಿ ಪದ್ಧತಿಯ ಮೇಲೆಯೇ ಅವಲಂಬಿತವಾಗಿದೆ ಎಂದರೆ ತಪ್ಪಾಗದು. ಕಾರಣ ಮನುಷ್ಯ ಸೇವಿಸುವ ಆಹಾರ ಕೂಡ ವಿಷಯುಕ್ತವಾಗಿದೆ. ದೇಹಕ್ಕೆ ಬೇಕಾದ ಪೋಷಕಾಂಶಗಳು ದೊರೆಯುತ್ತಿಲ್ಲ. ಹೀಗಾಗಿ ಮನುಷ್ಯನ ಆರೋಗ್ಯ ಕೂಡ ದಿನೇ ದಿನೇ ಕ್ಷೀಣಿಸುತ್ತಿರುವುದು ವಿಪರ್ಯಾಸವೇ ಸರಿ.

ಇದು ZERO CHEMICAL ಸಾವಯವ ಕಬ್ಬು-160 ಟನ್ ಇಳುವರಿ..!

ಕಬ್ಬು ನಮ್ಮ ರಾಜ್ಯದ ಪ್ರಮುಖ ವಾಣಿಜ್ಯ ಬೆಳೆ. ಮಂಡ್ಯ, ಮೈಸೂರು, ಚಾಮರಾಜನಗರ, ಉತ್ತರ ಕರ್ನಾಟಕದ ಹಲವು ಭಾಗಗಳನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಆದರೆ ಎಷ್ಟೋ ರೈತರಿಗೆ ಕಬ್ಬು ಬೆಳೆಗೆ ನೀರು ನಿರ್ವಹಣೆ ಮಾಡುವುದೆ ದೊಡ್ಡ ತಲೆನೋವು. ಅದರ ಜತೆಗೆ ಗೊಣ್ಣೆ ಹುಳುವಿನ ತೊಂದರೆ, ಇನ್ನು ಹಲವಾರು ಸಮಸ್ಯೆಗಳನ್ನು ಅನುಭವಿಸಿ ಇಳುವರಿಯಲ್ಲಿ ಎಕರೆಗೆ ಕೇವಲ 30 ರಿಂದ 40 ಟನ್ ಪಡೆಯೋದು ಕಷ್ಟವಾಗಿರುತ್ತೆ. ಹೀಗಾಗಿ ನಿರೀಕ್ಷಿತ ಲಾಭ ಗಗನ ಕುಸುಮವಾಗಿದೆ.

ಸಾವಯವ ಕೃಷಿಯಲ್ಲಿ ಬದನೆ ಬೆಳೆ: ಏನು ಲಾಭ?

       ಮೈಸೂರು ಜಿಲ್ಲೆ HD ಕೋಟೆ ತಾಲ್ಲೂಕಿನ ಕಂಚಮಳ್ಳಿ ಗ್ರಾಮದ ರೈತ ಮಧು 5 ಎಕರೆ ಜಮೀನಿನ ಮಾಲೀಕರು. 1 ಎಕರೆಯಲ್ಲಿ ಬದನೆಕಾಯಿ ಬೆಳೆದಿದ್ದಾರೆ. ವಿಶೇಷವೆಂದರೆ ಇವರು ಸಾವಯವ ಕೃಷಿ ಪದ್ಧತಿಯಲ್ಲಿ ಬದನೆ ಬೆಳೆದಿದ್ದಾರೆ. ಯಾವುದೇ ರಾಸಾಯನಿಕಗಳನ್ನು ಬಳಸದೇ ನಾಟಿ ಹಸುವಿನ ಗಂಜಲ ಮತ್ತು ಬೇವಿನೆಣ್ಣೆ ಬಳಸಿ ಕೀಟಗಳ ನಿರ್ವಹಣೆ ಮಾಡುತ್ತಿದ್ದಾರೆ.

ಇವರ ಕಡಲೆ ಬೆಳೆ ಕಂಡು 200 ಎಕರೆಯಲ್ಲಿ ರೈತರು ಮಾಡಿದ್ದೇನು ಗೊತ್ತಾ..?

ಕಡಲೆ ದ್ವಿದಳ ಧಾನ್ಯಗಳ ಪೈಕಿ ಪ್ರಮುಖ ಬೆಳೆಯಾಗಿದ್ದು, ಉತ್ತಮ ತೇವಾಂಶದ ಪರಿಸ್ಥಿತಿಯಲ್ಲಿ ಚೆನ್ನಾಗಿ ಬೆಳೆಯುತ್ತದೆ. ಕಡಲೆ ಬೆಳೆಯಲು ಸೂಕ್ತವಾದ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ನಿಂದ 30 ಡಿಗ್ರಿ ಸೆಲ್ಸಿಯಸ್. ಕಡಲೆ ಬೆಳೆಯನ್ನು ವಿವಿಧ ಬಗೆಯ ಮಣ್ಣಿನಲ್ಲಿ ಬೆಳೆಯಬಹುದು. ಆದರೆ ಮರಳು ಮಿಶ್ರಿತ ಕಲಸು ಮಣ್ಣು, ಜೇಡಿ ಮಣ್ಣು ಈ ಬೆಳೆಗೆ ಸೂಕ್ತವಾಗಿರುತ್ತೆ. ಮಣ್ಣಿನಲ್ಲಿ ರಸಸಾರ 5 ರಿಂದ 7ರಷ್ಟು ಇದ್ದರೆ ಬೆಳೆ ಬೆಳೆಯಲು ಸಾಧ್ಯವಾಗುತ್ತದೆ.     

ಒಂದು ಮರದಿಂದ 400-500 ಎಳನೀರು: ಹೀಗೆ ಮಾಡಿದರೆ ನಿಮಗೂ ಸಾಧ್ಯ

       ಸಾವಯವ ಕೃಷಿಯನ್ನು ಅನುಸರಿಸಿದರೆ ಕೃಷಿಕರಿಗೆ ಹಲವು ಲಾಭಗಳಿವೆ. ಮಣ್ಣಿನ ಫಲವತ್ತತೆ ಹೆಚ್ಚುತ್ತೆ, ಅಧಿಕ ಇಳುವರಿ ಸಿಗುತ್ತೆ, ಹೀಗೆ ಇದರ ಪ್ರಯೋಜನಗಳು ಹಲವು. ಎಳನೀರು ವ್ಯಾಪಾರಿಯೂ ಆದ ಈ ಸಾವಯವ ಕೃಷಿಕರು, ತಮ್ಮ ತೆಂಗಿನ ತೋಟದಲ್ಲಿ ಬಹಳ ವ್ಯತ್ಯಾಸ ಕಂಡಿದ್ದಾರೆ. ರಾಸಾಯನಿಕ ಬಳಸುತ್ತಿದ್ದಾಗ ಇದ್ದ ಸಮಸ್ಯೆಗಳು ಕಾಣೆಯಾಗಿವೆ. ವರ್ಷಕ್ಕೆ ಒಂದು ಮರದಲ್ಲಿ 480 ರಿಂದ 500 ತೆಂಗಿನ ಕಾಯಿಯನ್ನು ಪಡೆಯುತ್ತಿದ್ದಾರೆ.

ತೆಂಗು, ಅಡಿಕೆ ಒಟ್ಟಿಗೆ ಬೆಳೆಯಬಹುದಾ?

       ಅಡಿಕೆ ಮತ್ತು ತೆಂಗು ಉತ್ತಮ ಆದಾಯ ಕೊಡುವ ಎರಡು ತೋಟಗಾರಿಕೆ ಬೆಳೆಗಳು. ಹಲವು ಕಡೆ ಇವನ್ನು ಒಟ್ಟಿಗೆ ಬೆಳೆಯುವುದನ್ನು ನೋಡಿದ್ದೇವೆ. ಇವೆರಡರಲ್ಲಿ ಒಂದನ್ನು ಮುಖ್ಯ ಬೆಳೆಯಾಗಿ, ಮತ್ತೊಂದನ್ನು ಅಲ್ಪ ಪ್ರಮಾಣದಲ್ಲಿ ಬೆಳೆಯುತ್ತಾರೆ. ಹೀಗೆ ರೈತರು ಅಡಿಕೆ ಮತ್ತು ತೆಂಗು ಎರಡನ್ನೂ ಒಟ್ಟಿಗೆ ಬೆಳೆಯುವ ವಾಡಿಕೆ ಇದೆ. ಆದರೆ ಹೀಗೆ ಬೆಳೆಯಬಹುದಾ? ಇದರಿಂದ ಆಗುವ ಅಡ್ಡ ಪರಿಣಾಮಗಳೇನು? ತೆಂಗು, ಅಡಿಕೆ ಜೊತೆ ಯಾವ ಬೆಳೆಗಳನ್ನು ಬೆಳೆದರೆ ಉತ್ತಮ?

ಕಲ್ಲುಗಾಡಿನಂತಿರುವ ಪ್ರದೇಶದಲ್ಲಿ ಯಶಸ್ವಿ ಅಡಿಕೆ ತೋಟ

       ಸಾಮಾನ್ಯ ಜಮೀನಿನಲ್ಲೇ ಕೃಷಿ ಮಾಡಲು ಒದ್ದಾಡುವ ಈಗಿನ ರೈತರ ಮಧ್ಯೆ ಇಲ್ಲೊಬ್ಬ ರೈತರು ಕಲ್ಲುಗಾಡಿನಂತಿರುವ ಬೆಟ್ಟದ ಪ್ರದೇಶದಲ್ಲಿ ಅಡಿಕೆ, ಕಾಫಿ ಬೆಳೆದು ಕೃಷಿ ಮಾಡುತ್ತಿದ್ದಾರೆ. ರೋಗಗಳಿಂದ ಕಾಡಿದರೂ ಸಾವಯವ ಕೃಷಿ ಪದ್ಧತಿಯಿಂದ ತೋಟ ನಿರ್ವಹಣೆ ಮಾಡಿ ಯಶಸ್ವಿಯಾಗಿದ್ದಾರೆ. ಇಂತಹ ಪ್ರದೇಶದಲ್ಲಿ ಕೃಷಿ ಮಾಡುತ್ತಿರುವ ರೈತ ಅನುಭವ ಏನು? ಇವರು ನಿರ್ವಹಣೆ ಹೇಗೆ ಮಾಡುತ್ತಿದ್ದಾರೆ ಬನ್ನಿ ನೋಡೋಣ.

ಕೆ.ಜಿಗೆ 750-850 ರೂ. ಬೆಲೆ ಇರುವ ಲವಂಗ ಬೆಳೆಯುವುದು ಹೇಗೆ?

       ಲವಂಗವು ವಿಶ್ವದಾದ್ಯಂತ ಒಂದು ಪ್ರಖ್ಯಾತ ಮಸಾಲೆ ಪದಾರ್ಥವಾಗಿದ್ದು, ಶತಶತಮಾನಗಳಿಂದಲೂ ಅಡುಗೆ ಮತ್ತು ಸಾಂಪ್ರದಾಯಿಕ ಔಷಧದಲ್ಲಿ ಇದನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ಈ ಬೆಳೆ ಇಂಡೋನೇಷ್ಯಾದ ಮೊಲುಕ್ಕಾಸ್ ಅಥವಾ ಸ್ಪೈಸ್ ದ್ವೀಪಗಳಿಗೆ ಸ್ಥಳೀಯವಾಗಿದೆ. ಆದರೆ ಈಗ ಭಾರತ, ಶ್ರೀಲಂಕಾ, ಮಡಗಾಸ್ಕರ್ ಮತ್ತು ಜಾಂಜಿಬಾರ್ ಸೇರಿದಂತೆ ಉಷ್ಣವಲಯದ ಹಲವಾರು ದೇಶಗಳಲ್ಲಿ ಬೆಳೆಯಲಾಗುತ್ತದೆ. ಅಧಿಕ ಪರಿಮಳ ಮತ್ತು ರುಚಿಯಲ್ಲಿ ಗಾಢತೆಯನ್ನು ಹೊಂದಿರುವ ಲವಂಗವನ್ನು ಅನೇಕ ಆಹಾರಗಳಲ್ಲಿ, ವಿಶೇಷವಾಗಿ ಮಾಂಸ ಮತ್ತು ಬೇಕರಿ ಉತ್ಪನ್ನಗಳಲ್ಲಿಯೂ ಹೆಚ್ಚಾಗಿ ಬಳಸಲಾಗುತ್ತದೆ. ಲವಂಗ ಬೆಳೆಯುವುದರಿಂದ ರೈತರು ಉತ್ತಮ ಆದಾಯ ಗಳಿಸುವ ಸಾಧ್ಯತೆ ಇದೆ. ಹಾಗಾದರೆ ಇದನ್ನು ಬೆಳೆಯುವ ರೀತಿ ಹೇಗೆ? ವಾತಾವರಣ ಹೇಗಿರಬೇಕು?

ಕೃಷಿ ಭೂಮಿಯ ವೈಜ್ಞಾನಿಕ, ನೈಸರ್ಗಿಕ ಸಿದ್ಧತೆ ಹೇಗೆ?

       ಯಾವುದೇ ಬೆಳೆ ಬೆಳೆಯಲು ಭೂಮಿ ಸಿದ್ಧತೆ ತುಂಬಾ ಮುಖ್ಯ. ಕೃಷಿಯಲ್ಲಿ ಬೆಳೆಗಳ ಯಶಸ್ಸನ್ನು ಖಚಿತಪಡಿಸಿಕೊಳ್ಳಲು ಮತ್ತು ಇಳುವರಿಯನ್ನು ಹೆಚ್ಚಿಸಲು ಭೂಮಿಯನ್ನು ಸಿದ್ಧಪಡಿಸುವುದು ಒಂದು ಅತ್ಯಗತ್ಯ ಹಂತ. ಆದರೆ ಕೇವಲ ಉಳುಮೆ ಮಾಡಿ ಭೂಮಿ ಸಿದ್ಧತೆ ಎನ್ನುವುದು ತಪ್ಪು. ಭೂಮಿ ಸಿದ್ಧತೆ ಅಂದರೇನು? ಅದರ ಮಹತ್ವ ಏನು? ಭೂಮಿ ಸಿದ್ಧತೆ ಮಾಡುವ ರೀತಿ ಹೇಗೆ? ಭೂಮಿ ಸಿದ್ಧತೆ ಮಾಡುವುದರ ಬಗ್ಗೆ ನಾಡಿನ ಖ್ಯಾತ ಸಾವಯವ ಕೃಷಿ ತಜ್ಞರಾದ ಡಾ. ಕೆ ಆರ್ ಹುಲ್ಲುನಾಚೇಗೌಡರು ಏನು ಹೇಳುತ್ತಾರೆ? ನೋಡೋಣ ಬನ್ನಿ.

|< 1  2   3   4   5 ...>|
Home    |   About Us    |   Contact
microbi.tv | Website Promotion report | Ocat™ Web Promotion Services in India | Powered by Ocat